ETV Bharat / bharat

ಕೇಂದ್ರ ಬಜೆಟ್ : 2022-23 ರೊಳಗೆ 5G ಮೊಬೈಲ್​ ಸೇವೆ ಆರಂಭ.. - ವನ್‌ ನೇಷನ್ ವನ್ ರಿಜಿಸ್ಟ್ರೇಷನ್‌

5G ಮೊಬೈಲ್ ಸೇವೆಗಳನ್ನು ಸಕ್ರಿಯಗೊಳಿಸಲು ಸ್ಪೆಕ್ಟ್ರಮ್ ಹಂಚಿಕೆ ಹರಾಜು ಪ್ರಕ್ರಿಯೆಯನ್ನು 2022-23 ರೊಳಗೆ ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ..

Union Budget
2022-23 ರೊಳಗೆ 5G ಮೊಬೈಲ್​ ಸೇವೆ ಆರಂಭ..
author img

By

Published : Feb 1, 2022, 12:11 PM IST

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವು ವರ್ಷಗಳಿಂದ ಚರ್ಚೆಯಲ್ಲಿರುವ 5ಜಿ ಸೇವೆಯನ್ನು ಎರಡು ವರ್ಷದೊಳಗಾಗಿ ಆರಂಭಿಸುವುದಾಗಿ ಸಚಿವರು ತಿಳಿಸಿದ್ದಾರೆ.

ತಂತ್ರಜ್ಞಾನ ಕ್ಷೇತ್ರಕ್ಕೆ ಬಜೆಟ್​ ಕೊಡುಗೆ ಈ ಕೆಳಕಂಡಂತಿದೆ..

  • 5G ಮೊಬೈಲ್ ಸೇವೆಗಳನ್ನು ಸಕ್ರಿಯಗೊಳಿಸಲು ಸ್ಪೆಕ್ಟ್ರಮ್ ಹಂಚಿಕೆ ಹರಾಜು ಪ್ರಕ್ರಿಯೆಯನ್ನು 2022-23ರೊಳಗೆ ಕೈಗೊಳ್ಳಲಾಗುವುದು
  • ಹೊಸ ತಂತ್ರಜ್ಞಾನಗಳೊಂದಿಗೆ ಚಿಪ್‌ ಒಳಗೊಂಡ ಇ-ಪಾಸ್‌ಪೋರ್ಟ್‌ ಮುಂದಿನ ವರ್ಷದಿಂದ ಜಾರಿ
  • ದೇಶಾದ್ಯಂತ ಎಲೆಕ್ಟ್ರಿಕ್‌ ವಾಹನಗಳಿಗೆ ಒತ್ತು. ನಗರ ಪ್ರದೇಶಗಳಲ್ಲಿ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ
  • ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ ಜಾರಿ- ಚಾರ್ಜ್ ಆಗಿರುವ ಬ್ಯಾಟರಿ ಬದಲಾವಣೆಗೆ ಸ್ಟೇಷನ್ ಓಪನ್ ಮಾಡಲಾಗುವುದು. ಬ್ಯಾಟರಿ ಸ್ವ್ಯಾಪಿಂಗ್‌ಗೆ ನೀತಿ ಜಾರಿ ಮಾಡಾಗುತ್ತದೆ ಎಂದು ತಿಳಿಸಿದ ಸಚಿವೆ, ನಗರಾಭಿವೃದ್ಧಿಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
  • ಜಮೀನು ನೋಂದಣಿಗೆ ಡಿಜಿಟಲೀಕರಣ ವ್ಯವಸ್ಥೆ. ಇದಕ್ಕಾಗಿ ‘ವನ್‌ ನೇಷನ್ ವನ್ ರಿಜಿಸ್ಟ್ರೇಷನ್‌’ ವ್ಯವಸ್ಥೆ ಸ್ಥಾಪನೆ

ಇದನ್ನೂ ಓದಿ: ಕೇಂದ್ರ ಬಜೆಟ್​ 2022 : ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ

  • ಕೇಂದ್ರದಲ್ಲಿ ಯೋಜನೆಗಳ ನಿರ್ವಹಣೆಗಾಗಿ E-ಬಿಲ್ ವ್ಯವಸ್ಥೆ. ಗುತ್ತಿಗೆದಾರರು ಇ-ಬಿಲ್ ವ್ಯವಸ್ಥೆಯಲ್ಲಿನ ಕಾರ್ಯನಿರ್ವಹಣೆ ಮಾಡಬೇಕು. ಕಾಗದ ರಹಿತ ಪ್ರಕ್ರಿಯೆ ಜಾರಿಗೊಳಿಸಲು ಇ-ಬಿಲ್ ಸ್ಕೀಮ್ ಜಾರಿಯಾಗುತ್ತದೆ.
  • 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕ್‌ಗಳ ನಿರ್ಮಾಣಕ್ಕೆ ಆದ್ಯತೆ
  • ಪೋಸ್ಟ ಆಫೀಸ್‌ಗಳಿಗೆ ಬ್ಯಾಂಕಿಂಗ್ ಸ್ವರೂಪ- ಎಟಿಎಂ ರೀತಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಒದಗಿಸಲು ನಿರ್ಧಾರ, 1.4 ಪೋಸ್ಟ್ ಆಫೀಸ್‌ಗಳ ಸ್ವರೂಪ ಬದಲು.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.