ETV Bharat / bharat

'ಏರ್​ ಇಂಡಿಯಾ ವಿಮಾನದ ಸೀಟುಗಳು ಮುರಿದಿವೆ, ಜಿರಳೆ ಕಾಟ': UN​ ರಾಜತಾಂತ್ರಿಕ ಅಸಮಾಧಾನ - ವಿಮಾನಯಾನದ ಬಗ್ಗೆ ಅಸಮಾಧಾನ

ಏರ್ ಇಂಡಿಯಾ ವಿಮಾನದ ಸೀಟುಗಳು ಮುರಿದಿವೆ, ಜಿರಳೆಗಳ ಕಾಟ ಎಂದು ಯುಎನ್ ರಾಜತಾಂತ್ರಿಕರೊಬ್ಬರು ತಮ್ಮ ವಿಮಾನಯಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

un-diplomat-complains-of-broken-seats-cockroaches-on-us-delhi-air-india-flight
ಏರ್​ ಇಂಡಿಯಾ ವಿಮಾನದ ಸೀಟುಗಳು ಮುರಿದಿವೆ, ಜಿರಳೆಗಳ ಕಾಟ : ಯುಎನ್​ ರಾಜತಾಂತ್ರಿಕ ಅಸಮಾಧಾನ
author img

By

Published : Mar 21, 2023, 2:14 PM IST

ನವದೆಹಲಿ : ಅಮೆರಿಕ-ದೆಹಲಿ ಏರ್​ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದ ಅಮೆರಿಕನ್​ ರಾಜತಾಂತ್ರಿಕರೊಬ್ಬರು ತಮ್ಮ ಏರ್​ ಇಂಡಿಯಾ ವಿಮಾನಯಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿರುವ ಅವರು, ನಾನು ಅಮೆರಿಕದ ರಾಜತಾಂತ್ರಿಕನಾಗಿ ವಿಶ್ವಾದ್ಯಂತ ಸಂಚರಿಸಿದ್ದೇನೆ. ಆದರೆ ದೆಹಲಿಗೆ ಸಂಚರಿಸಿದ ಏರ್​ ಇಂಡಿಯಾ ಪ್ರಯಾಣ ಇದುವರೆಗಿನ ಅತ್ಯಂತ ಕೆಟ್ಟ ಅನುಭವ ಎಂದು ಹೇಳಿದ್ದಾರೆ.

ಏರ್​ ಇಂಡಿಯಾ 102 ಜೆಎಫ್​ಕೆ ವಿಮಾನದ ಸೌಕರ್ಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ಮುರಿದಿರುವ ಆಸನಗಳು, ಯಾವುದೇ ಮನರಂಜನೆಗಳಿಲ್ಲ, ಕಾಲ್​ ಬಟನ್​ಗಳು ಕೆಲಸ ಮಾಡುತ್ತಿಲ್ಲ. ಅಲ್ಲದೆ ಜಿರಳೆಗಳ ಕಾಟ ಎಂದು ಹೇಳಿದ್ದಾರೆ.

ಜೊತೆಗೆ ನ್ಯೂಯಾರ್ಕ್‌ನಿಂದ ಬರುವ ಏರ್ ಇಂಡಿಯಾ ವಿಮಾನಗಳು ಹೇಗೆ ಜಿರಳೆಗಳನ್ನು ಹೊಂದಿದೆ ಮತ್ತು ಯಾಕೆ ವಿಮಾನದಲ್ಲಿ ಯಾವುದೇ ಸುರಕ್ಷತಾ ಸಾಧನಗಳನ್ನು ಹೊಂದಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅವರು ಕೇಳಿದ್ದಾರೆ. ಏರ್​ ಇಂಡಿಯಾ ವಿಮಾನಗಳು ಜಿರಳೆಗಳಿಂದ ಮುತ್ತಿಕೊಂಡಿವೆ ಮತ್ತು ಬೋರ್ಡ್ ಸುರಕ್ಷತಾ ಸಾಧನಗಳ ಕಾರ್ಯಾಚರಣೆಯಲ್ಲಿ ಗುಣಮಟ್ಟ ಹೊಂದಿಲ್ಲ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ಅಮೆರಿಕದ ರಾಜತಾಂತ್ರಿಕರಿಗೆ ಉಂಟಾದ ಅನನುಕೂಲತೆಗಾಗಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದೆ. "ನೀವು ನಮ್ಮೊಂದಿಗೆ ಅನುಭವಿಸಿದ ಅನುಭವಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಬುಕಿಂಗ್ ವಿವರಗಳನ್ನು ನೇರವಾಗಿ ಕಳುಹಿಸಿಕೊಡಿ. ಈ ಬಗ್ಗೆ ಅಗತ್ಯ ಪರಿಶೀಲನೆ ನಡೆಸಲು ಸಂಬಂಧಿತ ತಂಡಕ್ಕೆ ತಿಳಿಸಲು ನಮಗೆ ಸಹಾಯ ಮಾಡಿ" ಎಂದು ಏರ್​ ಇಂಡಿಯಾ ಹೇಳಿದೆ.

ಇಂಡಿಗೋ ವಿಮಾನದಲ್ಲಿ ಅಶಿಸ್ತಿನ ವರ್ತನೆ : ಇಂಡಿಗೋ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಶುಕ್ರವಾರ ಬೆಳಗಿನ ಜಾವ 1.45ರ ಸುಮಾರಿಗೆ ಅಸ್ಸೋಂನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಂ 6ಇ-716 ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಶೇಹರಿ ಚೌಧರಿ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಆರೋಪಿಯು ವಿಮಾನದಲ್ಲಿನ ಶೌಚಾಲಯಕ್ಕೆ ಹೋಗಿ ಬಂದಿದ್ದು, ಅನಂತರ ಶೌಚಾಲಯದಿಂದ ಹೊಗೆ ಮತ್ತು ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ವಿಮಾನದ ಸಿಬ್ಬಂದಿ ಶೌಚಾಲಯ ಪರಿಶೀಲನೆ ಮಾಡಿದಾಗ ಆರೋಪಿ ಧೂಮಪಾನ ಮಾಡಿರುವುದು ಕಂಡು ಬಂದಿತ್ತು.

ವಿಮಾನದ ಶೌಚಾಲಯದಲ್ಲಿ ಸಿಗರೇಟ್​ ಸೇದಿದ್ದ ಯುವತಿ: ಕಳೆದ ಕೆಲವು ದಿನಗಳ ಹಿಂದೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದ ಶೌಚಾಲಯದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದಿದ್ದ ಘಟನೆ ನಡೆದಿತ್ತು. ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ಸಿಗರೇಟ್​ ಸೇದಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ : ಇಂಡಿಗೋ ವಿಮಾನ ಶೌಚಾಲಯದಲ್ಲಿ ಧೂಮಪಾನ: ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.