ETV Bharat / bharat

6 ತಿಂಗಳು ನಾಪತ್ತೆ ಬಳಿಕ ಮಹಿಳೆ ದಿಢೀರ್​ ಪ್ರತ್ಯಕ್ಷ.. ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ಗಂಡ! - ಸತ್ತ ಮಹಿಳೆ ದಿಢೀರ್ ಪ್ರತ್ಯಕ್ಷ

ಕೊಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ವ್ಯಕ್ತಿಯನ್ನು ಜೈಲಿಗಟ್ಟಿದ 6 ತಿಂಗಳ ಬಳಿಕ ಮಹಿಳೆ ತವರು ಮನೆಯಲ್ಲಿ ಪ್ರತ್ಯಕ್ಷವಾದ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ.

unique murder story of woman in bihar
ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ಗಂಡ
author img

By

Published : Sep 8, 2022, 10:55 PM IST

ಸೀತಾಮರ್ಹಿ(ಬಿಹಾರ): ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಪತಿ ಜೈಲು ಶಿಕ್ಷೆಗೆ ಒಳಗಾಗಿದ್ದ. 6 ತಿಂಗಳು ಕಳೆದ ಬಳಿಕ ಅದೇ ಪತ್ನಿ ದಿಢೀರ್​ ಆಗಿ ನೇಪಾಳದ ಆಕೆಯ ತವರು ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಅಚ್ಚರಿಯ ವಿದ್ಯಮಾನ ಬಿಹಾರದಲ್ಲಿ ಚರ್ಚೆಗೀಡಾಗಿದೆ. ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಮಾತ್ರ ಅನ್ಯಾಯವಾಗಿ 6 ತಿಂಗಳು ಜೈಲು ವಾಸ ಅನುಭವಿಸುಂತಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಏನ್​ ನಡೀತು?: ಇದು 7 ತಿಂಗಳ ಹಿಂದೆ ನಡೆದ ಘಟನೆ. ನೇಪಾಳದ ಕುಟುಂಬವೊಂದು ಬಿಹಾರದ ವ್ಯಕ್ತಿಗೆ ತಮ್ಮ ಮಗಳನ್ನು ವಿವಾಹ ಮಾಡಿಕೊಟ್ಟಿದ್ದರು. ಇವರಿಗೆ ಓರ್ವ ಪುತ್ರ ಕೂಡ ಇದ್ದಾನೆ. ಬುದ್ಧಿಮಾಂದ್ಯೆಯಾಗಿದ್ದ ಪತ್ನಿಯನ್ನು ತೊರೆಯಲು ಪತಿ ಹಲವು ಯತ್ನ ಮಾಡಿದ್ದ. ಈ ಬಗ್ಗೆ ಆಕೆಯ ಕುಟುಂನಬಸ್ಥರಲ್ಲೂ ಚಕಾರ ಎತ್ತಿದ್ದ.

ಕುಟುಂಬ ಕಲಹವನ್ನು ಹಿರಿಯರ ಸಮ್ಮುಖದಲ್ಲಿ ಸರಿ ಮಾಡಲಾಗಿತ್ತು. ಒಂದು ದಿನ ಮಹಿಳೆಯ ಪತಿ ಆಕೆಯನ್ನು ಕರೆದೊಯ್ದು ಮುಜಾಫರ್​ಪುರ ರೈಲು ನಿಲ್ದಾಣದ ಬಳಿ ಯಾರಿಗೂ ಅನುಮಾನ ಬಾರದ ಹಾಗೆ ಬಿಟ್ಟು ಹೋಗಿದ್ದ. ಬಳಿಕ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನಾಟಕ ಮಾಡಿದ್ದ.

ಇತ್ತ ಮಹಿಳೆಯ ಕುಟುಂಬಸ್ಥರು ಪತಿಯ ಮೇಲೆ ದೂರು ನೀಡಿ ವರದಕ್ಷಿಣೆಗಾಗಿ ಆಕೆಯನ್ನು ಸುಟ್ಟು ಹಾಕಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಹೀಗಿರುವಾಗ ಸತ್ತಿದ್ದಾಳೆ ಎಂದು ತಿಳಿದಿದ್ದ ಮಹಿಳೆ ಬರೋಬ್ಬರಿ 6 ತಿಂಗಳ ಬಳಿಕ ದಿಢೀರ್​ ಆಗಿ ನೇಪಾಳದಲ್ಲಿನ ಆಕೆಯ ತವರು ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಇದು ಕುಟುಂಬಸ್ಥರನ್ನು ಅಚ್ಚರಿ ಮೂಡಿಸಿದೆ. ಬಳಕ ಆಕೆಯ ವಶಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆ ಕುಟುಂಬಸ್ಥರು ಹೇಳೋದೇನು?: ಮಂದಬುದ್ಧಿ ಇರುವ ಈಕೆಯನ್ನು ಪತಿ ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ. ಬಳಿಕ ಆಕೆ ಎಲ್ಲಿಗೂ ಹೋಗಲಾಗದೇ ರೈಲು ಹತ್ತಿ ಹೋಗಿದ್ದಾಳೆ. 6 ತಿಂಗಳ ಬಳಿಕ ಇಲ್ಲಿಗೆ ಬಂದಿದ್ದಾಳೆ. ನಾವು ಆಕೆಯನ್ನು ಕೊಲೆ ಮಾಡಲಾಗಿತ್ತು ಎಂದು ತಿಳಿದಿದ್ದೆವು ಎಂದು ಹೇಳಿಕೆ ನೀಡಿದ್ದಾರೆ.

ಓದಿ: ತನ್ನ ಕಾಲಿಗೆ ಕಡಿದ ಹಾವನ್ನೇ ಕಚ್ಚಿ ಸಾಯಿಸಿದ ಭೂಪ: ಕೊರಳಿಗೆ ಸುತ್ತಿಕೊಂಡು ಊರೆಲ್ಲ ಸುತ್ತಾಟ.. ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.