ETV Bharat / bharat

ಹಾವೇರಿಯ ನವೀನ್​ ಸಾವಿಗೆ ಉಕ್ರೇನ್​ ಸಂತಾಪ; ರಷ್ಯಾ ದಾಳಿ ನಿಲ್ಲಿಸಲು ಮೋದಿಗೆ ಮನವಿ - ಉಕ್ರೇನ್​ ರಾಯಭಾರಿ ಇಗೊರ್ ಪೊಲಿಖಾ

ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಭಾರತದ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇದಕ್ಕೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಸಂತಾಪ ಸೂಚಿಸಿದ್ದಾರೆ.

Ukraine Ambassador
Ukraine Ambassador
author img

By

Published : Mar 1, 2022, 8:23 PM IST

ನವದೆಹಲಿ: ಉಕ್ರೇನ್‌ನ​ ಖಾರ್ಕಿವ್ ನಗರದ​ ಮೇಲೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಸಾವನ್ನಪ್ಪಿದ್ದು, ಘಟನೆಗೆ ಭಾರತದಲ್ಲಿರುವ ಉಕ್ರೇನ್​ ರಾಯಭಾರಿ ಡಾ. ಇಗೊರ್ ಪೊಲಿಖಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾವೇರಿಯ ನವೀನ್​ ಸಾವಿಗೆ ಉಕ್ರೇನ್​ ಸಂತಾಪ

ಇಷ್ಟು ದಿನ ಉಕ್ರೇನ್​ ಮಿಲಿಟರಿ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ ರಷ್ಯಾ ಇದೀಗ ನಾಗರಿಕರ ಮೇಲೆ ಶೆಲ್​, ಬಾಂಬ್ ದಾಳಿ ನಡೆಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

  • I extend my deepest condolences on the death of Indian student Naveen Shekharappa who was killed in shelling in Kharkiv, Ukraine. Earlier shelling and bombings happened on military sites but now also happening in the civil areas: Dr Igor Polikha, Ambassador of Ukraine to India pic.twitter.com/rsvIzuM4TX

    — ANI (@ANI) March 1, 2022 " class="align-text-top noRightClick twitterSection" data=" ">

ಇದನ್ನೂ ಓದಿ: 'ನಮ್ಮ ಭೂಮಿ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ..' ಉಕ್ರೇನ್​​ ಅಧ್ಯಕ್ಷರಿಗೆ ಯುರೋಪಿಯನ್​ ಸಂಸತ್ ​​ಬೆಂಬಲ

ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ರಜಪೂತರ ಮೇಲೆ ಮೊಘಲರು ನಡೆಸಿರುವ ಹತ್ಯಾಕಾಂಡದಂತಿದೆ. ಬಾಂಬ್​ ಮತ್ತು ಶೆಲ್​ ದಾಳಿಯನ್ನು ನಿಲ್ಲಿಸಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್​ ಪುಟಿನ್​ ವಿರುದ್ಧ ಎಲ್ಲ ರೀತಿಯ ಸಂಪನ್ಮೂಲಗಳನ್ನು ಬಳಸುವಂತೆ ವಿಶ್ವದ ಪ್ರಭಾವಿ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದಿರುವ ಅವರು, ಇದರಲ್ಲಿ ಪ್ರಧಾನಿ ಮೋದಿಜೀ ಸಹ ಸೇರಿಕೊಂಡಿದ್ದಾರೆಂದು ತಿಳಿಸಿದರು.

  • It's like the massacre arranged by Mughals against Rajputs. We are asking every time all influential world leaders, among them Modi Ji, to use every resource against Putin to stop bombing and shelling: Dr Igor Polikha, Ambassador of Ukraine to India on #RussiaUkraineCrisis pic.twitter.com/vTtCsBu6IH

ಎಲ್ಲ ದೇಶಗಳ ಬಳಿ ಮಾನವೀಯ ದೃಷ್ಟಿಯಿಂದ ನಮ್ಮ ನೆರವಿಗೆ ಧಾವಿಸುವಂತೆ ಚರ್ಚೆ ನಡೆಸಿದ್ದು, ಭಾರತ ಕೂಡ ಇದರಲ್ಲಿ ಭಾಗಿಯಾಗಿ ನಮಗೆ ಸಹಾಯ ಮಾಡಲು ಮುಂದಾಗಿರುವುದಕ್ಕೆ ಕೃತಜ್ಞರಾಗಿದ್ದೇವೆ. ಭಾರತದಿಂದ ಉಕ್ರೇನ್​ಗೆ ಹೆಚ್ಚಿನ ಪ್ರಮಾಣದ ಮಾನವೀಯ ನೆರವು ಸಿಗಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಭರವಸೆ ನೀಡಿದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.