ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ. ಒಟ್ಟು 403 ವಿಧಾನಸಭೆ ಕ್ಷೇತ್ರಗಳ ಪೈಕಿ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಘೋಷಣೆ ಮಾಡಿದ್ದು, ಈ ಪೈಕಿ ಶೇ. 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪ್ರಮುಖವಾಗಿ, ಕೈ ಪಕ್ಷ 2017ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ದೇವಿಗೆ ಟಿಕೆಟ್ ನೀಡಿದೆ. 125 ಅಭ್ಯರ್ಥಿಗಳ ಪೈಕಿ 50 ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪರ್ಧಿಸಲಿದ್ದು, ಶೇ. 40ರಷ್ಟು ಯುವಕರಿಗೂ ಮಣೆ ಹಾಕಿದೆ.
-
Congress leader Priyanka Gandhi Vadra releases party's first list of 125 candidates for Uttar Pradesh polls
— ANI UP/Uttarakhand (@ANINewsUP) January 13, 2022 " class="align-text-top noRightClick twitterSection" data="
"Out of the total 125 candidates, 40% are women & 40% are the youth. With this historic initiative, we hope to bring in a new kind of politics in the sate," she says pic.twitter.com/qg8pJQrlri
">Congress leader Priyanka Gandhi Vadra releases party's first list of 125 candidates for Uttar Pradesh polls
— ANI UP/Uttarakhand (@ANINewsUP) January 13, 2022
"Out of the total 125 candidates, 40% are women & 40% are the youth. With this historic initiative, we hope to bring in a new kind of politics in the sate," she says pic.twitter.com/qg8pJQrlriCongress leader Priyanka Gandhi Vadra releases party's first list of 125 candidates for Uttar Pradesh polls
— ANI UP/Uttarakhand (@ANINewsUP) January 13, 2022
"Out of the total 125 candidates, 40% are women & 40% are the youth. With this historic initiative, we hope to bring in a new kind of politics in the sate," she says pic.twitter.com/qg8pJQrlri
ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿರುವ ಎಲ್ಲ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದು, ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯಕ್ಕೆ ನಾಂದಿ ಹಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಟಿಕೆಟ್ನಲ್ಲಿ ಉನ್ನಾವೋ ರೇಪ್ ಕೇಸ್, ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆಗೂ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ಪ್ರಮುಖರ ಹೆಸರು ಇಂತಿದೆ:
1. ಲಕ್ನೋ ಸೆಂಟ್ರಲ್ - ಸದಾಫ್ ಜಾಫರ್
2. ರಾಂಪುರ ಖಾಸ್- ಆರಾಧನಾ ಮಿಶ್ರಾ
3. ಉನ್ನಾವೋ- ಉಷಾ ಸಿಂಗ್
4. ಸೋನಭದ್ರ- ರಾಮರಾಜ್ ಕೋಲ್
5. ಶಹಜಹಾನ್‌ಪುರ- ಆಶಾ ಬಹು
6. ಶಹಜಹಾನ್‌ಪುರ- ಪೂನಂ ಪಾಂಡೆ
7. ಖೇರಿ- ರಿತು ಸಿಂಗ್
8. ಸೀತಾಪುರ ಸದರ್- ಸಮೀನಾ ಶಫೀಕ್
9. ಮೋಹನ್‌ಲಾಲ್‌ಗಂಜ್-ಮಮತಾ ಚೌಧರಿ