ಲಖನೌ (ಉತ್ತರ ಪ್ರದೇಶ): 45 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್ ಮ್ಯಾನೇಜರ್ ವೊಬ್ಬರನ್ನು ಲಖನೌ ಪೊಲೀಸರು ಬಂಧಿಸಿದ್ದಾರೆ.
ಅಖಿಲೇಶ್ ಕುಮಾರ್ (42) ಬಂಧಿತ ಆರೋಪಿ. ಕೆನರಾ ಬ್ಯಾಂಕ್ (ವಿಪಿನ್ ಖಂಡ್) ಪ್ರಾದೇಶಿಕ ಕಚೇರಿ ಮುಖ್ಯಸ್ಥ ಮನೋಜ್ ಕುಮಾರ್ ಮೀನಾ ಎಂಬುವರು ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಇದೀಗ ಆರೋಪಿ ಬಂಧಿಸಲಾಗಿದೆ.
ಆರೋಪಿ ಅಖಿಲೇಶ್ ಕುಮಾರ್ ಆಲಂಬಾಗ್ ಶಾಖಾ ಕಚೇರಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಹುದ್ದೆಯಲ್ಲಿದ್ದು 45 ಕೋಟಿ ರೂ. ವಂಚನೆ ಎಸಗಿದ್ದ. ವಂಚನೆ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಆರೋಪಿ ಪತ್ತೆಗೆ ಕೇಂದ್ರ ವಲಯದ ಉಪ ಪೊಲೀಸ್ ಕಮಿಷನರ್ ಅಪರ್ಣಾ ಕೌಶಿಕ್ , ಆರೋಪಿಯನ್ನು ಹುಡುಕಿ ಕೊಟ್ಟವರಿಗೆ 25,000 ರೂ. ಬಹುಮಾನ ಘೋಷಿಸಿದ್ದರು.
ಎರಡು ವರ್ಷಗಳ ನಂತರ ಕೃಷ್ಣನಗರ ಪ್ರದೇಶದಲ್ಲಿ ಅಖಿಲೇಶ್ ಕುಮಾರ್ ಇರುವ ಬಗ್ಗೆ ಸೋಮವಾರ ಪೊಲೀಸರಿಗೆ ಸುಳಿವು ಸಿಕ್ಕಿತು. ನಂತರ ಸ್ಥಳಕ್ಕಾಮಿಸಿದ ಅಧಿಕಾರಿಗಳು, ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ