ETV Bharat / bharat

ಒಂದೇ ವಾರದೊಳಗೆ ಮೂವರು ಬಿಜೆಪಿ ಶಾಸಕರನ್ನು ಕಳೆದುಕೊಂಡ ಉತ್ತರ ಪ್ರದೇಶ - ಉತ್ತರ ಪ್ರದೇಶ ಬಿಜೆಪಿ ಶಾಸಕರು ಕೊರೊನಾಗೆ ಬಲಿ

ಒಂದು ವಾರದೊಳಗೆ ಉತ್ತರ ಪ್ರದೇಶದಲ್ಲಿ ಮೂವರು ಬಿಜೆಪಿ ಶಾಸಕರು ಕೋವಿಡ್​ಗೆ ಬಲಿಯಾಗಿದ್ದಾರೆ.

UP BJP loses 3rd MLA to Covid
ನವಾಬ್‌ಗಂಜ್ ಶಾಸಕ ಕೇಸರ್ ಸಿಂಗ್ ಗಂಗ್ವಾರ್
author img

By

Published : Apr 29, 2021, 11:41 AM IST

ಲಖನೌ (ಉತ್ತರ ಪ್ರದೇಶ): ಮಹಾಮಾರಿ ಕೋವಿಡ್​​ನಿಂದಾಗಿ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಬಿಜೆಪಿ ಶಾಸಕ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದು ವಾರದೊಳಗೆ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಮೂವರು ಶಾಸಕರನ್ನು ಕಳೆದುಕೊಂಡಿದೆ.

ಈ ಹಿಂದೆ ಪಶ್ಚಿಮ ಲಖನೌ ಬಿಜೆಪಿ ಶಾಸಕ ಸುರೇಶ್ ಶ್ರೀವಾಸ್ತವ ಮತ್ತು ಔರಯ್ಯಾ ಕ್ಷೇತ್ರದ ಶಾಸಕ ರಮೇಶ್ ಚಂದ್ರ ದಿವಾಕರ್ ಅವರು ಸೋಂಕಿಗೆ ಬಲಿಯಾಗಿದ್ದರು. ಇಂದು ನವಾಬ್‌ಗಂಜ್ ಶಾಸಕ ಕೇಸರ್ ಸಿಂಗ್ ಗಂಗ್ವಾರ್ (64) ವೈರಸ್​ನಿಂದಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಫಲಿತಾಂಶಕ್ಕೆ 4 ದಿನವಿರುವಾಗಲೇ ಕೇರಳ ಕಾಂಗ್ರೆಸ್ ಅಭ್ಯರ್ಥಿ ಸಾವು

ಏಪ್ರಿಲ್​ 18 ರಂದು ಸೋಂಕು ದೃಢಪಟ್ಟಿದ್ದ ಕೇಸರ್ ಸಿಂಗ್​ರನ್ನು ಬರೇಲಿಯ ರಾಮ್ ಮೂರ್ತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಚಿಂತಾಜನಕವಾದ ಕಾರಣ ನೋಯ್ಡಾದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕಳೆದ ವರ್ಷ ಉತ್ತರ ಪ್ರದೇಶದ ಇಬ್ಬರು ಸಚಿವರಾದ ಚೇತನ್​ ಚೌಹಾಣ್​ ಹಾಗೂ ಕಮಲಾ ರಾಣಿ ವರುಣ್​ ಕೂಡ ಮಾರಕ ವೈರಸ್​ನಿಂದಾಗಿ ಕೊನೆಯುಸಿರೆಳೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.