ETV Bharat / bharat

ರೈತರಿಗೆ ಶುಭ ಸುದ್ದಿ: ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಪ್ರಮುಖ ಖಾರೀಫ್ ಬೆಳೆಗಳಲ್ಲಿ ಒಂದಾಗಿ ಭತ್ತಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಏರಿಕೆ ಮಾಡಿದೆ. ಪ್ರತಿ ಕ್ವಿಂಟಾಲ್​​ ಮೇಲೆ 72 ರೂಪಾಯಿ ಹೆಚ್ಚಿಸಿದೆ..

ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

author img

By

Published : Jun 9, 2021, 4:52 PM IST

ನವದೆಹಲಿ : ಕೇಂದ್ರ ಸರ್ಕಾರವು ಕೋವಿಡ್ ಸಂಕಷ್ಟಕ್ಕೆ ತುತ್ತಾಗಿರುವ ರೈತರ ನೆರವಿಗೆ ಧಾವಿಸಿದೆ. ಭತ್ತದ ಬೆಂಬಲ ಬೆಲೆಯನ್ನ ಏರಿಕೆ ಮಾಡಿದೆ. 2021-22ನೇ ಸಾಲಿನಲ್ಲಿ ಈ ಮೊದಲು ಪ್ರತಿ ಕ್ವಿಂಟಾಲ್​ಗೆ 1,868 ರೂ. ಎಂಎಸ್​​​ಪಿ ನೀಡಲಾಗುತ್ತಿತ್ತು. ಈಗ 72 ರೂಪಾಯಿಗೆ ಹೆಚ್ಚಿಸಿ ಪ್ರತಿ ಕ್ವಿಂಟಾಲ್​​ಗೆ 1,940 ರೂಪಾಯಿ ನೀಡಲು ನಿರ್ಧರಿಸಿದೆ. ಈ ಕುರಿತು ನಿರ್ಧಾರ ಪ್ರಕಟಿಸಿರುವ ಸಚಿವ ನರೇಂದ್ರ ಸಿಂಗ್ ತೋಮರ್, ಮುಂದಿನ ಮಾರುಕಟ್ಟೆ ವರ್ಷದಲ್ಲಿ ಬೆಳೆಗೆ ಶೇ.62ರಷ್ಟು ಎಂಎಸ್​ಪಿ ಹಾಗೂ ಉದ್ದಿಗೆ ಶೇ.65ರಷ್ಟು ಹೆಚ್ಚಿಲಾಗುವುದು ಎಂದಿದ್ದಾರೆ.

ಅಲ್ಲದೆ ಕೃಷಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನ ಹೆಚ್ಚಿಸಲಾಗುತ್ತಿದೆ. ಭವಿಷ್ಯದಲ್ಲಿಯೂ ಇದನ್ನು ಹೆಚ್ಚಿಸಲಾಗುತ್ತದೆ ಎಂದಿದ್ದು, ಈ ಮೂಲಕ ಎಂಎಸ್​​ಪಿಗಳ ಏರಿಕೆ ಕುರಿತು ಸುಳಿವು ನೀಡಿದ್ದಾರೆ. ಇದಲ್ಲದೆ ಭಾರತೀಯ ರೈಲ್ವೆ ಸಂಬಂಧಿಸಿ ಕ್ಯಾಬಿನೆಟ್​​ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಭಾರತೀಯ ರೈಲ್ವೆಗೆ 5 ಮೆಗಾ ಹರ್ಟ್ಸ್​​​ ಸ್ಪೆಕ್ಟ್ರಮ್​ನ 700 ಮೆಗಾಹರ್ಟ್ಸ್​ ಬ್ಯಾಂಡ್ ನೀಡಲು ಅನುಮೋದನೆ ನೀಡಲಾಗಿದೆ.

700 ಮೆಗಾಹರ್ಟ್ಸ್​​​ ಬ್ಯಾಂಡ್‌ನಲ್ಲಿ ರೈಲ್ವೆಗೆ 5 ಮೆಗಾಹರ್ಟ್ಜ್ ಸ್ಪೆಕ್ಟ್ರಮ್ ನೀಡಲಾಗುವುದು. ಇದು ತನ್ನ ಸಂವಹನ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ರೈಲ್ವೆ ಪ್ರಯಾಣವನ್ನು ಸುರಕ್ಷಿತವಾಗಿಸುತ್ತದೆ. ರೈಲ್ವೆ ಪ್ರಸ್ತುತ ಆಪ್ಟಿಕಲ್ ಫೈಬರ್ ಅನ್ನು ಬಳಸುತ್ತದೆ. ಸ್ಪೆಕ್ಟ್ರಮ್ ಲಭ್ಯತೆಯೊಂದಿಗೆ ರೇಡಿಯೋ ಸಂವಹನ ಸಾಧ್ಯವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಓದಿ: ತ್ರಿಪುರಾದಲ್ಲಿ ಇನ್ಮುಂದೆ ವಾರಕ್ಕೊಮ್ಮೆ ಮನ್ರೇಗಾ ವೇತನ: ತಪ್ಪಿದ್ರೆ ಕಾರ್ಮಿಕರ ವೇತನಕ್ಕೆ ಶೇ 0.05 ಬಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.