ಹೈದರಾಬಾದ್: ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ವ್ಯಾಕ್ಸಿನ್ ಪಡೆದ ಜನರಿಗಾಗಿ (ಐಎಎನ್‌ಎಸ್) ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ತನ್ನ ಮೊದಲ ಶಿಫಾರಸುಗಳನ್ನು ನೀಡಿದ್ದು, ಇದು ಸಾರ್ವಜನಿಕ ಜೀವನದಲ್ಲಿ ಜನರು ಅನುಭವಿಸಿದ್ದ ಕಠಿಣ ಕೊರೊನಾ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದೆ.
'ಸಿಡಿಸಿ'ಯ ಶಿಫಾರಸ್ಸುಗಳು
- ವ್ಯಾಕ್ಸಿನ್ ಪಡೆದ ಜನರು ಯಾವುದೇ ಮಾಸ್ಕ್ಗಳನ್ನು ಧರಿಸದೆ ಹಾಗೂ 6 ಅಡಿ ಅಂತರದಲ್ಲಿ ಉಳಿಯದೆ, ಮನೆಯೊಳಗೆ ಸಂಪೂರ್ಣ ಲಸಿಕೆ ಹಾಕಿದ ಇತರರೊಂದಿಗೂ ಸಂಪರ್ಕದಲ್ಲಿರಬಹುದು ಎಂದು ತಿಳಿಸಿದೆ.
- ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಮಾಸ್ಕ್ ಧರಿಸದೆ ಅಥವಾ ಮನೆಯೊಳಗಿನ ಸದಸ್ಯರು ತೀವ್ರ ಕಾಯಿಲೆಗೆ ಒಳಗಾಗಿ ಕಡಿಮೆ ಅಪಾಯದಲ್ಲಿದ್ದರೂ ಕೂಡಾ 6 ಅಡಿ ಅಂತರವನ್ನು ಕಾಯ್ದುಕೊಳ್ಳದೆ ಇರಬಹುದು ಹಾಗೂ ಇತರರನ್ನೂ ಸಂಪರ್ಕಿಸಬಹುದು ಎಂದು ಸಿಡಿಸಿ ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
- ಈ ನಡುವೆ, ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿಲ್ಲದಿದ್ದರೆ, ಅಂತವರು ಸಂಪರ್ಕತಡೆ ಹಾಗೂ ಕೋವಿಡ್ ಪರೀಕ್ಷೆಯಿಂದ ದೂರವಿರಬಹುದು ಎಂದಿದೆ.
- ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಈಗ ತಮ್ಮ ಸ್ವಂತ ಮನೆಗಳಲ್ಲಿ ಪುನರಾರಂಭಿಸಲು ಪ್ರಾರಂಭಿಸುವ ಕೆಲವು ಚಟುವಟಿಕೆಗಳಿವೆ. ಪ್ರತಿಯೊಬ್ಬರೂ, ಅಂದರೆ ಲಸಿಕೆ ಹಾಕಿದವರು ಕೂಡಾ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ನಿಗದಿಯಾದ ನಿಯಮಗಳನ್ನು ಪಾಲಿಸುತ್ತಾ ಮುಂದುವರೆಯಬೇಕು ಎಂದು ಸಿಡಿಸಿ ನಿರ್ದೇಶಕ ರೋಚೆಲ್ ವಾಲೆನ್ಸ್ಕಿ ತಿಳಿಸಿದ್ದಾರೆ.
- ವಿಜ್ಞಾನವು ವಿಕಸನಗೊಳ್ಳುತ್ತಿರುವುದರ ಜೊತೆಗೆ ಹೆಚ್ಚಿನ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಾಗಿ, ಈಗಾಗಲೇ ಲಸಿಕೆ ಹಾಕಿಸಿಕೊಂಡ ಜನರು ಸುರಕ್ಷಿತವಾಗಿ ಹೆಚ್ಚಿನ ಚಟುವಟಿಕೆಗಳನ್ನು ಪುನರಾರಂಭಿಸುವಂತೆ ಮಾರ್ಗದರ್ಶನ ನೀಡುತ್ತೇವೆ ಎಂದಿದ್ದಾರೆ.
- ಸಿಡಿಸಿ ಪ್ರಕಾರ, ಲಸಿಕೆ ಪಡೆದ ಜನರಿಗೆ ಲಕ್ಷಣರಹಿತ ಸೋಂಕು ಹರಡುವ ಸಾಧ್ಯತೆ ಕಡಿಮೆಯಿರುತ್ತದೆ ಮತ್ತು ಕೋವಿಡ್ -19 ಗೆ ಕಾರಣವಾಗುವ SARS-CoV-2 ಎಂಬ ವೈರಸ್ ಅನ್ನು ಇತರ ಜನರಿಗೆ ಹರಡುವ ಸಾಧ್ಯತೆ ಕಡಿಮೆ ಎಂಬುದರ ಕುರಿತ ವೈಜ್ಞಾನಿಕ ಸಾಕ್ಷಿಗಳಿವೆ ಎಂದಿದೆ.
- ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಸಾಂಕ್ರಾಮಿಕ ರೋಗವನ್ನು ಹತ್ತಿರಕ್ಕೆ ಬಾರದಂತೆ ತಡೆಯಲು ನೆರವಾಗುವ (ಎಫ್‌ಡಿಎ)-ಅಧಿಕೃತ ಕೋವಿಡ್ -19 ಲಸಿಕೆಯನ್ನು ಪಡೆಯಲು ಸಂಸ್ಥೆ ಜನರನ್ನು ಪ್ರೋತ್ಸಾಹಿಸುತ್ತದೆ.
ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಯುಎಸ್ನಲ್ಲಿ ತುರ್ತು ಬಳಕೆಗಾಗಿ ಪ್ರಸ್ತುತ ಮೂರು ಲಸಿಕೆಗಳನ್ನು ಅಧಿಕೃತಗೊಳಿಸಿದೆ.
- ಜರ್ಮನ್ ಕಂಪನಿ ಬಯೋಟೆಕ್ ಸಹಭಾಗಿತ್ವದಲ್ಲಿ ಅಮೆರಿಕನ್ ಔಷಧಿ ತಯಾರಕ ಫಿಜರ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಎಫ್‌ಡಿಎ ಅಧಿಕೃತಗೊಳಿಸಿದ್ದು, ಅಮೆರಿಕಾದ ಔಷಧ ತಯಾರಕ ಮೊಡೆರ್ನಾ ಕಂಪನಿಯ ಲಸಿಕೆಯನ್ನು ಡಿಸೆಂಬರ್ 2020 ರಲ್ಲಿ ಅಧಿಕೃತಗೊಳಿಸಿದೆ.
- ಫೆಬ್ರವರಿ 27 ರಂದು ಜಾನ್ಸನ್ ಮತ್ತು ಜಾನ್ಸನ್‌ರ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿತ್ತು. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಕೆಯ ಹಕ್ಕನ್ನು ಪಡೆದ ಲಸಿಕೆಯ ಮೊದಲ ಡೋಸ್ ಆಗಿದೆ.
ಕೋವಿಡ್ -19 ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಮೊದಲು ಎಲ್ಲರಿಗೂ ಲಸಿಕೆ ನೀಡಲೇಬೇಕಾಗಿದೆ. ಅಲ್ಲಿಯವರೆಗೆ, ಲಸಿಕೆ ಪಡೆಯದ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸಿಡಿಸಿ ಹೇಳಿದೆ.
ಇಲ್ಲಿಯವರೆಗೆ ಯುಎಸ್ನಾದ್ಯಂತ 116 ಮಿಲಿಯನ್ ಲಸಿಕೆಗಳನ್ನು ವಿತರಿಸಲಾಗಿದೆ ಮತ್ತು ಇದುವರೆಗೂ 92 ದಶಲಕ್ಷಕ್ಕೂ ಹೆಚ್ಚಿನ ಲಸಿಕೆಯನ್ನು ನೀಡಲಾಗಿದೆ. ಯುಎಸ್ ಜನಸಂಖ್ಯೆಯ ಕೇವಲ 9.2 ಪ್ರತಿಶತದಷ್ಟು ಜನರಿಗೆ ಕೋವಿಡ್ -19 ಲಸಿಕೆಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಸಿಡಿಸಿ ಅಂದಾಜಿಸಿದೆ.