ಲಕ್ನೋ: ಬೇಹುಗಾರಿಕೆ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಹಾಪುಡದಲ್ಲಿ ಸೈನಿಕನೋರ್ವನನ್ನು ಬಂಧಿಸಿದೆ.
ಆರೋಪಿ ಸೈನಿಕ 6 ತಿಂಗಳ ಹಿಂದೆ ಸ್ವಯಂಪ್ರೇರಿತ ನಿವೃತ್ತಿ ಪಡೆದಿದ್ದ. ಈತ ಪಾಕಿಸ್ತಾನ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸರ ತಂಡ ಬಂಧಿತ ಸೇನಾ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದೆ.
ಬಹದ್ದೂರ್ಘರ್ ಪ್ರದೇಶದ ಬಿಹುನಿ ಗ್ರಾಮದ ಸೌರವ್ ಶರ್ಮಾ ಬಂಧಿತ ಸೈನಿಕ. ಈತನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಕೆಲವು ದಾಖಲೆಗಳು ದೊರೆತಿವೆ.
ಇದೇ ತಂಡ 2 ದಿನಗಳ ಹಿಂದೆ ದಾಳಿ ನಡೆಸಿ ಮ್ಯಾನ್ಮಾರ್ ನಿವಾಸಿಯನ್ನು ಬಂಧಿಸಿತ್ತು. ಈತನ ಬಳಿ ಅನೇಕ ನಕಲಿ ದಾಖಲೆಗಳು, ಎರಡು ಪಾಸ್ಪೋರ್ಟ್ಗಳು ಮತ್ತು ಐದು ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದವು. ಇವೆಲ್ಲವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.