ಬರೇಲಿ(ಉತ್ತರಪ್ರದೇಶ): ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ನಡುವೆಯೇ ಇಂದು ಎರಡನೇ ಹಂತದ ಮತದಾನ ನಡೆಯಲಿದ್ದು, 586 ಅಭ್ಯರ್ಥಿಗಳ ಭವಿಷ್ಯವನ್ನು ಎರಡು ಕೋಟಿ ಮತದಾರರು ನಿರ್ಧರಿಸಲಿದ್ದಾರೆ.
ಪಶ್ಚಿಮ ಯುಪಿ ಜಿಲ್ಲೆಗಳಲ್ಲಿ ಕಬ್ಬಿನ ಕೃಷಿಯ ಪ್ರಾಬಲ್ಯ ಹೆಚ್ಚಿದೆ. ಉತ್ತರಪ್ರದೇಶವೂ 23.08 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯುವ ಪ್ರದೇಶ ಹೊಂದಿದ್ದು, ಕನಿಷ್ಠ 35 ಲಕ್ಷ ರೈತರಿಗೆ ನೆಲೆಯಾಗಿದೆ.
ಬರೇಲಿಯಲ್ಲಿ ಶೇ.70 ಕಬ್ಬು ಬೆಳೆಗಾರರಿದ್ದು, ಮೊರಾದಾಬಾದ್‌ನಲ್ಲಿ ಶೇ.60, ಬದೌನ್‌ನಲ್ಲಿ ಶೇ. 40, ಬಿಜ್ನೋರ್‌ನಲ್ಲಿ ಶೇ.50 ಕ್ಕಿಂತ ಹೆಚ್ಚು, ರಾಮ್‌ಪುರದಲ್ಲಿ ಶೇ.45, ಸಂಭಾಲ್‌ನಲ್ಲಿ ಶೇ.35, ಸಹರಾನ್‌ಪುರ ಮತ್ತು ಅಮ್ರೋಹಾ ಕ್ರಮವಾಗಿ ಶೇ.65, ಶೇ.60 ಮತ್ತು ಷಹಜಹಾನ್‌ಪುರವು ಶೇ.35 ಕಬ್ಬು ಬೆಳೆಗಾರಿದ್ದಾರೆ ಎಂದು ಸ್ಥಳೀಯ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇಲ್ಲಿನ ಕಬ್ಬಿನ ಮಿಲ್ಗಳು ಸರಿಯಾದ ಸಮಯದಲ್ಲಿ ಕಬ್ಬು ಬೆಳೆಗಾರರಿಗೆ ಹಣವನ್ನು ಪಾವತಿ ಮಾಡುತ್ತಿಲ್ಲ. ಇದರಿಂದ ಇಲ್ಲಿನ ಕಬ್ಬು ಬೆಳೆಗಾರರು ಅಧಿಕ ಬಡ್ಡಿ ದರದಲ್ಲಿ ಸಾಲ ಮಾಡಿ ಜೀವನ ನಡೆಸುವ ಪರಿಸ್ಥಿತಿ ಇದೆ.
ಇದನ್ನೂ ಓದಿ: ಮೋದಿ ಯುಗದಲ್ಲಿ ರೂ. 5,35,000 ಕೋಟಿ ಬ್ಯಾಂಕ್ ವಂಚನೆ : ರಾಹುಲ್ ಗಾಂಧಿ ವ್ಯಂಗ್ಯ
ಈ ಕುರಿತಂತೆ ರೈತರು ಸರ್ಕಾರದ ಗಮನಕ್ಕೆ ತಂದಿದ್ದು, ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ, ಕಬ್ಬು ಬೆಳೆಗಾರರ ಸಮಸ್ಯೆ ಯುಪಿ ಚುನಾವಣೆಯ ಎರಡನೇ ಹಂತದ ಮತದಾನದ ಮೇಲೆ ಆಗಾಧ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಕಬ್ಬಿನ ಆರ್ಥಿಕತೆಯು 40,000 ಕೋಟಿ ಎಂದು ಅಂದಾಜಿಸಲಾಗಿದೆ. ಯುಪಿಯಲ್ಲಿ ಕಬ್ಬಿನ ಆರಂಭಿಕ ದರವು ಕ್ವಿಂಟಲ್‌ಗೆ 350 ಆಗಿದ್ದು, ಇದನ್ನು ಅತ್ಯುತ್ತಮ ತಳಿ ಎಂದು ಪರಿಗಣಿಸಲಾಗಿದೆ. ಆದರೆ ತಿರಸ್ಕರಿಸಿದ ತಳಿಯನ್ನು ಪ್ರತಿ ಕ್ವಿಂಟಲ್‌ಗೆ 340 ರೂ.ಗೆ ಮಾರಾಟ ಮಾಡಲಾಗುತ್ತದೆ.
ಎರಡನೇ ಹಂತವೂ ಪರಿಶಿಷ್ಟ ಜಾತಿಗೆ ಮೀಸಲಾದ ಒಂಬತ್ತು ಕ್ಷೇತ್ರಗಳನ್ನು ಒಳಗೊಂಡಂತೆ 9 ಜಿಲ್ಲೆಗಳಲ್ಲಿನ ಸುಮಾರು 55 ವಿಧಾನಸಭಾ ಸ್ಥಾನಗಳಿಗೆ ಒಟ್ಟು 586 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ರಾಮ್‌ಪುರದಿಂದ ಕಾಂಗ್ರೆಸ್ನಿಂದ ನವಾಬ್ ಕಾಜಿಮ್ ಅಲಿ ಖಾನ್, ಬರೇಲಿ ಕ್ಯಾಂಟ್‌ನಿಂದ ಸಮಾಜವಾದಿ ಪಕ್ಷದ ಸುಪ್ರಿಯಾ ಅರೋನ್, ಗಂಗೊದಿಂದ ಕೀರತ್ ಸಿಂಗ್ ಗುರ್ಜರ್ ಮತ್ತು ನೌಗಾವಾನ್ ಕ್ಷೇತ್ರದಿಂದ ಬಿಜೆಪಿಯ ದೇವೇಂದ್ರ ನಾಗ್‌ಪಾಲ್ ಕಣದಲ್ಲಿದ್ದಾರೆ.