ETV Bharat / bharat

ಎಲ್​ಇಟಿ, ಐಎಸ್‌ಐ ಜೊತೆ ಲಿಂಕ್: ಗ್ಯಾಂಗ್​ಸ್ಟರ್​ ಅತೀಕ್ ಅಹ್ಮದ್ ವಿಚಾರಣೆ ಚುರುಕು

author img

By

Published : Apr 15, 2023, 10:58 AM IST

ಉತ್ತರ ಪ್ರದೇಶ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳವು ಗ್ಯಾಂಗ್​ಸ್ಟರ್​ ಅತೀಕ್ ಅಹ್ಮದ್​ಗೆ ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಐಎಸ್‌ಐನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಇರುವ ಲಿಂಕ್​ ಕುರಿತು ವಿಚಾರಣೆ ಮುಂದುವರೆಸಿದೆ ಎಂದು ಮೂಲಗಳು ತಿಳಿಸಿವೆ.

Atiq Ahmed
ಅತೀಕ್ ಅಹ್ಮದ್

ಪ್ರಯಾಗ್‌ರಾಜ್(ಉತ್ತರಪ್ರದೇಶ) : ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಗ್ಯಾಂಗ್​ಸ್ಟರ್​ ಅತೀಕ್ ಅಹ್ಮದ್​ನ ಮಗ ಅಸದ್​ ಅಹ್ಮದ್​ನನ್ನು ಉತ್ತರ ಪ್ರದೇಶ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ತಂಡ ಎನ್​ಕೌಂಟರ್ ಮಾಡಿದೆ. ಹತ್ಯೆ ಬಳಿಕ ಎಟಿಎಸ್ ತಂಡವು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಐಎಸ್‌ಐನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಇರುವ ಲಿಂಕ್​ ಕುರಿತು ಅತೀಕ್ ಮತ್ತು ಅವನ ಸಹೋದರ ಅಶ್ರಫ್ ಇಬ್ಬರ ವಿಚಾರಣೆಯನ್ನೂ ಚುರುಕುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತಿನ ಸಬರಮತಿ ಜೈಲಿನಲ್ಲಿದ್ದ ದರೋಡೆಕೋರ ಅತೀಕ್‌ನ ಮೂರನೇ ಮಗ ಅಸಾದ್‌ನನ್ನು ಯುಪಿ ಎಸ್‌ಟಿಎಫ್ (ಸ್ಟೇಟ್ ಟಾಸ್ಕ್ ಫೋರ್ಸ್) ಗುರುವಾರ ಎನ್​ಕೌಂಟರ್​ ನಡೆಸಿ ಕೊಂದು ಹಾಕಿತ್ತು. ಇದೀಗ, ಅತೀಕ್​​​ಗೆ ಕೂಡ ಕುಣಿಕೆ ಬಿಗಿಗೊಳಿಸುತ್ತಿದೆ. ಶುಕ್ರವಾರ ಸಂಜೆ ಪ್ರಯಾಗರಾಜ್‌ನ ಧುಮನ್‌ಗಂಜ್ ಪೊಲೀಸ್ ಠಾಣೆಗೆ ಆಮಿಸಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಅತೀಕ್ ಅಹ್ಮದ್ ಮತ್ತು ಅಶ್ರಫ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು.

ಕೆಲ ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಗುರುವಾರ ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದು ಮಾಫಿಯಾ ಸಹೋದರರಾದ ಅತೀಕ್ ಮತ್ತು ಅಶ್ರಫ್​ನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ರಿಮಾಂಡ್ ಅರ್ಜಿಯ ಪ್ರಕಾರ, ಅತೀಕ್ ಮತ್ತು ಅಶ್ರಫ್ ಪಾಕಿಸ್ತಾನದಿಂದ ಪಂಜಾಬ್ ಮೂಲಕ ಡ್ರೋನ್‌ಗಳ ಸಹಾಯದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆಯುತ್ತಿದ್ದರು ಎಂದು ತಿಳಿಸಿದೆ.

ಇದರೊಂದಿಗೆ, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ಅತೀಕ್ ಗ್ಯಾಂಗ್ ನಂಟು ಹೊಂದಿರುವ ವಿಷಯವೂ ಹೊರಬಿದ್ದಿದೆ. ಈ ಬಗ್ಗೆ ತನಿಖೆ ನಡೆಸಲು ಎಟಿಎಸ್ ತಂಡ ಪ್ರಯಾಗ್ರಾಜ್​ಗೆ ತೆರಳಿದೆ. ಈ ತಂಡವು ಪೊಲೀಸ್ ಕಸ್ಟಡಿಯಲ್ಲಿರುವ ಅತೀಕ್ ಮತ್ತು ಅಶ್ರಫ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆಗಿನ ಸಂಬಂಧವನ್ನು ಅತೀಕ್ ಹೇಳಿರುವುದಾಗಿಯೂ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಅತೀಕ್ ಗ್ಯಾಂಗ್‌ಗೆ ಶಸ್ತ್ರಾಸ್ತ್ರಗಳ ಕೊರತೆ ಇರಲಿಲ್ಲ ಎಂಬ ಅಂಶ ಬಹಿರಂಗಪಡಿಸಿದ ನಂತರ ದೇಶಾದ್ಯಂತ ಗುಪ್ತಚರ ಸಂಸ್ಥೆಗಳು ತನಿಖೆ ಚುಕುರುಗೊಳಿಸಿವೆ.

ಇದನ್ನೂ ಓದಿ : ತಂದೆ - ಮಗ ಜೈಲುಪಾಲು, ತಾಯಿ ಪರಾರಿ.. ಅಸದ್​ ಶವಸಂಸ್ಕಾರಕ್ಕೆ ಭಾಗಿಯಾಗಲಿದೆಯಾ ಗ್ಯಾಂಗ್​ಸ್ಟರ್​​​ ಕುಟುಂಬ?

ಇನ್ನು ಈಗಾಗಲೇ ಅತೀಕ್ ಮತ್ತು ಅಶ್ರಫ್ ಅವರನ್ನು ವಿಚಾರಣೆಗೆ ಒಳಪಡಿಸಿದ ಎಟಿಎಸ್, ಪಾಕಿಸ್ತಾನದಿಂದ ಬರುತ್ತಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಜೊತೆಗೆ, ಅತೀಕ್‌ಗೆ ಹೇಗೆ ಐಎಸ್‌ಐ ಸಂಪರ್ಕ ಲಭಿಸಿತು?, ಲಷ್ಕರ್-ಎ-ತೊಯ್ಬಾ ಜೊತೆಗಿನ ಸಂಬಂಧ ಹೇಗೆ ಬೆಳೆಯಿತು?, ಅವರು ಐಎಸ್‌ಐ ಮತ್ತು ಲಷ್ಕರ್-ಎ-ತೊಯ್ಬಾವನ್ನು ಸಂಪರ್ಕಿಸುವ ಅಗತ್ಯ ಏನಿತ್ತು? ಅಥವಾ ಈ ಸಂಘಟನೆಗಳು ಅವರನ್ನು ಯಾರ ಮೂಲಕ ಸಂಪರ್ಕಿಸಿದವು? ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.

ಇದನ್ನೂ ಓದಿ : Explainer:ಅತೀಕ್ ಅಹಮದ್​​​​ ಪುತ್ರನ ಎನ್​​ಕೌಂಟರ್​​​ ಮರು ದಿನ.. ಉತ್ತರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟ!​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.