ನವದೆಹಲಿ: ಸ್ಥಳೀಯವಾಗಿ ನಿರ್ಮಿಸಲಾದ ಅತ್ಯಂತ ಯಶಸ್ವಿ ಶಸ್ತ್ರಾಸ್ತ್ರ ಕ್ಷಿಪಣಿಯಲ್ಲಿ ಒಂದಾಗಿದ್ದ ‘ಆಕಾಶ್ ಮಿಸೈಲ್’ ರಫ್ತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡಿರುವ ಆಕಾಶ್ ಕ್ಷಿಪಣಿಗಳಿಗಿಂತ ರಫ್ತಾಗಲಿರುವ ಆವೃತ್ತಿ ಭಿನ್ನವಾಗಿರಲಿದೆ ಎಂದಿದ್ದಾರೆ.
-
Under the #AtmaNirbharBharat, India is growing in its capabilities of manufacturing wide variety of Defence platforms & missiles.
— Rajnath Singh (@rajnathsingh) December 30, 2020 " class="align-text-top noRightClick twitterSection" data="
The Cabinet chaired by PM @narendramodi ji today approved the export of Akash Missile System and a Committee for faster Approvals has been created.
">Under the #AtmaNirbharBharat, India is growing in its capabilities of manufacturing wide variety of Defence platforms & missiles.
— Rajnath Singh (@rajnathsingh) December 30, 2020
The Cabinet chaired by PM @narendramodi ji today approved the export of Akash Missile System and a Committee for faster Approvals has been created.Under the #AtmaNirbharBharat, India is growing in its capabilities of manufacturing wide variety of Defence platforms & missiles.
— Rajnath Singh (@rajnathsingh) December 30, 2020
The Cabinet chaired by PM @narendramodi ji today approved the export of Akash Missile System and a Committee for faster Approvals has been created.
ಆತ್ಮನಿರ್ಭರ ಭಾರತ ಎಂಬ ಘೋಷಣೆಯಲ್ಲಿ ಭಾರತದಲ್ಲಿ ವಿವಿಧ ರೀತಿಯ ರಕ್ಷಣಾ ಉಪಕರಣಗಳು ಮತ್ತು ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯ ವೃದ್ಧಿಯಾಗಿದೆ ಎಂದಿದ್ದಾರೆ. ಅಲ್ಲದೆ ನರೇಂದ್ರ ಮೋದಿಜಿ ಅವರು ಇಂದು ಆಕಾಶ್ ಕ್ಷಿಪಣಿ ರಫ್ತಿಗೆ ಅನುಮೋದನೆ ನೀಡಿದ್ದು ಮತ್ತು ಶೀಘ್ರ ಅನುಮೋದನೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಆಕಾಶ್ ದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ಶೇ 96ರಷ್ಟು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆಕಾಶ್ 25 ಕಿಲೊ ಮೀಟರ್ ವ್ಯಾಪ್ತಿಯ ವಾಯು ಕ್ಷಿಪಣಿಯಾಗಿದೆ ಎಂದಿದ್ದಾರೆ.
ಇದಲ್ಲದೆ ಭಾರತ ಸರ್ಕಾರವು ಹೆಚ್ಚಿನ ಮೌಲ್ಯದ ರಕ್ಷಣಾ ಉಪಕರಣ ರಫ್ತು ಮಾಡುವತ್ತ ಗಮನಹರಿಸಲು ಉದ್ದೇಶಿಸಿದೆ. 5 ಬಿಲಿಯನ್ ಯುಎಸ್ ಡಾಲರ್ ರಕ್ಷಣಾ ರಫ್ತು ಗುರಿಯನ್ನು ಸಾಧಿಸಲು ಮತ್ತು ಸ್ನೇಹಪರ ವಿದೇಶಗಳೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಸುಧಾರಿಸಲು ಮುಂದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದಕ್ಕೂ ಮೊದಲು ಆಕಾಶ್ ಕ್ಷಿಪಣಿಯನ್ನು ಚೀನಾ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಜ.1ರಂದು ಆರು ರಾಜ್ಯಗಳಲ್ಲಿ ಲೈಟ್ ಹೌಸ್ ಯೋಜನೆಗಳಿಗೆ ಪ್ರಧಾನಿ ಮೋದಿ ಅಡಿಪಾಯ