ETV Bharat / bharat

ಸಾರ್ವಜನಿಕ ಸಭೆಯಲ್ಲಿ ಸಹೋದರಿಗೆ ರಾಹುಲ್‌ ಗಾಂಧಿ ಮುತ್ತು; ಯುಪಿ ಸಚಿವ ಆಕ್ಷೇಪ - ಈಟಿವಿ ಭಾರತ ಕರ್ನಾಟಕ

ಭಾರತ್​​ ಜೋಡೋ ಯಾತ್ರೆಯ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿ ರಾಹುಲ್​ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಮುತ್ತು ಕೊಟ್ಟಿದ್ದರು.

Rahul Gandhis kiss to Priyanka Gandhi
ಪ್ರಿಯಾಂಕಾ ಗಾಂಧಿಗೆ ಮುತ್ತು ಕೊಟ್ಟ ರಾಗಾ
author img

By

Published : Jan 11, 2023, 10:16 AM IST

ರಾಯ್​ಬರೇಲಿ (ಉತ್ತರ ಪ್ರದೇಶ): ಭಾರತ್​ ಜೋಡೋ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸಹೋದರಿ ಪ್ರಿಯಾಂಕಾ ಗಾಂಧಿಗೆ ಮುತ್ತು ಕೊಟ್ಟಿದ್ದು, ಇದಕ್ಕೆ ಉತ್ತರ ಪ್ರದೇಶ ಸಚಿವ ದಿನೇಶ್​ ಪ್ರತಾಪ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಯಾವ ಪಾಂಡವರು ತಮ್ಮ 50ನೇ ವಯಸ್ಸಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಸಹೋದರಿಗೆ ಮುತ್ತು ಕೊಟ್ಟಿದ್ದಾರೆ?' ಎಂದು ಅವರು ಟೀಕಿಸಿದ್ದಾರೆ. ಆರ್​ಎಸ್​ಎಸ್​ 21ನೇ ಶತಮಾನದ ಕೌರವರು ಎಂದು ರಾಹುಲ್‌ ಗಾಂಧಿ ಇತ್ತೀಚೆಗೆ ಟೀಕಿಸಿದ್ದು, ಅದಕ್ಕೆ ಪ್ರತಿಯಾಗಿ ಸಚಿವರು ವಾಕ್ಸಮರ ನಡೆಸಿದ್ದಾರೆ.

ಸಂಘದ ಪ್ರಚಾರಕ ಅವಿವಾಹಿತರಾಗಿಯೇ ಉಳಿಯಲು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಯಾವುದೇ ದುರಾಸೆಯಿಲ್ಲದೇ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಾರೆ. ರಾಹುಲ್​ ಗಾಂಧಿ ಆರ್​ಎಸ್​ಎಸ್​ ಅನ್ನು ಕೌರವ ಎಂದು ಕರೆಯುವುದಾದರೆ ಅವರು ಪಾಂಡವರು ಎಂದರ್ಥವೇ?. ಪಾಂಡವರಂತೆ ಕಂಡರೂ 50ನೇ ಪ್ರಾಯಕ್ಕೆ ರಾಹುಲ್‌ರಂತೆ ಪಾಂಡವರು ಸಾರ್ವಜನಿಕ ಸಭೆಯಲ್ಲಿ ತಮ್ಮ ಸಹೋದರಿಯರಿಗೆ ಮುತ್ತು ಕೊಟ್ಟಿದ್ದರಾ? ಎಂದು ಟೀಕಿಸಿದ್ದಾರೆ. ಇದು ನಮ್ಮ ಸಂಸ್ಕೃತಿಯಲ್ಲ, ಏಕೆಂದರೆ ಭಾರತದ ಸಂಸ್ಕೃತಿ ಇಂತಹ ವಿಚಾರಗಳನ್ನು ಒಪ್ಪದು ಎಂದು ಇದೇ ವೇಳೆ ತಿಳಿಸಿದರು.

ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸೋಲಲಿದ್ದು, ರಾಯ್​ಬರೇಲಿಯಿಂದ ನಿರ್ಗಮಿಸುವ ಕೊನೆಯ ವಿದೇಶಿ ಮಹಿಳೆಯಾಗಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ. (2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಯ್​ಬರೇಲಿಯಿಂದ ಸ್ಫರ್ಧಿಸಿದ್ದ ದಿನೇಶ್​ ಪ್ರತಾಪ್​ ಸಿಂಗ್​ ಅವರು ಸೋನಿಯಾ ಗಾಂಧಿ ವಿರುದ್ಧ 1 ಲಕ್ಷ 67 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.) ಸೋನಿಯಾ ಗಾಂಧಿ ಅವರು ರಾಯ್​ಬರೇಲಿಗೆ ಭೇಟಿ ನೀಡುವ ಸಂದರ್ಭ ಎದುರಾದಗ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದೇ ಮಗನೊಂದಿಗೆ ಭಾರತ್​ ಜೋಡೋ ಯಾತ್ರೆಯಲ್ಲಿ ಪ್ರಚಾರ ಮಾಡುತ್ತಾ ಸಾಗುತ್ತಾರೆ. 204ರಲ್ಲಿ ಅವರು ಸಂಸದರಾಗದೇ ರಾಯ್​ ಬರೇಲಿಯಿಂದ ನಿರ್ಗಮಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಸೋನಿಯಾ ಗಾಂಧಿ ಎಂದಾದರೂ ತಾವು ವಿದೇಶಿಗರಲ್ಲ ಎಂದು ಹೇಳಿದ್ದಾರಾ?. ಅಥವಾ ಕಾಂಗ್ರೆಸ್​ ಪಕ್ಷದ ಯಾರೊಬ್ಬರಾದ್ರೂ ಸೋನಿಯಾ ಅವರು ವಿದೇಶಿಗರಲ್ಲ ಎಂದು ಪ್ರಸ್ತಾಪಿಸಬಹುದೇ?. ಸೋನಿಯಾ ವಿದೇಶಿಗಾರದ ಕಾರಣ ಅವರಿಗೆ ಪ್ರಧಾನಿ ಸ್ಥಾನವನ್ನು ನಿರಾಕರಿಸಲಾಗಿತ್ತು. ಸ್ವಾತಂತ್ರಕ್ಕಾಗಿ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಲು ನಾವು ಸಾಕಷ್ಟು ಹೋರಾಟಗಳನ್ನು ಮಾಡಿ ಸ್ವತಂತ್ರ ಪಡೆದುಕೊಂಡಿದ್ದೇವೆ. ಭಾರತೀಯರು ವಿದೇಶಿಗರನ್ನು ಆಡಳಿತಗಾರರನ್ನಾಗಿ ಒಪ್ಪುವುದಿಲ್ಲ ಎಂದು ಬಿಜೆಪಿ ಸಚಿವರು ಹೇಳಿದ್ದಾರೆ. ಈ ಹಿಂದೆ ಸಚಿವ ದಿನೇಶ್​​ ಪ್ರತಾಪ್​ ಕಾಂಗ್ರೆಸ್​​ ಪಕ್ಷದಲ್ಲಿದ್ದರು. ಬಳಿಕ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಜ.16 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ 'ನಾ ನಾಯಕಿ' ಸಮಾವೇಶ: ಪ್ರಿಯಾಂಕ ಗಾಂಧಿ ಆಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.