ETV Bharat / bharat

ಪಂಜಾಬ್​ನಲ್ಲಿ 1.74 ಕೋಟಿ ರೂ. ನಗದು ಸೇರಿ ಡ್ರಗ್ಸ್ ವಶ - Unaccounted cash seized in Punjab

ಪಂಜಾಬ್​ನಲ್ಲಿ 1.74 ಕೋಟಿ ರೂ. ನಗದು ಸೇರಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Unaccounted cash and drugs seized in poll-bound Punjab
ಪಂಜಾಬ್​ನಲ್ಲಿ 1.74 ಕೋಟಿ ರೂ. ಅಕ್ರಮ ಹಣ ಸೇರಿ ಡ್ರಗ್ಸ್ ವಶಕ್ಕೆ
author img

By

Published : Jan 20, 2022, 1:18 PM IST

ಚಂಡೀಗಢ(ಪಂಜಾಬ್​): ರಾಜ್ಯದಲ್ಲಿ ಚುನಾವಣಾ ಕಾವು ಏರಿದೆ. ಈ ಮಧ್ಯೆ 1.74 ಕೋಟಿ ರೂಪಾಯಿ ಅಕ್ರಮ ಹಣ, 1,088 ಕೆಜಿ ಮಾದಕ ವಸ್ತು, 11 ಕೆ.ಜಿ ಅಫೀಮ್​​, 3,370 ಗ್ರಾಂ ಹೆರಾಯಿನ್​ ಅನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಸ್​. ಕರುಣಾ ರಾಜು ತಿಳಿಸಿದ್ದಾರೆ.

ಡ್ರಗ್ಸ್ ಸಾಗಣೆ ಸೇರಿದಂತೆ ಪ್ರಚೋದನಾಕಾರಿ ಚಟುವಟಿಕೆಗಳ ಮೇಲೆ ನಿಗಾ ಇರಿಸಲು 2,268 ವಲಯ ಗಸ್ತು ತಂಡಗಳು, 740 ಕಣ್ಗಾವಲು ತಂಡಗಳು, 792 ಫ್ಲೈಯಿಂಗ್ ಸ್ಕ್ವಾಡ್‌ಗಳು, 351 ವಿಡಿಯೋ ಕಣ್ಗಾವಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಮಾದಕ ವಸ್ತು ಸಾಗಣೆಯ ಮೇಲೆ ನಿಗಾ ಇಡಲು ಜಿಲ್ಲೆಯಲ್ಲಿ ತಲಾ ಒಬ್ಬರಂತೆ 28 ಎನ್‌ಸಿಬಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಇದನ್ನೂ ಓದಿ: UP Polls: ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ರಾಜ್ಯದ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.