ಸಿರ್ಮೌರ್ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ವಿಶಿಷ್ಟ ಮದುವೆ ಸಮಾರಂಭ ನಡೆದಿದೆ. ವಧು ಮೆರವಣಿಗೆಯೊಂದಿಗೆ ವರನ ಮನೆಗೆ ಬಂದು, ಎಲ್ಲ ಮದುವೆಯ ವಿಧಿವಿಧಾನಗಳನ್ನು ವರನ ಮನೆಯಲ್ಲಿ ನೆರವೇರಿಸಲಾಗಿದೆ. ಇದು ಹಾಟಿ ಸಮುದಾಯದ ವಿಶಿಷ್ಟ ಮದುವೆ ಪದ್ಧತಿಯಾಗಿದ್ದು, ಇದನ್ನು ಜಜ್ದಾ ಅಭ್ಯಾಸ ಎಂದು ಕರೆಯಲಾಗುತ್ತದೆ.
ಇಲ್ಲಿನ ಶಿಲ್ಲೈ ಉಪವಿಭಾಗದ ಕುಸೇನು ಗ್ರಾಮದ ರಾಜೇಂದ್ರ ಪಾಂಡೆ ಎಂಬುವರು ಉತ್ತರಾಖಂಡದ ಚಕ್ರತಾಳದ ಸುಮನ್ ಜೋಶಿ ಅವರನ್ನು ವಿವಾಹವಾಗಿದ್ದರು. ಸಾಮಾನ್ಯವಾಗಿ ಮದುವೆಯಲ್ಲಿ ವರನು ಮೆರವಣಿಗೆಯೊಂದಿಗೆ ವಧುವಿನ ಮನೆಗೆ ಬಂದು, ಅಲ್ಲಿಯ ಮದುವೆ ಕಾರ್ಯದ ನಂತರ ತನ್ನೊಂದಿಗೆ ವಧುವನ್ನು ಮನೆಗೆ ಕರೆತರುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ಹಿಮಾಚಲ ಪ್ರದೇಶದಲ್ಲಿ ನಡೆದ ಈ ಮದುವೆಯಲ್ಲಿ ವಧು ಮದುವೆಯ ಮೆರವಣಿಗೆಯೊಂದಿಗೆ ವರನ ಮನೆಗೆ ಬಂದಿದ್ದಾರೆ.
ಇದೇ ಹಾಟಿ ಸಮುದಾಯದ ವಿಶಿಷ್ಟ ಸಂಪ್ರದಾಯವಾಗಿದ್ದು, ಕುಸೇನು ಗ್ರಾಮದಲ್ಲಿ ರಾಜೇಂದ್ರ ಪಾಂಡೆ ಮದುವೆ ಸಹ ಇದೇ ಪದ್ಧತಿಯಂತೆ ನಡೆದಿದೆ. ಮದುವೆ ಮರೆವಣಿಗೆಯಲ್ಲಿ ಕಂಗೊಳಿಸುತ್ತಿದ್ದ ಸುಮನ್ ಜೋಶಿ ತನ್ನ ಕುಟುಂಬ ಸದಸ್ಯರೊಂದಿಗೆ 100 ಬಾರಾತಿಗಳೊಂದಿಗೆ ರಾಜೇಂದ್ರನ ಮನೆ ತಲುಪಿದ್ದಾರೆ. ತದನಂತರ ವರನ ಮದುವೆಯ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಎರಡು ದಿನಗಳ ಆತಿಥ್ಯದ ನಂತರ ವಧು ವರನೊಂದಿಗೆ ತನ್ನ ಅತ್ತೆಯ ಮನೆಗೆ ಹಿಂದಿರುಗುತ್ತಾಳೆ.
ಇದನ್ನೂ ಓದಿ: ಮದುವೆ ದಿಬ್ಬಣಕ್ಕೆ ತೆರಳಿದವರು ಮಸಣ ಸೇರಿದರು..!
ಜಜ್ದಾ ಸಂಪ್ರದಾಯದ ಪ್ರಕಾರ ವರನು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಅಷ್ಟೇ ಅಲ್ಲ, ವಧುವಿನ ಮನೆಯನ್ನು ವರ ಸುತ್ತುವುದಿಲ್ಲ. ಪ್ರಮುಖವಾಗಿ ಈ ಪದ್ಧತಿಯಡಿಯಲ್ಲಿ ನಡೆದ ಈ ಮದುವೆಯಲ್ಲಿ ಮಾದಕ ದ್ರವ್ಯ ಸೇವನೆ ನಿಷೇಧ ಇರುತ್ತದೆ. ಮದುವೆ ಮನೆಯಲ್ಲಿ ಮದ್ಯ ಸೇವನೆ ಸಹ ನಡೆಸುವಂತಿಲ್ಲ. ಗಿರಿಪರ್ ಪ್ರದೇಶದ ಸಂಪ್ರದಾಯಗಳು ಮತ್ತು ಪದ್ಧತಿಗಳು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ ಎನ್ನುತ್ತಾರೆ ಹಿರಿಯರು.
ಈ ಪದ್ಧತಿಯಲ್ಲಿ ನಡೆಯುವ ಮದುವೆಯಲ್ಲಿ ಮದುವೆಯ ಎಲ್ಲ ವೆಚ್ಚವನ್ನು ವರನ ಕಡೆಯ ಜನರು ಸಹ ಭರಿಸುತ್ತಾರೆ. ಇದರೊಂದಿಗೆ ವರದಕ್ಷಿಣೆಯನ್ನೂ ತೆಗೆದುಕೊಳ್ಳುವುದಿಲ್ಲ. ಮದುವೆ ಸಮಾರಂಭದಲ್ಲಿ ಹಳ್ಳಿಯ ಹೆಂಗಸರು ರೊಟ್ಟಿ ಮಾಡುತ್ತಾರೆ. ಆದರೆ ಊರಿನ ಗಂಡಸರು ಹಿಟ್ಟನ್ನು ಕಲಸುತ್ತಾರೆ. ಇದಲ್ಲದೇ ತರಕಾರಿ ಕತ್ತರಿಸುವುದರಿಂದ ಹಿಡಿದು ಖಾದ್ಯ ತಯಾರಿಸುವವರೆಗೂ ಪುರುಷರೇ ಮಾಡುತ್ತಾರೆ. ಮಹಿಳೆಯರು ರೊಟ್ಟಿಗಳನ್ನು ಮಾತ್ರ ಮಾಡುತ್ತಾರೆ. ಮದುವೆಯ ದಿನದಂದು ಅಡುಗೆ ಮಾಡುವ ಪುರುಷರಿಗಾಗಿ ನಂತರದಲ್ಲಿ ಪ್ರತ್ಯೇಕ ಪಾರ್ಟಿಯನ್ನು ಏರ್ಪಡಿಸಲಾಗುತ್ತದೆ.
ಹಿಮಾಚಲ ಪ್ರದೇಶದ ಜನಪದ ಸಂಸ್ಕೃತಿ, ಜಾನಪದ ಸಂಪ್ರದಾಯ ಹಾಗೂ ಉತ್ತರಾಖಂಡದ ಜಾನ್ಸಾರ್ - ಬಾವಾರ್ ಮತ್ತು ಸಿರ್ಮೌರ್‌ನ ಗಿರಿಪಾರ್ ಅವರ ಜೀವನಶೈಲಿ ಹೋಲುತ್ತದೆ. ಜನರ ಆಡುಭಾಷೆ, ಉಡುಗೆ ತೊಡುಗೆ, ಸಂಪ್ರದಾಯಗಳು, ಜೀವನಶೈಲಿ, ಆಹಾರ ಮತ್ತು ಪದ್ಧತಿಗಳು ಬಹುತೇಕ ಒಂದೇ ಆಗಿವೆ ಅನ್ನೋದು ವಿಶೇಷ ಎಂದು ಕೇಂದ್ರ ಹಾಟಿ ಸಮಿತಿಯ ಉಪಾಧ್ಯಕ್ಷ ವಕೀಲ ಸುರೇಂದ್ರ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ: 28 ವರ್ಷದ ಸೊಸೆಯನ್ನೇ ಮದುವೆಯಾದ 70ರ ಮಾವ!