ETV Bharat / bharat

ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಕೋಪ.. ಮಲಗಿದ್ದ ಪ್ರೇಯಸಿ ಮೇಲೆ ಆ್ಯಸಿಡ್ ಎರಚಿದ ಕಿರಾತಕ..

ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, 16 ವರ್ಷದ ಬಾಲಕಿ ಹಾಗೂ ಆಕೆಯ ಸಹೋದರ ಮಲಗಿದ್ದ ವೇಳೆ, ಯಾರೋ ಬಂದು ಆ್ಯಸಿಡ್ ಎರಚಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಅದೇ ಗ್ರಾಮದ ನಿವಾಸಿ ಬಬ್ಲು ಲೋಧ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

Acid attack
Acid attack
author img

By

Published : Aug 30, 2021, 7:59 PM IST

ರಾಯ್‌ಬರೇಲಿ(ಉತ್ತರಪ್ರದೇಶ): ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜತೆ ಮದುವೆ ನಿಶ್ಚಯವಾಗಿದ್ದಕ್ಕೆ ಕೋಪಗೊಂಡ ಯುವಕ ಮಲಗಿದ್ದ ಪ್ರೇಯಸಿ ಮತ್ತು ಆಕೆಯ ಸಹೋದರನ ಮೇಲೆ ಆ್ಯಸಿಡ್ ಹಾಕಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ನಿನ್ನೆ ತಡರಾತ್ರಿ ರಾಯ್ ಬರೇಲಿಯ ಮಹಾರಾಜ್​ ಗಂಜ್​ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕಂದರ್​ಪುರದಲ್ಲಿ ಈ ಪ್ರಕರಣ ನಡೆದಿದೆ. ಯುವಕ ಆ್ಯಸಿಡ್ ಸುರಿಯುತ್ತಿದ್ದಂತೆ ಇಬ್ಬರೂ ಕಿರುಚಾಡಿದ್ದಾರೆ.

ಕೂಡಲೇ ಕುಟುಂಬಸ್ಥರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಲ್ಲಿನ ವೈದ್ಯರು ಲಖನೌಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಘಟನೆಯಲ್ಲಿ ಯುವತಿ ಹಾಗೂ ಸಹೋದರನ ಮುಖ ಸುಟ್ಟು ಕರಕಲಾಗಿವೆ.

ಇದನ್ನೂ ಓದಿ: ಶಿವಸೇನೆ ಸಂಸದೆ ಭಾವನಾಗೆ ಇಡಿ ಶಾಕ್ ​: ಐದು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ

ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, 16 ವರ್ಷದ ಬಾಲಕಿ ಹಾಗೂ ಆಕೆಯ ಸಹೋದರ ಮಲಗಿದ್ದ ವೇಳೆ, ಯಾರೋ ಬಂದು ಆ್ಯಸಿಡ್ ಎರಚಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಅದೇ ಗ್ರಾಮದ ನಿವಾಸಿ ಬಬ್ಲು ಲೋಧ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.