ಕೀವ್: ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಅಮೆರಿಕಾ ಶಾಂತಿಯ ಮಾತನಾಡಿದೆ. ಅಲ್ಲದೇ, ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸದಿದ್ದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಚರ್ಚಿಸಲು ಒಪ್ಪಿಗೆ ಸೂಚಿಸಿದ್ದಾರೆ.
-
US President Joe Biden agrees to meet with Russian President Vladimir Putin 'in principle' if an invasion hasn't happened: Jen Psaki, Press Secretary, The White House#Ukraine pic.twitter.com/4gD7W013D9
— ANI (@ANI) February 21, 2022 " class="align-text-top noRightClick twitterSection" data="
">US President Joe Biden agrees to meet with Russian President Vladimir Putin 'in principle' if an invasion hasn't happened: Jen Psaki, Press Secretary, The White House#Ukraine pic.twitter.com/4gD7W013D9
— ANI (@ANI) February 21, 2022US President Joe Biden agrees to meet with Russian President Vladimir Putin 'in principle' if an invasion hasn't happened: Jen Psaki, Press Secretary, The White House#Ukraine pic.twitter.com/4gD7W013D9
— ANI (@ANI) February 21, 2022
ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಮಾಹಿತಿ ನೀಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲಿಯವರೆಗೆ ರಷ್ಯಾ, ಉಕ್ರೇನ್ ಮೇಲೆ ಸನ್ನಿಹಿತ ದಾಳಿ ನಡೆಸಲಿದೆ ಎಂದೇ ಅಮೆರಿಕಾ ಭಾವಿಸಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕಾ ರಾಜತಾಂತ್ರಿಕ ಮಾತುಕತೆಗೆ ಯಾವಾಗಲೂ ಸಿದ್ಧವಾಗಿದೆ. ರಷ್ಯಾ ಮಾತುಕತೆಯ ಬದಲಿಗೆ ಯುದ್ಧ ಆರಿಸಿಕೊಂಡರೆ, ನಾವು ಅದರ ಮೇಲೆ ತ್ವರಿತ ಮತ್ತು ತೀವ್ರ ಪರಿಣಾಮಗಳನ್ನು ಹೇರಲು ಸಿದ್ಧವಿದ್ದೇವೆ. ರಷ್ಯಾ ಶೀಘ್ರದಲ್ಲೇ ಉಕ್ರೇನ್ ದೇಶದ ಮೇಲೆ ಪೂರ್ಣ ಪ್ರಮಾಣದ ದಾಳಿಗೆ ಸಿದ್ಧತೆಗಳನ್ನು ಭರದಿಂದ ನಡೆಸುತ್ತಿದೆ ಎಂದು ಗೋಚರವಾಗುತ್ತಿದೆ. ಆಕ್ರಮಣ ಆರಂಭವಾಗುವರೆಗೂ ನಾವು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ಈ ಮಧ್ಯೆಯೇ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಗುರುವಾರ ಯುರೋಪಿನಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ರಷ್ಯಾ ಯುದ್ಧ ಸಾರುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿಂದ ತೈವಾನ್ಗೆ 4.82 ಟನ್ ರಕ್ತಚಂದನ ಸಾಗಿಸಲು ಪ್ಲ್ಯಾನ್: ಮೂವರು ಅರೆಸ್ಟ್