ನವದೆಹಲಿ: ಪಂಚರಾಜ್ಯಗಳ ಚುನಾವಣೆ, ಕೋವಿಡ್ ಮೂರನೇ ಅಲೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಇಂದು 2022-23ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕೇಂದ್ರದಲ್ಲಿ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಮಂಡನೆಯಾಗುತ್ತಿರುವ 10ನೇ ಬಜೆಟ್ ಇದಾಗಿದೆ. ಜನಸಾಮಾನ್ಯರಿಗೆ ಇದರಲ್ಲಿ ಏನೆಲ್ಲಾ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಬಜೆಟ್ನಲ್ಲಿ ಜನಸಾಮಾನ್ಯರಿಗೆ ದಕ್ಕಿದ್ದಿಷ್ಟು..
- ಆದಾಯ ತೆರಿಗೆ ದರ ಅಥವಾ ಸ್ಲ್ಯಾಬ್ಗಳಲ್ಲಿ ಆಗದ ಬದಲಾವಣೆ, ಆದಾಯ ತೆರಿಗೆ ರಿಟರ್ನ್ಸ್ ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ಜೊತೆಗೆ ಆದಾಯ ತೆರಿಗೆ ಪಾವತಿದಾರರು ತಮ್ಮ ನವೀಕರಿಸಿದ ITR ಮೌಲ್ಯಮಾಪನ ಮಾಡಲು ಎರಡು ವರ್ಷ ಕಾಲಾವಕಾಶ
- ಮೊಬೈಲ್ ಫೋನ್ ಚಾರ್ಜರ್, ವಿದೇಶದಿಂದ ಬರುವ ಯಂತ್ರಗಳು, ಛತ್ರಿ, ಬಟ್ಟೆಗಳು ಮತ್ತಷ್ಟು ಅಗ್ಗ, ಪಾಲಿಶ್ ಮಾಡಿದ ವಜ್ರದ ಬೆಲೆಯಲ್ಲಿ ಇಳಿಕೆ
- ಬಜೆಟ್ನಲ್ಲಿ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ. ಇದರಿಂದ ಆನ್ಲೈನ್ ಶಿಕ್ಷಣಕ್ಕೆ ಸಹಾಯ, ಅನೇಕ ಕಾರಣಗಳಿಂದ ಕಾಲೇಜ್ಗೆ ಹೋಗದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲು ಅವಕಾಶ
- ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಣೆಯಾಗಿರುವ ಬಂಡವಾಳ ವೆಚ್ಚ, 400 ಹೊಸ ವಂದೇ ಭಾರತ ರೈಲುಗಳು, 2023ರಲ್ಲೇ 5G ಸೇವೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಮಾಡಲಿವೆ.
ಇದನ್ನೂ ಓದಿರಿ: 'ಚಿಕ್ಕ ಬಜೆಟ್ ಅತ್ಯಂತ ಪ್ರಭಾವಶಾಲಿಯಾಗಿದೆ'; ವಿತ್ತ ಸಚಿವೆ ಬಜೆಟ್ಗೆ ಆನಂದ್ ಮಹೀಂದ್ರಾ ಮೆಚ್ಚುಗೆ
- 2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಲಕ್ಷ ಮನೆಗಳ ವಿತರಣೆಗೆ ನಿರ್ಧಾರ
- 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕ ಸ್ಥಾಪನೆ, ಜೊತೆಗೆ 1.5 ಲಕ್ಷ ಅಂಚೆ ಕಚೇರಿ ಶೀಘ್ರದಲ್ಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜೊತೆ ಸಂಪರ್ಕ. ಇದರಿಂದ ಹಳ್ಳಿ, ಪಟ್ಟಣಗಳ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಸುಲಭವಾಗಿ ತಲುಪಲಿವೆ.
- ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕಾಗಿ ಬ್ಯಾಟರಿ ಸ್ವಾಪ್ ನೀತಿ ಘೋಷಣೆ
- ಬುಂದೇಲ್ ಖಂಡದಲ್ಲಿ ನೀರಿನ ಸಮಸ್ಯೆ ನೀಗಿಸಲು ಕೇನ್-ಬೆಟ್ವಾ ನದಿ ಜೋಡನೆ ಯೋಜನೆಗೆ ನಿರ್ಧಾರ, ಇದಕ್ಕಾಗಿ 44 ಸಾವಿರ ಕೋಟಿ ರೂ. ಮೀಸಲು. ಈ ಯೋಜನೆಯಿಂದ 9 ಲಕ್ಷ ರೈತರಿಗೆ ನೇರ ಪ್ರಯೋಜನ
- ರೈತರ ಬೆಳೆಗಳಿಗೋಸ್ಕರ ಎಂಎಸ್ಪಿ ಘೋಷಣೆ, ಭತ್ತ, ಗೋಧಿ ಖರೀದಿಸಲು 2.37 ಲಕ್ಷ ಕೋಟಿ ರೂ. ಮೀಸಲು, ದೇಶದಲ್ಲಿಯೇ ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಒತ್ತು
- ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಮೂರು ಯೋಜನೆ ಘೋಷಣೆ, ಎರಡು ಲಕ್ಷ ಅಂಗನವಾಡಿ ಮೇಲ್ದರ್ಜೆಗೆ
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ