ETV Bharat / bharat

ಆರ್‌ಜೆಡಿ- ಜೆಡಿಯು ಮೈತ್ರಿ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ - ನಿತೀಶ್ ಕುಮಾರ್

ಆರ್‌ಜೆಡಿ ಹಾಗೂ ಜೆಡಿಯು ಮೈತ್ರಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಕ್​ ಸಮರ- ನಿತೀಶ್ ಕುಮಾರ್ ಹಾಗೂ ಲಾಲು ಪ್ರಸಾದ್ ಮೈತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ

Union Home Minister Amit Shah
ಆರ್‌ಜೆಡಿ- ಜೆಡಿಯು ಮೈತ್ರಿ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ
author img

By

Published : Feb 25, 2023, 8:28 PM IST

ಲೌರಿಯಾ (ಬಿಹಾರ): ನಿತೀಶ್ ಕುಮಾರ್ ತಮ್ಮ ರಾಜಕೀಯ ಲಾಭಕ್ಕಾಗಿ ಅಂದ್ರೆ, ಪ್ರಧಾನಿಯಾಗುವ ಕನಸಿಗಾಗಿ ಕಾಂಗ್ರೆಸ್​ನೊಂದಿಗೆ ಕೈಜೋಡಿಸಿದ್ದಾರೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ''ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಬಿಹಾರದ ಮುಖ್ಯಮಂತ್ರಿಯಾಗಿಸಲು ಜೆಡಿಯು ವರಿಷ್ಠರು ರಹಸ್ಯವಾಗಿ ಒಪ್ಪಿಕೊಂಡಿದ್ದಾರೆ ಎಂದು ಅಮಿತ್​ ಶಾ ಹೇಳಿದರು.

ನಿತೀಶ್ ಕುಮಾರ್​ಗೆ ಸವಾಲು ಹಾಕಿ ಶಾ: ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತೀಶ್ ಕುಮಾರ್ ಅವರು ಆ ರಹಸ್ಯ ಒಪ್ಪಂದವನ್ನು ಯಾವಾಗ ಬಹಿರಂಗವಾಗಿ ತಿಳಿಸುತ್ತಾರೆ ಎಂಬುದನ್ನು ಘೋಷಿಸಲಿ ಎಂದ ಅವರು, ನಾನು ರಹಸ್ಯ ಒಪ್ಪಂದದ ವಿಷಯದ ಕುರಿತು ಮಾತನಾಡಲು ಬಯಸುತ್ತೇನೆ. ಈ ಬಗ್ಗೆ ನಿತೀಶ್ ಕುಮಾರ್‌ಗೆ ಸವಾಲು ಹಾಕಲು ಬಯಸುತ್ತೇನೆ ಎಂದರು.

ಅವರು ಲಾಲೂ ಜಿ ಅವರ ಮಗನನ್ನು (ತೇಜಸ್ವಿ ಯಾದವ್) ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಿಮಗೆ ತಿಳಿದಿದೆಯೇ? ಆದರೆ, ನಿತೀಶ್ ಅವರು ಈ ಬಗ್ಗೆ ಪ್ರಸ್ತಾಪವನ್ನು ಮಾಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಇರಬೇಕು ಎಂದು ನಾನು ನಿತೀಶ್ ಅವರನ್ನು ಕೇಳುತ್ತೇನೆ. ನೀವು ಲಾಲೂ ಅವರ ಪುತ್ರನನ್ನು ಮುಖ್ಯಮಂತ್ರಿ ಮಾಡುವ ಭರವಸೆ ನೀಡಿದ್ದರೆ, ಬಿಹಾರದಲ್ಲಿ ಮತ್ತೊಮ್ಮೆ 'ಜಂಗಲ್ ರಾಜ್' ಸ್ಥಾಪಿಸುವ ವಿಚಾರವನ್ನು ಘೋಷಣೆ ಮಾಡಬೇಕು ಎಂದು ಶಾ ಸವಾಲು ಹಾಕಿದರು.

  • नीतीश कुमार ने लालू प्रसाद जी के बेटे को मुख्यमंत्री बनाने का एक गुप्त समझौता किया है, पर कब बनायेंगे उसकी तिथि नहीं बताते हैं। pic.twitter.com/k1FW8y6UCA

    — Amit Shah (@AmitShah) February 25, 2023 " class="align-text-top noRightClick twitterSection" data=" ">

'ಜಂಗಲ್ ರಾಜ್' ಆಗಿಸಲು ಹೊರಟ ನಿತೀಶ್​: ಇನ್ನೂ ಬಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡಿದ ಶಾ, ನಿತೀಶ್​ ಕುಮಾರ್ ಅವರು ಬಿಹಾರವನ್ನು 'ಜಂಗಲ್ ರಾಜ್' ಆಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಜಯಪ್ರಕಾಶ್ ನಾರಾಯಣ್ ಅವರ ಕಾಲದಿಂದಲೂ ನಿತೀಶ್ ಕುಮಾರ್ ಕಾಂಗ್ರೆಸ್ ಮತ್ತು ಜಂಗಲ್ ರಾಜ್ ವಿರುದ್ಧ ಹೋರಾಡಿದ್ದರು. ಈಗ ಜಂಗಲ್ ರಾಜ್‌ನ ಪ್ರವರ್ತಕ ಲಾಲೂ ಪ್ರಸಾದ್ ಅವರ ಮಡಿಲಲ್ಲಿ ಹಾಗೂ ಸೋನಿಯಾ ಅವರ ಪಾದದ ಮೇಲೆ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆರ್‌ಜೆಡಿ- ಜೆಡಿಯು ಮೈತ್ರಿ ವಿರುದ್ಧ ಗರಂ: ಆಯಾ ರಾಮ್, ಗಯಾ ರಾಮ್ ಎನ್ನುವ ಸಂಸ್ಕೃತಿಯನ್ನು ಇಲ್ಲಿಗೆ ನಿಲ್ಲಿಸಬೇಕು. ನಿತೀಶ್ ಕುಮಾರ್‌ಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂದ ಅವರು, ಆರ್‌ಜೆಡಿ ಜೊತೆಗಿನ ಜೆಡಿಯು ಮೈತ್ರಿಯು ನೀರಿನಲ್ಲಿ ಎಣ್ಣೆ ಬೆರೆಸುವ ಪ್ರಯತ್ನವಾಗಿದೆ. ನೀರು ಮತ್ತು ಎಣ್ಣೆ ಎಂದಿಗೂ ಮಿಶ್ರಣವಾಗುವುದಿಲ್ಲ. ಇದರಿಂದ ಎರಡು ಪಕ್ಷಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ ಎಂದು ಕೇಂದ್ರ ಗೃಹ ಸಚಿವರು ನೆನಪಿಸಿಕೊಂಡರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ನಿತೀಶ್​ ಕುಮಾರ್ ಅವರನ್ನು ಬೆಂಬಲಿಸುವ ಭರವಸೆಯನ್ನೂ ನೀಡಿದ್ದರು. ಆ ನಂಬಿಕೆಯನ್ನು ನಿತೀಶ್​ ಕುಮಾರ್​ ಉಳಿಸಿಕೊಳ್ಳಲಿಲ್ಲ ಎಂದು ಗರಂ ಆದರು.

ಬಿಹಾರದಲ್ಲಿ ಬಿಜೆಪಿಗೆ ಲಭಿಸಲಿದೆ ಬಹುಮತ: ನಿತೀಶ್ ಮತ್ತು ಲಾಲು ಬಿಹಾರವನ್ನು ಹಿಂದುಳಿದಿರುವಿಕೆಯ ಸುಳಿಯಿಂದ ಹೊರತರಲು ಸಾಧ್ಯವಿಲ್ಲ. ಬಿಜೆಪಿಯು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ತನ್ನದೇ ಆದ ಸರ್ಕಾರವನ್ನು ರಚಿಸುವ ಸಮಯ ದಟ್ಟವಾಗಿ ಕಾಣಿಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಪಕ್ಷ ಗೆಲುವಿನ ನಗೆ ಬೀರಲಿದೆ ಎಂದ ಅವರು, ನರೇಂದ್ರ ಮೋದಿ ಸರ್ಕಾರವು ರಾಜ್ಯಕ್ಕೆ ಒದಗಿಸಿದ ಕೇಂದ್ರದ ನೆರವಿನ ಬಗ್ಗೆಯೂ ಉಲ್ಲೇಖಿಸಿದರು. ಲಾಲು ಪ್ರಸಾದ್ ಸ್ವತಃ ಸಚಿವರಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಬಿಹಾರಕ್ಕೆ ದೊರೆತ ಅನುದಾನಕ್ಕಿಂತಲೂ ದುಪ್ಪಟ್ಟಿದೆ ಎಂದು ಅಮಿತ್​ ಶಾ ಪ್ರತಿಪಾದಿಸಿದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್​ ಕೊನೆಗೊಂಡಿದ್ದಕ್ಕೆ ಸಂತೋಷ: ನಿವೃತ್ತಿ ಸುಳಿವು ಕೊಟ್ರಾ ಸೋನಿಯಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.