ETV Bharat / bharat

ಉತ್ತರಾಖಂಡ್​ನಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿತ: 36 ಮಂದಿ ಸಿಲುಕಿರುವ ಶಂಕೆ - ನಿರ್ಮಾಣ ಹಂತದ ಸುರಂಗ ಮಾರ್ಗ

ಉತ್ತರಾಖಂಡ್​ನ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದಿದ್ದು, 36 ಮಂದಿ ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Etv Bharat
Etv Bharat
author img

By ETV Bharat Karnataka Team

Published : Nov 12, 2023, 1:36 PM IST

Updated : Nov 12, 2023, 2:16 PM IST

ಉತ್ತರಕಾಶಿ (ಉತ್ತರಾಖಂಡ್): ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದಿರುವ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಶನಿವಾರ ರಾತ್ರಿ ಇಲ್ಲಿನ ಉತ್ತರಕಾಶಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸುಮಾರು 36 ಮಂದಿ ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಈ ಸುರಂಗ ಮಾರ್ಗವು ಸಿಲ್ಕ್ಯಾರಾ ಮತ್ತು ದಂಡಲ್ಗೋನಾ ಸಂಪರ್ಕ ಮಾರ್ಗವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಉತ್ತರಕಾಶಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅರ್ಪಣ್​ ಯದುವಂಶಿ, ಸಿಲ್ಕ್ಯಾರಾ ಮತ್ತು ದಂಡಲ್ಗೋನಾಗೆ ಸಂಪರ್ಕ ಕಲ್ಪಿಸುವ ನಿರ್ಮಾಣ ಹಂತದ ಸುರಂಗ ಮಾರ್ಗ ಶನಿವಾರ ರಾತ್ರಿ ಭಾಗಶಃ ಕುಸಿದುಬಿದ್ದಿದೆ. ಸಿಲ್ಕ್ಯಾರ ಕಡೆಯಿಂದ ಬ್ರಹ್ಮಕಾಲ್​ ಹಾಗೂ ಪಾಲ್ಗಾಂವ್​ ಕಡೆ ತೆರಳುವ ಸುರಂಗ ಮಾರ್ಗದ ಆರಂಭದಿಂದ ಸುಮಾರು 200 ಮೀಟರ್​ನಷ್ಟು ಉದ್ದಕ್ಕೆ ಕುಸಿದು ಬಿದ್ದಿದೆ. ಹೈಡ್ರೋ ಎಲೆಕ್ಟ್ರಿಸಿಟಿ ಇನ್​ವೆಸ್ಟ್​ಮೆಂಟ್​ ಆ್ಯಂಡ್ ಡೆವೆಲಪ್​ಮೆಂಟ್​ ಕಂಪೆನಿ ಈ ಸುರಂಗ ಮಾರ್ಗದ ಕಾಮಗಾರಿಯನ್ನು ನಡೆಸುತ್ತಿತ್ತು. ಈ ಸುರಂಗ ಮಾರ್ಗದೊಳಗೆ 36 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

  • #WATCH | Uttarakhand: A part of the tunnel under construction from Silkyara to Dandalgaon in Uttarkashi, collapsed. DM and SP of Uttarkashi district are present at the spot. SDRF, and Police Revenue teams are also present at the spot for relief work. Rescue operations underway. pic.twitter.com/hxrGqxWrsO

    — ANI UP/Uttarakhand (@ANINewsUP) November 12, 2023 " class="align-text-top noRightClick twitterSection" data=" ">

ಸ್ಥಳಕ್ಕೆ ಎಸ್​ಡಿಆರ್​ಎಫ್​ ಮತ್ತು ಪೊಲೀಸ್​ ಸಿಬ್ಬಂದಿ ಆಗಮಿಸಿದ್ದು, ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮೊಕ್ಕಾಂ ಹೂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಾಖಂಡ್​ ಸಿಎಂ ಪುಷ್ಕರ್ ಸಿಂಗ್​ ಧಾಮಿ, ಘಟನೆ ನಡೆದ ಕೂಡಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಈಗಲೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಸ್ಥಳದಲ್ಲಿ ಬೇಕಾದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಎನ್​ಡಿಆರ್​ಎಫ್​ ಮತ್ತು ಎಸ್​ಡಿಆರ್​ಎಫ್​ ತಂಡಗಳು ಈಗಾಗಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಸುರಂಗದಲ್ಲಿ ಸಿಲುಕಿರುವ ಎಲ್ಲರ ಸುರಕ್ಷಿತವಾಗಿ ವಾಪಸ್​ ಆಗಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

  • #WATCH | Uttarakhand: Latest visuals of rescue operations that are underway after part of the tunnel under construction from Silkyara to Dandalgaon in Uttarkashi, collapsed.

    Uttarkashi SP Arpan Yaduvanshi says, "In Silkyara Tunnel, a part of the tunnel has broken about 200… pic.twitter.com/9oURMxk0Dq

ಇದನ್ನೂ ಓದಿ : ದೀಪಾವಳಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ತರಲಿ: ದೇಶದ ಜನತೆಗೆ ಶುಭ ಕೋರಿದ ಮೋದಿ

Last Updated : Nov 12, 2023, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.