ಹೈದರಾಬಾದ್: ಯುದ್ಧಪೀಡಿತ ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಸಹಾಯಕ್ಕೆ ಅಂಗಲಾಚುತ್ತಿರುವ ದೃಶ್ಯ ಒಂದುಕಡೆಯಾದರೆ, ದಾಳಿ ಇಡುತ್ತಿರುವ ರಷ್ಯಾ ಸೈನಿಕರನ್ನು ಉಕ್ರೇನ್ ಯೋಧರು ಸದೆಬಡಿಯುತ್ತಿದ್ದಾರೆ. ಅದರೂ ರಷ್ಯಾ ತನ್ನ ಬಲಾಬಲ ತೋರಿಸುತ್ತಲೇ ಉಕ್ರೇನ್ನ ಪಟ್ಟಣಗಳನ್ನು ಆಕ್ರಮಿಸುತ್ತಾ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
-
Meanwhile...
— ۞ Reliable Ukraine News 🇺🇦 📰 ☪︎ (@TruthsUnchained) March 3, 2022 " class="align-text-top noRightClick twitterSection" data="
A Ukrainian farmer is selling a stolen Russian tank on eBay. 😂🇺🇦💙#Russia #Ukraine pic.twitter.com/znAcjYesGf
">Meanwhile...
— ۞ Reliable Ukraine News 🇺🇦 📰 ☪︎ (@TruthsUnchained) March 3, 2022
A Ukrainian farmer is selling a stolen Russian tank on eBay. 😂🇺🇦💙#Russia #Ukraine pic.twitter.com/znAcjYesGfMeanwhile...
— ۞ Reliable Ukraine News 🇺🇦 📰 ☪︎ (@TruthsUnchained) March 3, 2022
A Ukrainian farmer is selling a stolen Russian tank on eBay. 😂🇺🇦💙#Russia #Ukraine pic.twitter.com/znAcjYesGf
ಹೌದು, ಟ್ವಿಟರ್ನಲ್ಲಿ ಇರುವಂತೆ, ಕದ್ದ ರಷ್ಯಾದ ಯುದ್ಧಟ್ಯಾಂಕರ್ನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದಕ್ಕೆ ಬೆಲೆ ಕೂಡ ನಿಗದಿ ಮಾಡಲಾಗಿದ್ದು, ಬಳಕೆಯಾದ ಹಾಗೂ ಸಂಪೂರ್ಣವಾಗಿ ಸಕ್ರಿಯವಾಗಿರುವ ಟಿ-72 ಯುದ್ಧ ಟ್ಯಾಂಕರ್ ಮಾರಾಟಕ್ಕೆ ಇದೆ ಎಂದು ಬರೆದಿರುವ ರೈತ ಅದಕ್ಕೆ $400,000.00 ಬೆಲೆಯನ್ನು ನಿಗದಿ ಮಾಡಿದ್ದಾನೆ. ಆದರೆ, ಇದು ಸತ್ಯವೋ ಅಥವಾ ನಖಲಿಯೋ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಉಕ್ರೇನ್ನಲ್ಲಿರುವ ಕನ್ನಡಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ ಬೊಮ್ಮಾಯಿ
ಈ ವಿಚಿತ್ರ ಪೋಸ್ಟ್ಗೆ ಟ್ವಿಟರ್ನಲ್ಲಿ ಸಾಕಷ್ಟು ಕಾಮೆಂಟ್ಗಳನ್ನು ಮಾಡಲಾಗಿದೆ. ಇಂಥಹ ಕದ್ದ ರಷ್ಯಾದ ವಾಹನಗಳನ್ನು ನೋಡಲು ನಾನು ಇಷ್ಟ ಪಡುತ್ತೇನೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ಕೊಟ್ಟರೆ, ಯುದ್ಧ ಅಂದ್ರೆ ಯುದ್ಧ, ವ್ಯವಹಾರ ಅಂದ್ರೆ ವ್ಯವಹಾರ ಅಷ್ಟೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.