ETV Bharat / bharat

ರಾಷ್ಟ್ರ ರಾಜಧಾನಿಗೆ ಲಾಕ್​ಡೌನ್​ನಿಂದ ಮುಕ್ತಿ: ಸೋಮವಾರದಿಂದ ಅನ್​​ಲಾಕ್​​​​ ಪ್ರಕ್ರಿಯೆ ಆರಂಭ - Delhi unlock news

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಪಾಸಿಟಿವಿಟಿ ರೇಟ್​ ಶೇ. 1.5ಕ್ಕೆ ಇಳಿಕೆಯಾಗಿದ್ದು, ಸೋಮವಾರದಿಂದ ಅನ್​​ಲಾಕಿಂಗ್​​ ಪ್ರಕ್ರಿಯೆ ಆರಂಭವಾಗಲಿದೆ.

unlocking process in Delhi begins from Monday
ರಾಷ್ಟ್ರ ರಾಜಧಾನಿಗೆ ಲಾಕ್​ಡೌನ್​ನಿಂದ ಮುಕ್ತಿ
author img

By

Published : May 28, 2021, 2:01 PM IST

ನವದೆಹಲಿ: ಕಠಿಣ ಲಾಕ್​ಡೌನ್​ ವಿಧಿಸಿ ರಾಷ್ಟ್ರ ರಾಜಧಾನಿಯಲ್ಲಿನ ಭೀಕರ ಕೋವಿಡ್​ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಶಸ್ವಿಯಾಗಿದ್ದು, ಇದೀಗ ಅನ್​​ಲಾಕ್​ನತ್ತ ಹೆಜ್ಜೆ ಹಾಕಿದ್ದಾರೆ.

ಲಾಕ್‌ಡೌನ್ ನಿಯಮವು ಮೇ 31 ಅಂದರೆ ಸೋಮವಾರ ಬೆಳಗ್ಗೆವರೆಗೆ ಇರುತ್ತದೆ. ಆ ಬಳಿಕ ನಾವು ಹಂತ ಹಂತವಾಗಿ ಅನ್​​ಲಾಕಿಂಗ್​​ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ದಿನಗೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸೋಮವಾರದಿಂದ ನಿರ್ಮಾಣ ಚಟುವಟಿಕೆಗಳು ಮತ್ತು ಕಾರ್ಖಾನೆಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.

ಕೊರೊನಾ 2ನೇ ಅಲೆ ಆರಂಭದಲ್ಲಿ ದಿನವೊಂದರಲ್ಲೇ 40 ಸಾವಿರ ಕೋವಿಡ್​ ಕೇಸ್​ಗಳು, ಸುಮಾರು 400 ಸಾವು ವರದಿಯಾಗುತ್ತಿತ್ತು. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್​ ರೋಗಿಗಳು ಮೃತಪಡುತ್ತಿದ್ದರು. ಪರಿಸ್ಥಿತಿ ನಿಯಂತ್ರಿಸುವ ಪಣ ತೊಟ್ಟ ಸಿಎಂ, ಏಪ್ರಿಲ್​ 19ರಿಂದ ಲಾಕ್​ಡೌನ್​ ಜಾರಿ ಮಾಡಿ, ಲಾಕ್​ಡೌನ್​ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್ ಸೇರಿದಂತೆ ಇತರ ತುರ್ತು ವೈದ್ಯಕೀಯ ಸೇವೆಯ ವ್ಯವಸ್ಥೆ​ ಮಾಡಿದರು.

ಇದನ್ನೂ ಓದಿ: ಆಕ್ಸಿಜನ್‌ ಸಿಗದೆ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ದೆಹಲಿ ಸರ್ಕಾರ

ಇದರ ಪರಿಣಾಮವಾಗಿ ಇದೀಗ ಕಳೆದ 24 ಗಂಟೆಗಳಲ್ಲಿ 1,100 ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್​ ಶೇ. 1.5ಕ್ಕೆ ಇಳಿಕೆಯಾಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದ ದೆಹಲಿ ಸರ್ಕಾರ, ಇದೀಗ ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಕೋವಿಡ್​ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಕೂಡ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.