ನಾಗ್ಪುರ(ಮಹಾರಾಷ್ಟ್ರ): ಚೀನಾದಿಂದ ಭಾರತಕ್ಕೆ ತನ್ನ ಬಂಡವಾಳವನ್ನು ವರ್ಗಾಯಿಸಲು ಅಮೆರಿಕ ಆಸಕ್ತಿ ತೋರಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ವಿಶ್ವೇಶ್ವರಯ್ಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ 19 ನೇ ಘಟಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕೇವಲ ಎಂಟು ದಿನಗಳ ಹಿಂದೆ ನಡೆದ ಸಭೆಯಲ್ಲಿ, ಭಾರತದಲ್ಲಿನ ಯುಎಸ್ ರಾಯಭಾರಿ ನನಗೆ ಯುಎಸ್ ತನ್ನ ಬಂಡವಾಳವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಆಸಕ್ತಿ ಹೊಂದಿದೆ ಎಂದು ಹೇಳಿದರು.
ಅವರು ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ತಮ್ಮ ತಂತ್ರಜ್ಞಾನ ಮತ್ತು ಬಂಡವಾಳವನ್ನು ಬೆಂಬಲಿಸಲು ಬಯಸುತ್ತಾರೆ ಎಂದು ಸಚಿವರು ಹೇಳಿದರು.
"ಭಾರತೀಯರ ಬೌದ್ಧಿಕ ಸಾಮರ್ಥ್ಯವನ್ನು ಇಡೀ ವಿಶ್ವದಲ್ಲಿ ಚೆನ್ನಾಗಿ ಗುರುತಿಸಲಾಗಿದೆ ಮತ್ತು ಪ್ರಶಂಸಿಸಲಾಗಿದೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ," ಎಂದು ಗಡ್ಕರಿ ಹೇಳಿದ್ರು.
ಇದನ್ನೂ ಓದಿ:ಲಸಿಕೆ ನಂತರವೂ 23 ಸಾವಿರ ಮಂದಿಗೆ ತಗುಲಿದ ಕೊರೊನಾ!
ನಾವು 'ಆತ್ಮನಿರ್ಭರ್' ಉಪಕ್ರಮದ ಅಡಿ ಯುವಕರನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಬೆಂಬಲಿಸುತ್ತಿದ್ದೇವೆ, 'ಆತ್ಮ ನಿರ್ಭರ ಭಾರತ್', 'ಮೇಕ್ ಇನ್ ಇಂಡಿಯಾ', 'ಸ್ಟಾರ್ಟ್ ಅಪ್ ಇಂಡಿಯಾ' ನಂತಹ ಪೂರ್ವಭಾವಿ ಯೋಜನೆಗಳು ಯುವಕರನ್ನು ತಮ್ಮ ನವೀನ ಆಲೋಚನೆಗಳು ಮತ್ತು ಪರಿಕಲ್ಪನೆಗಳ ಮೂಲಕ ರಾಷ್ಟ್ರವನ್ನು ಪರಿವರ್ತಿಸಲು ಪ್ರೋತ್ಸಾಹಿಸುತ್ತಿದೆ, "ಎಂದು ಗಡ್ಕರಿ ಹೇಳಿದರು.
ಇನ್ನು ದೇಶದ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಗಡ್ಕರಿ, ಗುಡ್ಡಗಾಡು ಪ್ರದೇಶಗಳಲ್ಲಿ ಸೇಬು ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಬಿನೆಟ್ ಸಭೆಯಲ್ಲಿ ನನಗೆ ಸೂಚಿಸಿದರು ಎಂದು ತಿಳಿಸಿದ್ರು.
ಡ್ರೋನ್ ತಂತ್ರಜ್ಞಾನದ ವಿಕಾಸದ ಬಗ್ಗೆ ಪ್ರತಿಬಿಂಬಿಸಿದ ಗಡ್ಕರಿ, "ನಾವು ಈಗ ಆಟೋಮೊಬೈಲ್ ಮತ್ತು ತಂತ್ರಜ್ಞಾನಕ್ಕಾಗಿ ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿದ್ದೇವೆ. ಡ್ರೋನ್ ತಂತ್ರಜ್ಞಾನವು ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದು, ಕೀಟನಾಶಕಗಳನ್ನು ಸಿಂಪಡಿಸಲು ಕೃಷಿಯಲ್ಲಿ ಡ್ರೋನ್‌ಗಳನ್ನು ಬಳಸುತ್ತಿದ್ದೇವೆ ಎಂದರು.
ಇದನ್ನು ಕೃಷಿ ಮತ್ತು ಸಾರಿಗೆಗೂ ಬಳಸಬಹುದು ಎಂದು ಗಡ್ಕರಿ ಹೇಳಿದರು. ನಾವು ವಿದೇಶದಿಂದ ಹೂಡಿಕೆದಾರರನ್ನು ಆಹ್ವಾನಿಸುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದ್ರು.