ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಲಖನೌದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಡಯಲ್ 112' (ಉತ್ತರ ಪ್ರದೇಶ ಸರ್ಕಾರವು ತುರ್ತು ಸೇವೆಗಳಿಗಾಗಿ ಪ್ರಾರಂಭಿಸಿರುವ ಸಂಖ್ಯೆ) ಸಂದೇಶದ ಮೂಲಕ ಬೆದರಿಕೆ ಹಾಕಲಾಗಿದೆ. ಈ ಕರೆಯನ್ನು ಅಲ್ಲಿದ್ದ ಸಂವಹನಕಾರರು ಸ್ವೀಕರಿಸಿದ್ದಾರೆ. ಆ ಕಡೆಯಿಂದ ಕರೆ ಮಾಡಿದ ವ್ಯಕ್ತಿ "ನಾನು ಸಿಎಂ ಯೋಗಿಯನ್ನು ಶೀಘ್ರದಲ್ಲೇ ಕೊಲ್ಲುತ್ತೇನೆ" ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಬೆದರಿಕೆ ಬಂದ ನಂತರ, '112' ನ ಆಪರೇಷನ್ ಕಮಾಂಡರ್ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506, 507 ಮತ್ತು ಐಟಿ ಕಾಯ್ದೆ 66 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ‘ಡಯಲ್ 112’ ಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪಿಎಸ್ ಸುಶಾಂತ್ ಗಾಲ್ಫ್ ಸಿಟಿಯಲ್ಲಿ 506 ಮತ್ತು 507 ಐಪಿಸಿ ಮತ್ತು 66 ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: TSPSC ಪೇಪರ್ ಸೋರಿಕೆ ಪ್ರಕರಣ; ಮಹಿಳಾ ಕಾನ್ಸ್ಟೇಬಲ್ಗೆ ಕಪಾಳಮೋಕ್ಷ, ವೈಎಸ್ ಶರ್ಮಿಳಾ ವಶಕ್ಕೆ
ಏಪ್ರಿಲ್ 24 ರಂದು ಕೊಚ್ಚಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಭಾನುವಾರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯನ್ನು ಕ್ಸೇವಿಯರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ, ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಕಳೆದ ವಾರ ಪತ್ರವೊಂದು ಬಂದಿತ್ತು ಎಂದು ಹೇಳಿದ್ದರು. ಈ ಸಂಬಂಧ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದರ ಜೊತೆ ಮಾತನಾಡಿದ ಕೊಚ್ಚಿ ನಗರ ಪೊಲೀಸ್ ಕಮಿಷನರ್ ಕೆ.ಸೇತು ರಾಮನ್, 'ಪ್ರಧಾನಿ ವಿರುದ್ಧ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರ ಹಾಗೂ ವಿಧಿವಿಜ್ಞಾನದ ಸಹಾಯದಿಂದ ಅವನನ್ನು ಬಂಧಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಿಗದಿಯಂತೆ ನಿನ್ನೆ ಪ್ರಧಾನಿ ಕೇರಳಕ್ಕೆ ಭೇಟಿ ನೀಡಿದರು. ಬೆದರಿಕೆ ಕರೆ ನಡುವೆಯೂ ಅವರು ಕೇರಳದಲ್ಲಿ ರೋಡ್ ಶೋ ನಡೆಸಿ ಗಮನ ಸೆಳೆದರು.
ಕೊಚ್ಚಿಗೆ ಆಗಮಿಸಿರುವ ಪ್ರಧಾನಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇದಕ್ಕಾಗಿ 2060 ಪೊಲೀಸರನ್ನು ನೇಮಿಸಲಾಗಿದೆ. ಇದರ ಭಾಗವಾಗಿ ಮಧ್ಯಾಹ್ನ 2 ಗಂಟೆಯಿಂದ ಸಂಚಾರ ನಿಯಂತ್ರಣವನ್ನೂ ಹೇರಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನು ಓದಿ: ರಂಗೇರಿದ ಚುನಾವಣಾ ಕಣ: ಮೋದಿ, ಯೋಗಿಯಿಂದ ನಡೆಯಲಿದೆ ರಾಜ್ಯದಲ್ಲಿ ಚುನಾವಣಾ ಪ್ರಚಾರ