ಪಿಲಿಭಿತ್ (ಉತ್ತರ ಪ್ರದೇಶ): ಮದುವೆಯಾಗುವುದಾಗಿ ನಂಬಿಸಿ ಯೋಧನೋರ್ವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಪಿಲಿಭಿತ್‌ನ ಕೊತ್ವಾಲಿ ಜೆಹಾನಾಬಾದ್‌ನ ಉಸ್ತುವಾರಿ ಇನ್ಸ್‌ಪೆಕ್ಟರ್ ನರೇಶ್ ಕಶ್ಯಪ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಹಿಳೆಯ ದೂರಿನ ಮೇರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನೇಮಕಗೊಂಡಿದ್ದ ಸೇನಾ ಜವಾನ ಪ್ರಕಾಶ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ಘಟನೆಗೆ ಸಂಬಂಧಿಸಿದಂತೆ ಇತರೆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರು ಹೇಳುವಂತೆ, ಕೆಲವು ವರ್ಷಗಳ ಹಿಂದೆ ತಾನು 12 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗ ಮತ್ತು ಬರೇಲಿಯ ಭೂದ್ ಟೌನ್‌ಶಿಪ್‌ನಲ್ಲಿ ಓದುತ್ತಿದ್ದಾಗ ಪ್ರಕಾಶ್ ಸಿಂಗ್ ಪರಿಚಯವಾಗಿತ್ತು. ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡುವ ಮೂಲಕ ಪ್ರಕಾಶ್ ಸಿಂಗ್ ತನ್ನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದ ಎಂದು ಆಕೆ ಹೇಳಿದ್ದಾರೆ.
ಆದರೆ ಪ್ರಕಾಶ್ ಸಿಂಗ್ ಮತ್ತೋರ್ವ ಯುವತಿ ಜತೆ ಮದುವೆಯಾಗುತ್ತಿದ್ದಾರೆ ಅನ್ನೋದು ಇತ್ತೀಚೆಗೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹೆಲ್ಪ್‌ಲೈನ್ ಸಂಖ್ಯೆ 112 ಕ್ಕೆ ಕರೆ ಮಾಡಿ, ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಮಹಿಳೆ ಹೇಳಿದ್ದಾರೆ.
ಪೊಲೀಸರ ಮಧ್ಯಸ್ಥಿಕೆಯೊಂದಿಗೆ ಒಪ್ಪಂದಕ್ಕೆ ಬಂದಿದ್ದು, ಅವರನ್ನು ಮದುವೆಯಾಗುವುದಾಗಿ ಪ್ರಕಾಶ್ ಸಿಂಗ್ ಅವರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಆದರೆ ಭರವಸೆಯ ಹೊರತಾಗಿಯೂ, ಅವನು ತನ್ನನ್ನು ಮದುವೆಯಾಗಲಿಲ್ಲ ಎಂದು ಮಹಿಳೆ ದೂರಿದ್ದಾರೆ.