ETV Bharat / bharat

ಕುಸಿಯುತ್ತಿರುವ ಆರ್ಥಿಕತೆಗೆ ‘ಎಥೆನಾಲ್’​ ಬೂಸ್ಟ್​.. ಉತ್ಪಾದನೆಯಲ್ಲಿ ಯುಪಿಯೇ ನಂ.1

author img

By

Published : Jul 25, 2021, 11:53 AM IST

ಎಥೆನಾಲ್​ ಉತ್ಪಾದಿಸುವ ರಾಜ್ಯಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಈ ಮೂಲಕ ದೇಶದ ಆರ್ಥಿಕತೆ ಚೇತರಿಕೆಗೆ ಯುಪಿ ನೆರವಾಗಿದೆ.

ಎಥೆನಾಲ್
ಎಥೆನಾಲ್

ಲಖನೌ(ಉತ್ತರ ಪ್ರದೇಶ): ದೇಶದಲ್ಲಿ ಎಥೆನಾಲ್​ ಉತ್ಪಾದಿಸುವ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ. ರಾಜ್ಯದಲ್ಲಿ ಸ್ಥಾಪಿಸಲಾದ 54 ಡಿಸ್ಟಿಲರಿಗಳಿಂದ 58 ಕೋಟಿ ಲೀಟರ್ ಎಥೆನಾಲ್​ ಉತ್ಪಾದಿಸಲಾಗಿದೆ. ಸರ್ಕಾರದ ವಕ್ತಾರರ ಪ್ರಕಾರ 2020-21 ರಲ್ಲಿ ರಾಜ್ಯವು 58 ಕೋಟಿ ಲೀಟರ್​ ಎಥೆನಾಲ್ ಉತ್ಪಾದಿಸುತ್ತಿದೆ. ಜತೆಗೆ ಪರಿಸರ ಉದ್ದೇಶಗಳಿಗಾಗಿ ಪೆಟ್ರೋಲ್​ನೊಂದಿಗೆ ಎಥೆನಾಲ್​ ಬೆರೆಸಿ ಬಳಸಲಾಗುತ್ತಿದೆ.

ಎಥೆನಾಲ್​ ಮಾರಾಟದಿಂದ ಕಬ್ಬು ಕೃಷಿಕರ ಖಾತೆಗಳಿಗೆ ಹೆಚ್ಚುವರಿ 864 ಕೋಟಿ ರೂ.ಜಮಾ ಆಗಿದೆ. ಪೆಟ್ರೋಲ್​ನಲ್ಲಿ ಎಥೆನಾಲ್​ ಬೆರೆಸುವ ಮೂಲಕ ಉತ್ತರಪ್ರದೇಶ ಸರ್ಕಾರವು ಭಾರತದ ವಿದೇಶಿ ವಿನಿಮಯ ಸಂಗ್ರಹಕ್ಕೆ ಒಟ್ಟು 75.58 ಮಿಲಿಯನ್ ಡಾಲರ್‌ಗಳನ್ನು ಕೊಡುಗೆಯಾಗಿ ನೀಡಿದೆ. ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕತೆ ಉತ್ತೇಜಿಸಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ : ಅಯೋಧ್ಯೆಯ ಹನುಮಾನ್ ದೇವಾಲಯಕ್ಕೆ ಹುಸಿಬಾಂಬ್ ಕರೆ: ಆರೋಪಿ ಅಂದರ್

ಎಥೆನಾಲ್​ ಒಂದು ರೀತಿಯ ಇಂಧನವಾಗಿದ್ದು, ಪೆಟ್ರೋಲ್​ನೊಂದಿಗೆ ಬೆರೆಸಿ ವಾಹನಗಳನ್ನು ಚಲಾಯಿಸಲು ಬಳಸಲಾಗುತ್ತದೆ. ಪರಿಸರ ತಜ್ಞರ ಪ್ರಕಾರ, ಪೆಟ್ರೋಲ್​ನೊಂದಿಗೆ ಬೆರೆಸಿದ ಎಥೆನಾಲ್​ ಇಂಗಾಲದ ಡೈ ಆಕ್ಸೈಡ್ ಅನ್ನು ಶೇಕಡಾ 35 ರಷ್ಟು ಕಡಿಮೆ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.