ETV Bharat / bharat

ನೇಪಾಳ ಗಡಿಯ ನಾಲ್ಕು ಹಳ್ಳಿಗಳನ್ನ ಕಂದಾಯ ಗ್ರಾಮಗಳೆಂದು ಘೋಷಿಸಿದ ಯೋಗಿ ಸರ್ಕಾರ! - ನೇಪಾಳ ಗಡಿಯ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿದ ಯೋಗಿ ಸರ್ಕಾರ

ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ರಂಗೇರಿದ್ದು, ನೇಪಾಳ ಗಡಿಗೆ ಸಮೀಪದಲ್ಲಿರುವ ನಾಲ್ಕು ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.

UP govt declares some villages as revenue villages  Nepal border villages declared as revenue villages  Uttar Pradesh declares 4 villages as revenue villages  revenue villages Of Uttar Pradesh  ನಾಲ್ಕು ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿದ ಯೋಗಿ ಸರ್ಕಾರ  ನೇಪಾಳ ಗಡಿಯ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿದ ಯೋಗಿ ಸರ್ಕಾರ  ಉತ್ತರಪ್ರದೇಶ ವಿಧಾನಸಭೆ ಚುನಾವಣೆ
ಕಂದಾಯ ಗ್ರಾಮಗಳೆಂದು ಘೋಷಿಸಿದ ಯೋಗಿ ಸರ್ಕಾರ
author img

By

Published : Jan 10, 2022, 12:11 PM IST

ಬಹ್ರೈಚ್: ಜಿಲ್ಲೆಯ ನೇಪಾಳ ಗಡಿಯ ಸಮೀಪ ಇರುವ ನಾಲ್ಕು ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಉತ್ತರ ಪ್ರದೇಶ ಸರ್ಕಾರವು ಘೋಷಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಭವಾನಿಪುರ್, ತೆಧಿಯಾ, ಢಾಕಿಯಾ ಮತ್ತು ಬಿಚಿಯಾ ಸೇರಿದ ನಾಲ್ಕು ಗ್ರಾಮಗಳು ಜಿಲ್ಲೆಯ ಮಿಹಿನ್‌ಪುರವಾ ತಾಲೂಕಿನಲ್ಲಿವೆ. ಈ ಎಲ್ಲ ಗ್ರಾಮಗಳು ವಂಟಂಗಿಯ ಜನಾಂಗದ ಗ್ರಾಮಗಳಾಗಿವೆ. ಯುಪಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ ಮುನ್ನವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಹ್ರೈಚ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಸಿಂಗ್ ಹೇಳಿದ್ದಾರೆ.

ಓದಿ: ನೀವು ಸಾಲದ ಹೊರೆಯಿಂದ ಚಿಂತಿತರಾಗಿದ್ದೀರಾ..? ಹಾಗಾದ್ರೆ ಹೀಗೆ ಮಾಡಿ

ವಂಟಂಗಿಯ ಸಮುದಾಯವು ವಸಾಹತುಶಾಹಿ ಆಳ್ವಿಕೆಯಲ್ಲಿ ಮರಗಳನ್ನು ನೆಡಲು ಮ್ಯಾನ್ಮಾರ್‌ನಿಂದ ಕರೆತಂದ ಜನರನ್ನು ಒಳಗೊಂಡಿದೆ. ಕಂದಾಯ ಗ್ರಾಮ ಎಂದು ವ್ಯಾಖ್ಯಾನಿಸಲಾದ ಗಡಿಗಳನ್ನು ಹೊಂದಿರುವ ಸಣ್ಣ ಆಡಳಿತ ಪ್ರದೇಶವಾಗಿದೆ. ಒಂದು ಕಂದಾಯ ಗ್ರಾಮವು ಅನೇಕ ಕುಗ್ರಾಮಗಳನ್ನು ಹೊಂದಿರಬಹುದು.

ಗ್ರಾಮ ಆಡಳಿತ ಅಧಿಕಾರಿ ಕಂದಾಯ ಗ್ರಾಮದ ಮುಖ್ಯಾಧಿಕಾರಿ. ಜನವರಿ 3 ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಜನವರಿ 8 ರಂದು ಪತ್ರವನ್ನು ಸ್ವೀಕರಿಸಲಾಗಿದೆ. ಇನ್ನು ಈ ಗ್ರಾಮಗಳ ಜನತೆಗೆ ಸರಕಾರದ ಎಲ್ಲ ಯೋಜನೆಗಳ ಲಾಭ ದೊರೆಯಲಿದೆ ಎಂದು ಸಿಂಗ್ ಹೇಳಿದರು.

ಢಾಕಿಯಾ ಗ್ರಾಮದ ನಿವಾಸಿ ಗೀತಾ ಪ್ರಸಾದ್ ಮಾತನಾಡಿ, ಸರ್ಕಾರದ ನಿರ್ಧಾರದಿಂದ ನಮಗೆ ಸಂತೋಷವಾಗಿದ್ದು, ನಾವು ಹೋಳಿ ಮತ್ತು ದೀಪಾವಳಿಯನ್ನು ಒಟ್ಟಿಗೆ ಆಚರಿಸಿದ್ದೇವೆ. ಈ ನಾಲ್ಕು ಗ್ರಾಮಗಳಲ್ಲಿ ಸುಮಾರು 225 ಕುಟುಂಬಗಳು ಸೇರಿದಂತೆ 1,500 ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.