ETV Bharat / bharat

UPSC Recruitment: ಇಂಜಿನಿಯರಿಂಗ್​ ಸೇವಾ ಪರೀಕ್ಷೆಗೆ ಅಧಿಸೂಚನೆ ಪ್ರಕಟ: 179 ಹುದ್ದೆಗಳಿಗೆ ನೇಮಕಾತಿ - 167 ಹುದ್ದೆಗಳ ಭರ್ತಿಗೆ ಅರ್ಜಿ

ಯುಪಿಎಸ್​ಸಿ ಅಡಿ ನಡೆಸಲಾಗುವ ಇಎಸ್​ಇ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.

upsc-notification-recruitment-for-engineering-service-exam

author img

By ETV Bharat Karnataka Team

Published : Sep 8, 2023, 5:14 PM IST

ಕೇಂದ್ರ ಲೋಕ ಸೇವಾ ಆಯೋಗದಿಂದ (UPSC) ಇಂಜಿನಿಯರಿಂಗ್​ ಸರ್ವೀಸ್​ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 167 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿವಿಲ್​, ಮೆಕಾನಿಕಲ್​, ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್​​ ಇಂಜಿನಿಯರಿಂಗ್​ ಹುದ್ದೆ ಭರ್ತಿಗೆ ನಡೆಸಲಾಗುವುದು ಗ್ರೂಪ್​ ಎ ಮತ್ತು ಬಿ ಮಟ್ಟದ ಹುದ್ದೆ ಇದಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ : ಸಿವಿಲ್​ ಇಂಜಿನಿಯರಿಂಗ್​ ಪರೀಕ್ಷೆಯಲ್ಲಿ ವಿವಿಧ ಇಲಾಖೆಗೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಒಟ್ಟು 167 ಹುದ್ದೆ ಭರ್ತಿ ಮಾಡಲಾಗುವುದು

ವಿದ್ಯಾರ್ಹತೆ: ಅಭ್ಯರ್ಥಿಗಳು ಸಿವಿಲ್​, ಮೆಕಾನಿಕಲ್​, ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಮತ್ತು ಟೆಲಿ ಕಮ್ಯೂನಿಕೇಷನ್​ ವಿಷಯದಲ್ಲಿ ಬಿಇ ಪದವಿ ಅಥವಾ ಡಿಪ್ಲೋಮಾ ಪದವಿಯನ್ನು ಹೊಂದಿರಬೇಕು.

ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷ ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳಾ, ಎಸ್​ಸಿ, ಎಸ್​ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ. ಅಭ್ಯರ್ಥಿಗಳು ಒಟಿಆರ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ಮುಂದುವರೆಯಬೇಕು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಪ್ರಿಲಿಮ್ಸ್​, ಮೇನ್ಸ್​ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು.

ಈ ಹುದ್ದೆಗಳಿಗೆ ದೇಶದ ವಿವಿಧ ರಾಜ್ಯದ ಪ್ರಮುಖ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಸಲಾಗಿದ್ದು, ಕರ್ನಾಟಕ ಅಭ್ಯರ್ಥಿಗಳು ಬೆಂಗಳೂರು ಕ್ಷೇತ್ರದಲ್ಲಿ ಪರೀಕ್ಷೆ ಎದುರಿಸಬಹುದಾಗಿದೆ. ನಕಾರಾತ್ಮಕ ಉತ್ತರಗಳಿಗೆ ಅಂಕ ಕಡಿತ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭ ಸೆಪ್ಟೆಂಬರ್​ 6ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 26 ಆಗಿದೆ. ಈ ಪರೀಕ್ಷೆಯ ಪ್ರಿಲಿಮ್ಸ್​ ಫೆಬ್ರವರಿ 18ರಂದು ನಡೆಸುವ ಸಾಧ್ಯತೆ ಇದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು upsc.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: Job Alert! ಎಸ್‌ಬಿಐನಿಂದ 2,000 ಪಿಒ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.