ವಾಷಿಂಗ್ಟನ್(ಅಮೆರಿಕ): ಪಾಕಿಸ್ತಾನದೊಂದಿಗೆ ಸಂಪರ್ಕವಿಟ್ಟುಕೊಂಡು ಅಮೆರಿಕದಲ್ಲಿರುವ ಕೆಲವೊಂದು ಸರ್ಕಾರೇತರ ಸಂಸ್ಥೆಗಳು ಭಾರತಕ್ಕೆ ಕೋವಿಡ್ ಬಿಕ್ಕಟ್ಟು ಎದುರಿಸಲು ಸಹಾಯ ಮಾಡುವ ನೆಪದಲ್ಲಿ ಹಣ ಸಂಗ್ರಹಿಸಿ ಆ ಹಣವನ್ನು ಭಾರತದಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಲು ಮತ್ತು ಭಯೋತ್ಪಾದಕ ದಾಳಿಯನ್ನು ಪ್ರಚೋದಿಸಲು ಬಳಸಿಕೊಳ್ಳುತ್ತಿವೆ ಎಂದು ಡಿಸ್ಇನ್ಫೋ ಲ್ಯಾಬ್ (DisInfo Lab) ವರದಿ ಮಾಡಿದೆ.
ಡಿಸ್ಇನ್ಫೋ ಲ್ಯಾಬ್ ಯೂರೋಪಿಯನ್ ಯೂನಿಯನ್ ಮೂಲದ ಸ್ವತಂತ್ರ ಎನ್ಜಿಒ ಆಗಿದ್ದು, 'ಕೋವಿಡ್-19 2021ರ ಹಗರಣ' ಎಂಬ ವರದಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಹಗರಣ ಎಂದು ಈ ವಿಚಾರವನ್ನು ಡಿಸ್ಇನ್ಫೋ ಲ್ಯಾಬ್ ಕರೆದಿದೆ.
'ಹೆಲ್ಪಿಂಗ್ ಇಂಡಿಯಾ ಬ್ರೀಥ್' (Helping India Breathe) ಹೆಸರಿನಲ್ಲಿ ಲಕ್ಷಾಂತರ ಡಾಲರ್ಗಳನ್ನು ಸಂಗ್ರಹ ಮಾಡಲಾಗಿದ್ದು, ಭಾರತದ ಪರವಾಗಿ ಹಲವಾರು ಸಂಘ ಸಂಸ್ಥೆಗಳು ಧನ ಸಹಾಯ ಮಾಡಿದ್ದವು. ಆದರೆ ಈ ಹಣ ಕಾನೂನು ಬಾಹಿರವಾಗಿ ಬಳಕೆಯಾಗುತ್ತಿದೆ ಎಂದು ಡಿಸ್ಇನ್ಫೋ ಲ್ಯಾಬ್ ಬಹಿರಂಗಪಡಿಸಿದೆ.
ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ದರೆ ವಿಜಯ್ ಜೀವ ಉಳಿಯುತ್ತಿತ್ತು: ಶಿವರಾಜ್ಕುಮಾರ್ ಕಂಬನಿ
ಇದೇ ರೀತಿಯಲ್ಲಿ ವಂಚಿಸುವ ಹಲವು ಸಂಸ್ಥೆಗಳ ಹೆಸರು ಹೇಳಿರುವ ಡಿಸ್ಇನ್ಫೋ ಲ್ಯಾಬ್ ಉತ್ತರ ಅಮೆರಿಕ ಇಸ್ಲಾಮಿಕ್ ವೈದ್ಯಕೀಯ ಸಂಘ (ಇಮಾನಾ)ದ ಹೆಸರನ್ನು ಬಹಿರಂಗಪಡಿಸಿದ್ದು, ಈ ಸಂಘವು ಭಯೋತ್ಪಾದಕ ಸಂಘಟನೆಗಳು ಮತ್ತು ಪಾಕ್ ಸೇನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಲಾಗಿದೆ.
66 ಕ್ಯಾಂಪೇನ್, ಲಕ್ಷಾಂತರ ಡಾಲರ್ ಮೋಸ
ಇದು ಇಲಿನಾಯ್ಸ್ ಮೂಲದ ಸಂಘಟನೆಯಾಗಿದ್ದು, ಡಾ. ಇಸ್ಮಾಯಿಲ್ ಮೆಹ್ರ್ ಇದರ ಅಧ್ಯಕ್ಷರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಇಮಾನಾ ಎಂದು ಹೆಸರು ಬದಲಾವಣೆ ಮಾಡಿಕೊಂಡಿತ್ತು. ಏಪ್ರಿಲ್ 27 ರಂದು ಬ್ರೀದ್ ಇಂಡಿಯಾ ಕ್ಯಾಂಪೇನ್ ಆರಂಭಿಸಿ, ಲಕ್ಷಾಂತರ ಡಾಲರ್ ನೆರವು ಪಡೆದುಕೊಂಡಿದ್ದು, ಅದು ನೀಡುವ ಅಂಕಿ ಅಂಶಗಳು ಪಾರದರ್ಶಕವಾಗಿಲ್ಲ ಎಂದು ಡಿಸ್ ಇನ್ಫೋ ಲ್ಯಾಬ್ ಹೇಳಿದೆ.
ಡಾ. ಇಸ್ಮಾಯಿಲ್ ಮೆಹ್ರ್ ಅವರು ಮೇ 7 ರದು 80 ಸಾವಿರ ಅಮೆರಿಕನ್ ಡಾಲರ್ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಅವುಗಳು ಇನ್ನೂ ಭಾರತವನ್ನು ತಲುಪಲಿಲ್ಲ. ಇದೇ ರೀತಿ ಸುಮಾರು 66 ಕ್ಯಾಂಪೇನ್ಗಳು ನಡೆದಿವೆ ಎಂದು ಡಿಸ್ ಇನ್ಫೋಲ್ಯಾಬ್ ವರದಿಯಲ್ಲಿ ಹೇಳಿದೆ.