ETV Bharat / bharat

ದೇಶದ್ರೋಹ ಪ್ರಕರಣ: ಸುಪ್ರೀಂ ಆದೇಶ ಸ್ವಾಗತಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ

author img

By

Published : May 13, 2022, 7:58 AM IST

ಶಾಂತಿಯುತ ಟೀಕಾಕಾರರ ವಿರುದ್ಧ ನಿರಂಕುಶ ಮತ್ತು ವ್ಯಾಪಕವಾಗಿ ಬಳಸಲಾಗುವ ದೇಶದ್ರೋಹದ ಕಾನೂನನ್ನು ಮರುಪರಿಶೀಲಿಸುವ ಭಾರತೀಯ ಸುಪ್ರೀಂಕೋರ್ಟ್​ ಆದೇಶವನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ.

UN welcomes Supreme court order on sedition  UN Human Rights Office on sedition  Supreme court order on sedition law  Sedition law in India  ದೇಶದ್ರೋಹದ ಕುರಿತು ಸುಪ್ರೀಂ ಕೋರ್ಟ್​ ಆದೇಶ ಸ್ವಾಗತಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ  ದೇಶದ್ರೋಹ ಕಾನೂನಿಗ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ  ಭಾರತದಲ್ಲಿ ದೇಶದ್ರೋಹ ಕಾನೂನು  ದೇಶದ್ರೋಹ ಪ್ರಕರಣದ ಬಗ್ಗೆ ಯುಎನ್​ ಮಾನವ ಹಕ್ಕುಗಳ ಕಚೇರಿ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್​ ಆದೇಶ ಸ್ವಾಗತಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ

ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ದೇಶದ್ರೋಹದ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದೆ. ವಸಾಹತುಶಾಹಿ ಕಾನೂನಿನಡಿಯಲ್ಲಿ ಬಂಧಿತರಾಗಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

  • We welcome the #Indian Supreme Court’s order to reconsider the #SeditionLaw, which has been used arbitrarily & widely against peaceful critics. All those currently detained under the law should be considered for immediate release. pic.twitter.com/fYxMR7yCAO

    — UN Human Rights (@UNHumanRights) May 12, 2022 " class="align-text-top noRightClick twitterSection" data=" ">

ಶಾಂತಿಯುತ ಟೀಕಾಕಾರರ ವಿರುದ್ಧ ನಿರಂಕುಶ ಮತ್ತು ವ್ಯಾಪಕವಾಗಿ ಬಳಸಲಾದ ಈ ಕಾನೂನನ್ನು ಮರುಪರಿಶೀಲಿಸುವ ಭಾರತೀಯ ಸುಪ್ರೀಂಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಪ್ರಸ್ತುತ ಕಾನೂನಿನಡಿಯಲ್ಲಿ ಬಂಧಿತರಾಗಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂದಿದೆ.

ಇದನ್ನೂ ಓದಿ: 'ದೇಶದ್ರೋಹ ಕಾನೂನು' ತಡೆಹಿಡಿದ ಸುಪ್ರೀಂಕೋರ್ಟ್‌; ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ, ರಾಜ್ಯಗಳಿಗೆ ಆದೇಶ

ಬುಧವಾರ, ಮಹತ್ವದ ಆದೇಶದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ ಕಾನೂನನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿತು. ಹೀಗಾಗಿ ವಿವಾದಿತ ಕಾನೂನಿನ ಪುನರ್‌ವಿಮರ್ಶೆ ಆಗುವವರೆಗೂ ಈ ಕಾನೂನಿನಡಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಐತಿಹಾಸಿಕ ಆದೇಶ ನೀಡಿತು.

2014 ಮತ್ತು 2019 ರ ನಡುವೆ ದೇಶದ್ರೋಹದ ಕಾನೂನಿನಡಿ ದೇಶಾದ್ಯಂತ ಒಟ್ಟು 326 ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚು ಪ್ರಕರಣಗಳು ಅಸ್ಸಾಂನಲ್ಲಿ (54) ದಾಖಲಾಗಿವೆ. ಇದರಲ್ಲಿ ಕೇವಲ ಆರು ಮಂದಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.

ಇದನ್ನೂ ಓದಿ: ಎಸ್‌ಪಿ ದರ್ಜೆ ಅಧಿಕಾರಿಯಿಂದ 'ದೇಶದ್ರೋಹ' ಪ್ರಕರಣಗಳ ಮೇಲ್ವಿಚಾರಣೆ : ಸುಪ್ರೀಂಗೆ ಕೇಂದ್ರ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.