ಝಾನ್ಸಿ(ಉತ್ತರ ಪ್ರದೇಶ): ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದನ್ನ ಗಮನದಲ್ಲಿಟ್ಟುಕೊಂಡು ಯೋಗಿ ಸರ್ಕಾರ ಅನೇಕ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಝಾನ್ಸಿ ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡಿದೆ.
ಈ ಹಿಂದೆ ಮೊಘಲ್ ಸರಾಯ್ ರೈಲ್ವೆ ನಿಲ್ದಾಣಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿದ್ದ ಯುಪಿ ಸರ್ಕಾರ ಇದೀಗ ಝಾನ್ಸಿ ರೈಲು ನಿಲ್ದಾಣಕ್ಕೆ ವೀರಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದನ್ನೂ ನೋಡಿ: ಮಹಾಮಸ್ತಕಾಭಿಷೇಕದ ವೇಳೆ ಕಣ್ತೆರೆದು ನೋಡಿದ ಅಯ್ಯಪ್ಪ ಸ್ವಾಮಿ.. ವಿಡಿಯೋ ವೈರಲ್!
ಕಳೆದ ಮೂರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದೀಗ ಈ ಪ್ರಸ್ತಾವನೆ ಒಪ್ಪಿಕೊಂಡಿರುವ ಕೇಂದ್ರ ಝಾನ್ಸಿ ರೈಲ್ವೆ ನಿಲ್ದಾಣದ ಹೆಸರು ಮರುನಾಮಕರಣ ಮಾಡಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನೇಕ ನಗರಗಳ ಹೆಸರು ಮರುನಾಮಕರಣ ಮಾಡಿದೆ.