ETV Bharat / bharat

ತಂದೆ ಕೈಗಾಡಿಯಲ್ಲಿ ಚಾಟ್ ಮಾರಾಟ: ಯುಪಿಎಸ್​​​ಸಿಯಲ್ಲಿ 93ನೇ ರ‍್ಯಾಂಕ್ ಪಡೆದ ಮಗಳು - ಯುಪಿಎಸ್​​ಸಿ 2021

ಕಡುಬಡತನದ ಮಧ್ಯೆ ಕೂಡ ಯುವತಿಯೊಬ್ಬಳು ಯುಪಿಎಸ್​​ಸಿ ಪರೀಕ್ಷೆ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದು, 93ನೇ ರ‍್ಯಾಂಕ್ ಪಡೆದುಕೊಂಡು ಇದೀಗ ಐಎಎಸ್​ ಆಗಲು ಸಜ್ಜಾಗಿದ್ದಾರೆ.

DEEPESH KUMARI UPSC
DEEPESH KUMARI UPSC
author img

By

Published : Jun 2, 2022, 3:15 PM IST

ಭರತ್​​ಪುರ್​(ರಾಜಸ್ಥಾನ): ಕಳೆದ ಕೆಲ ದಿನಗಳ ಹಿಂದೆ ಪ್ರಕಟಗೊಂಡಿರುವ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅನೇಕ ತೆರೆ ಮರೆಯ ಪ್ರತಿಭೆಗಳು ಪಾಸ್ ಆಗುವ ಮೂಲಕ ಜನಪ್ರಿಯರಾಗಿದ್ದಾರೆ. ಅದರಲ್ಲಿ ರಾಜಸ್ಥಾನದ ಭರತ್​ಪುರ ಜಿಲ್ಲೆಯ ದೀಪೇಶ್ ಕುಮಾರಿ ಕೂಡ ಒಬ್ಬರು. ಇವರ ತಂದೆ ಬೀದಿ ಬದಿ ಕೈಗಾಡಿಯಲ್ಲಿ ಚಾಟ್ ಮಾರುವ ಕೆಲಸ ಮಾಡ್ತಿದ್ದು, ಕಡು ಬಡತನದ ಮಧ್ಯೆ ಕೂಡ ಮಗಳು ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಯುಪಿಎಸ್​​ಸಿಯಲ್ಲಿ 93ನೇ ರ‍್ಯಾಂಕ್‌ ಪಡೆದುಕೊಳ್ಳುವಲ್ಲಿ ದೀಪೇಶ್ ಕುಮಾರಿ ಯಶಸ್ವಿಯಾಗಿದ್ದು, ಕುಟುಂಬದ ಜೊತೆಗೆ ಜಿಲ್ಲೆಯ ಹೆಸರು ಉಜ್ವಲಗೊಳಿಸಿದ್ದಾರೆ.

ದೀಪೇಶ್ ಕುಮಾರಿ ತಂದೆ ಗೋವಿಂದ್ ಪ್ರಸಾದ್​ ಬೀದಿ ಬದಿ ತಿಂಡಿ ಮಾರಾಟ ಮಾಡುವ ಮೂಲಕ ಕುಟುಂಬ ನಿರ್ವಹಿಸುತ್ತಿದ್ದಾರೆ. ಕಡು ಬಡತನದ ಮಧ್ಯೆ ಕೂಡ ತಮ್ಮ ಮಕ್ಕಳಿಗೆ ಸಾಕಷ್ಟು ಶಿಕ್ಷಣ ಕೊಡಿಸಿದ್ದಾರೆ. ಇದೀಗ ಹಿರಿಯ ಮಗಳು ದೀಪೇಶ್ ಕುಮಾರಿ ಐಎಎಸ್​ ಅಗುವುದು ಖಚಿತವಾಗಿದ್ದು, ಉಳಿದ ಓರ್ವ ತಂಗಿ ಹಾಗೂ ಇಬ್ಬರು ಸಹೋದರರು ಎಂಬಿಬಿಎಸ್ ಮಾಡ್ತಿದ್ದಾರೆ. ಮಗಳು ಯುಪಿಎಸ್​​ಸಿ ಪರೀಕ್ಷೆ ಪಾಸ್ ಮಾಡಿರುವ ನಂತರ ಸಹ ಗೋವಿಂದ್ ಕೈಗಾಡಿಯಲ್ಲಿ ಚಾಟ್ ಮಾರಾಟ ಮಾಡ್ತಿದ್ದಾರೆ.

DEEPESH KUMARI FATHER
ತಂದೆ ಕೈಗಾಡಿಯಲ್ಲಿ ಚಾಟ್ ಮಾರಾಟ

ಇದನ್ನೂ ಓದಿ: ಭ್ರಷ್ಟಾಚಾರ ಬಯಲಿಗೆಳೆದು, ದುಷ್ಕರ್ಮಿಗಳಿಂದ 7 ಗುಂಡೇಟು ತಿಂದಿದ್ದ ರಿಂಕು ಸಿಂಗ್​​ ಯುಪಿಎಸ್​ಸಿ ಪಾಸ್​​

ಕಡು ಬಡತನದ ಮಧ್ಯೆ ತಂದೆ ಉತ್ತಮ ಶಿಕ್ಷಣ ಕೊಡಿಸಿದ್ದರಿಂದ ಇದೀಗ ಇಂತಹ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಯಿತು. ಜೊತೆಗೆ ವಿದ್ಯಾರ್ಥಿ ವೇತನ ಪಡೆದುಕೊಂಡು ಅಧ್ಯಯನ ಮಾಡಿದ್ದೇನೆಂದು ದೀಪೇಶ್ ಕುಮಾರಿ ಹೇಳಿಕೊಂಡಿದ್ದಾರೆ. 12ನೇ ತರಗತಿವರೆಗೆ ಭರತ್​ಪುರ ಖಾಸಗಿ ಶಾಲೆವೊಂದರಲ್ಲಿ ವ್ಯಾಸಂಗ ಮಾಡಿರುವ ದೀಪೇಶ್​, ತದನಂತರ ಜೋಧ್​ಪುರದ ಬಿಟೆಕ್​ ಸಿವಿಲ್​ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಬಿಟೆಕ್​ ಮುಗಿಸಿದ ಬಳಿಕ ಮುಂಬೈನ ಐಐಟಿಯಲ್ಲಿ ಎಂಟೆಕ್​ ಮುಗಿಸಿ, ಖಾಸಗಿ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ. 2019ರಿಂದಲೂ ಯುಪಿಎಸ್​​ಸಿ ಪರೀಕ್ಷೆಗೆ ತಯಾರಿ ನಡೆಸಿದ್ದ ಅವರು, ಮೊದಲ ಪರೀಕ್ಷೆಯಲ್ಲಿ ಸಂದರ್ಶನದ ವೇಳೆ ಫೇಲ್​ ಆಗಿದ್ದರು. ಆದರೆ, ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿ 93ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದೀಪೇಶ್ ಕುಮಾರಿ ಯುಪಿಎಸ್​ಸಿ ಪಾಸ್​ ಆಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಭರತ್​ಪುರದಲ್ಲಿ ಸಂಭ್ರಮ ಮನೆ ಮಾಡಿದ್ದು, ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿಲಾಗಿದೆ. ಜಿಲ್ಲಾಧಿಕಾರಿ ಅಲೋಕ್ ರಂಜನ್ ಕೂಡ ದೀಪೇಶ್ ಕುಮಾರಿ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.