ಭಾಗಲ್ಪುರ್(ಬಿಹಾರ): ಮದುವೆ ಸ್ವರ್ಗದಲ್ಲೇ ನಿಶ್ಚಿಯವಾಗಿರುತ್ತದೆ, ಪ್ರತಿಯೊಬ್ಬರಿಗೂ ಬಾಳ ಸಂಗಾತಿಯನ್ನ ದೇವರೇ ನಿಗದಿ ಮಾಡಿರುತ್ತಾನೆ ಎಂದು ಹೇಳಲಾಗ್ತದೆ. ಬಿಹಾರದಲ್ಲಿ ನಡೆದಿರುವ ಈ ವಿಶಿಷ್ಟ ಮದುವೆಯೊಂದು ಅದಕ್ಕೆ ಪೂರಕ ಎನ್ನಿಸದೇ ಇರದು... ಭಾಗಲ್ಪುರದಲ್ಲಿ ಈ ವಿಶಿಷ್ಟ ಮದುವೆ ನಡೆದಿದ್ದು, 36 ಇಂಚಿನ ವರನ ಜೊತೆ 34 ಇಂಚಿನ ವಧು ಸಪ್ತಪದಿ ತುಳಿದಿದ್ದಾಳೆ.
ಅಭಿಯಾ ಬಜಾರ್ ನಿವಾಸಿ ಕಿಶೋರಿ ಮಂಡಲ್ ಅವರ ಪುತ್ರಿ ಮಮತಾ ಕುಮಾರಿ(24) ಮಸಾರು ನಿವಾಸಿ ಬಿಂದೇಶ್ವರಿ ಅವರ ಪುತ್ರ ಮುನ್ನಾ ಭಾರತಿ(26) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಭಿನ್ನ ಮದುವೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಜೊತೆಗೆ ವಧು-ವರರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಮಮತಾ- ಮುನ್ನಾ ವಿವಾಹ ಬಂಧನದಲ್ಲಿ ಒಂದಾದರು. ಈ ವಿಶಿಷ್ಟ ಮದುವೆ ಜಿಲ್ಲಾದ್ಯಂತ ಸುದ್ದಿಯಾಗಿ ಜನರು ತಂಡೋಪತಂಡವಾಗಿ ಬಂದು ವಧುವರರನ್ನು ಆಶೀರ್ವದಿಸಿದರು.

ಇದನ್ನೂ ಓದಿ: ಅಪ್ರಾಪ್ತ ಮಗಳನ್ನೇ ಜೀವಂತ ಸುಟ್ಟಿದ್ದ ಪಾಪಿಗಳು.. ತಾಯಿ, ಅಜ್ಜಿಗೆ ಶಿಕ್ಷೆ ವಿಧಿಸಿದ ಕೋರ್ಟ್
ವಧು-ವರರೊಂದಿಗೆ ಸೆಲ್ಫಿ ತೆಗೆಯಲು ಪೈಪೋಟಿ: ಈ ವಿಶಿಷ್ಟ ಮದುವೆ ನಡೆಯುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಜನಸಾಗರವೇ ಹರಿದು ಬಂತು. ವಧು - ವರರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರ ನಡುವೆ ಪೈಪೋಟಿ ಏರ್ಪಟ್ಟಿತು. ವರ ಮುನ್ನಾ ನೃತ್ಯ ಪಾರ್ಟಿಯಲ್ಲಿ ಕಲಾವಿದರಾಗಿ ಕೆಲಸ ಮಾಡ್ತಿದ್ದು, ಸರ್ಕಸ್ಗಳಲ್ಲೂ ಭಾಗಿಯಾಗಿ ಸಂಪಾದನೆ ಮಾಡ್ತಿದ್ದಾರೆ.