ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ದಿನಾಂಕ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರವೇಶಕ್ಕೆ ಅರ್ಹತಾ ಮಾನದಂಡಗಳನ್ನು ಜನವರಿ 7 ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಪ್ರಕಟಿಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಸಚಿವರು, "ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ಐಐಟಿಯಲ್ಲಿ ಪ್ರವೇಶ ಪಡೆಯಲು ಅರ್ಹತಾ ಮಾನದಂಡಗಳನ್ನು ಮತ್ತು ಜೆಇಇ ಅಡ್ವಾನ್ಸ್ಡ್ ದಿನಾಂಕವನ್ನು ಜ. 7 ರಂದು ಸಂಜೆ 6 ಗಂಟೆಗೆ ಪ್ರಕಟಿಸುತ್ತೇನೆ" ಎಂದು ಹೇಳಿದ್ದಾರೆ.
-
My dear students,
— Dr. Ramesh Pokhriyal Nishank (@DrRPNishank) January 4, 2021 " class="align-text-top noRightClick twitterSection" data="
I will announce the eligibility criteria for admission in #IITs & the date of #JEE Advanced on 7th Jan at 6 PM.
Stay tuned! pic.twitter.com/PHvDj2xzd5
">My dear students,
— Dr. Ramesh Pokhriyal Nishank (@DrRPNishank) January 4, 2021
I will announce the eligibility criteria for admission in #IITs & the date of #JEE Advanced on 7th Jan at 6 PM.
Stay tuned! pic.twitter.com/PHvDj2xzd5My dear students,
— Dr. Ramesh Pokhriyal Nishank (@DrRPNishank) January 4, 2021
I will announce the eligibility criteria for admission in #IITs & the date of #JEE Advanced on 7th Jan at 6 PM.
Stay tuned! pic.twitter.com/PHvDj2xzd5
ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನಾಯಕತ್ವ ಶ್ಲಾಘಿಸಿದ ಬಿಲ್ ಗೇಟ್ಸ್
ಜೆಇಇ ಅಡ್ವಾನ್ಸ್ಡ್, ದೇಶದ 23 ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ಗೆ ಪ್ರವೇಶಾತಿ ಪಡೆಯಲು ನಡೆಸುವ ಪ್ರಮುಖ ಪ್ರವೇಶ ಪರೀಕ್ಷೆಯಾಗಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಜಂಟಿ ಪ್ರವೇಶ ಮಂಡಳಿಯ ಆದೇಶದಂತೆ ಎಲ್ಲಾ ಅರ್ಹತಾ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.