ETV Bharat / bharat

ಅಪ್ರಾಪ್ತ ಬಾಲಕಿಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆ : ಸಾಮೂಹಿಕ ಅತ್ಯಾಚಾರದ ಶಂಕೆ - ಅಪ್ರಾಪ್ತ ಬಾಲಕಿಯ ಶವ ಪತ್ತೆ

ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) (Indian Penal Code ) ಮತ್ತು ಪೋಕ್ಸೋ(POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ..

ಸಾಮೂಹಿಕ ಅತ್ಯಾಚಾರದ ಶಂಕೆ
ಸಾಮೂಹಿಕ ಅತ್ಯಾಚಾರದ ಶಂಕೆ
author img

By

Published : Nov 14, 2021, 3:09 PM IST

ಪಿಲಿಭಿತ್(ಉತ್ತರ ಪ್ರದೇಶ): ಶನಿವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ 16ರ ಹರೆಯದ ಬಾಲಕಿಯ ಬರ್ಖೇಡಾ ಗ್ರಾಮದ (Barkheda village) ಬಳಿ ಇರುವ ಕಬ್ಬಿನ ಗದ್ದೆಯಲ್ಲಿ (sugarcane field) ಪತ್ತೆಯಾಗಿದೆ.

ಬಾಲಕಿ ನವೆಂಬರ್ 14ರಂದು ಬೆಳಿಗ್ಗೆ ಟ್ಯೂಷನ್‌ಗೆ ಹೋಗಿದ್ದಾಗ ನಾಪತ್ತೆಯಾಗಿದ್ದಳು. ತಡರಾತ್ರಿಯಾದರೂ ಆಕೆ ವಾಪಸ್‌ ಬಾರದ ಹಿನ್ನೆಲೆ ಪೋಷಕರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹುಡುಕಾಟದ ವೇಳೆ ಕಬ್ಬಿನ ಗದ್ದೆಯಲ್ಲಿ ಈಕೆಯ ಶವ ಪತ್ತೆಯಾಗಿದೆ ಮತ್ತು ಆಕೆಯ ಬಾಯಿಯಲ್ಲಿ ಬಟ್ಟೆ ತುರುಕಲಾಗಿದೆ. ಆಕೆಯ ಪುಸ್ತಕಗಳು, ಬ್ಯಾಗ್,​ ಸೈಕಲ್ ಮತ್ತು ಶೂಗಳು ಶವ ಸಿಕ್ಕ ಸ್ವಲ್ಪ ದೂರದಲ್ಲಿ ಪತ್ತೆಯಾಗಿವೆ.

ಹಾಗೆಯೇ ಸ್ಥಳದಲ್ಲಿ ನಾಲ್ಕು ಬಿಯರ್ ಬಾಟಲ್‌ಗಳು, ತಿಂಡಿ ಮತ್ತು ಸಿಗರೇಟ್ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಹಿನ್ನೆಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) (Indian Penal Code ) ಮತ್ತು ಪೋಕ್ಸೋ(POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ಹಂಚಿಕೊಂಡ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಪ್ರಕರಣದ ತನಿಖೆಗಾಗಿ ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.