ಲಖನೌ: ಅಲ್ಖೈದಾ ಸಂಘಟನೆಗೆ ಸೇರಿದ್ದಾನೆ ಎನ್ನಲಾದ ಶಂಕಿತ ಭಯೋತ್ಪಾದಕ ಮಿನ್ಹಾಜ್ ಅಹ್ಮದ್ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತನಿಂದ ಡೈರಿಯೊಂದನ್ನು ವಶಕ್ಕೆ ಪಡೆದಿದ್ದು, ಡೈರಿಯಿಂದ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ತಾವು ಮಾಡುತ್ತಿದ್ದ ದಂಧೆಗೆ ಯಾವ ಕೋಡ್ವರ್ಡ್ ಬಳಸುತ್ತಿದ್ದರು ಎಂದು ಈ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರೆಶರ್ ಕುಕ್ಕರ್ ಬಾಂಬ್, ಆಟೋ, ಪಿಸ್ತೂಲ್ಗಳಿಗೆ ಅನೇಕ ಕೋಡ್ವರ್ಡ್ಗಳನ್ನು ಇಟ್ಟಿದ್ದಾರೆ. ಭಯೋತ್ಪಾದಕರು ಕಾಶ್ಮೀರದಲ್ಲಿ ಅಥವಾ ದೇಶದ ಹೊರಗೆ ಫೋನ್ನಲ್ಲಿ ಮಾತನಾಡುವಾಗ ತಮ್ಮ ತಂಡವನ್ನು ‘ವಿಮಾನ’ದ ಹೆಸರಿನಿಂದ ಕರೆಯುತ್ತಿದ್ದರು. ಮೊದಲ ವಿಮಾನ ಹೋಗಿದೆ ಎಂದರೆ, ಮೊದಲ ತಂಡ ಹೋಗಿದೆ ಎಂದರ್ಥ. ಮಾಂಸ ಬೇಯಿಸೋಕೆ ಬರುತ್ತಿದ್ದಾರೆ ಎಂದರೆ, ತೌಹೀದ್ ಮತ್ತು ಮೂಸಾ ಲಖನೌಗೆ ಬರಲಿದ್ದಾರೆ ಎಂದರ್ಥ.
ತಿಗಣೆಗಳಿಗೆ ಕಬಾಬ್ ನೀಡಬೇಕೆಂದರೆ, ಯಾವುದಾದರೂ ದೊಡ್ಡ ಸ್ಫೋಟ ನಡೆಸಬೇಕು. ಇದೇ ಸಂದೇಶವನ್ನು ಎರಡು ಬಾರಿ ಬರೆದರೆ, ಈ ದಾಳಿ ನಡೆಸುವವನು ಒಪ್ಪಿಗೆ ಸೂಚಿಸಿರಬೇಕೆಂದು ಅರ್ಥ. ತಮ್ಮ ದುಷ್ಕೃತ್ಯ ಮಾಡುವ ಸಲುವಾಗಿ ಪ್ರಯಾಣ ಬೆಳೆಸಲು ನೋಂದಣಿಯಿಲ್ಲದ ಆಟೋ ಹುಡುಕುತ್ತಿದ್ದರು. ಇದಕ್ಕಾಗಿ ರೈಡರ್ ವಾಲಾ ಕಾಮ್ ಎಂಬ ಕೋಡ್ವರ್ಡ್ ಬಳಸ್ತಿದ್ರು. ಬಾಂಬ್, ಶಸ್ತ್ರಾಸ್ತ್ರಗಳನ್ನು ಇಡಲು ಲೈಬ್ರರಿ, ಡಸ್ಟ್ಬಿನ್ ಎಂಬ ಪದ ಬಳಕೆ ಮಾಡುತ್ತಿದ್ದರು ಎಂದು ಡೈರಿಯಿಂದ ತಿಳಿದು ಬಂದಿದೆ.
ಬಕ್ರಿದ್ಗೆ ಮುನ್ನ ಭಾರಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕ ಪಡೆ, ಈ ಯೋಜನೆಗಾಗಿ ‘ಕುರ್ಬಾನಿ’ ಎಂಬ ಪದವನ್ನು ಡೈರಿಯಲ್ಲಿ ಉಲ್ಲೇಖಿಸಿದೆ.
ಇನ್ನಿತರ ಕೋಡ್ವರ್ಡ್ಗಳು
- ಮಿನ್ಹಾಜ್ ಅಹ್ಮದ್ ಮನೆಯಿಂದ ವಶಪಡಿಸಿಕೊಂಡ ಪಿಸ್ತೂಲ್ ಕೋಡ್ ‘ಬುಕ್ ನಂಬರ್ 3
- ಪ್ರೆಶರ್ ಕುಕ್ಕರ್ ಬಾಂಬ್‌ನ ಕೋಡ್ ಪದ ಬುಕ್ ನಂಬರ್ 9 ಆಗಿತ್ತು.
- ಟೈಮ್ ಬಾಂಬ್ ಅನ್ನು ಕ್ರ್ಯಾಕರ್ ಎಂದು ಬರೆಯಲಾಗಿದೆ
- ಕಚ್ಚಾಬಾಂಬ್ ಅನ್ನು "ಹಗ್ಗ" ಎಂಬ ಕೋಡ್ ಪದದಲ್ಲಿ ಬರೆಯಲಾಗಿದೆ.
- ಆಟೋದ ಕೋಡ್ವರ್ಡ್ ಅನ್ನು ಫ್ಲೈಯಿಂಗ್ ಸಾಸರ್ ಎಂದು ಬರೆಯಲಾಗಿದೆ
- ಬಕ್ರಿದ್ಗೆ ಮೊದಲು ದಾಳಿ ನಡೆಸುವ ಕೃತ್ಯಕ್ಕೆ ಇಟ್ಟಿರುವ ಹೆಸರು ‘ಕುರ್ಬಾನಿ’
- ಪುಸ್ತಕವನ್ನು ಓದಿದ್ದೀರಿ, ಅಂದರೆ "ರೇಖಿ"
- ಪುಸ್ತಕದಲ್ಲಿ 7 ಪುಟಗಳಿವೆ, ಅಂದರೆ 7 ಸ್ಥಳಗಳಲ್ಲಿ ದಾಳಿ ನಡೆಸಬೇಕು.
- ಪುಸ್ತಕವನ್ನು ತಲುಪಿಸಲಾಗಿದೆ, ಎಂದರೆ ಬಾಂಬ್ ಅನ್ನು ಸ್ಥಳದಲ್ಲಿ ಇರಿಸಲಾಗಿದೆ ಎಂದರ್ಥ
ಇದನ್ನೂ ಓದಿ:ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕ..