ETV Bharat / bharat

ನಾಳೆ ಅಕ್ಷರಧಾಮಕ್ಕೆ ಭೇಟಿ ನೀಡಲಿರುವ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ - ಈಟಿವಿ ಭಾರತ ಕನ್ನಡ

ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿರುವ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ನಾಳೆ ಅಕ್ಷರಧಾಮಕ್ಕೆ ಭೇಟಿ ನೀಡಲಿದ್ದಾರೆ.

ಬ್ರಿಟನ್​ ಪ್ರಧಾನಿ ರಿಷಿ ಸುನಕ್​
ಬ್ರಿಟನ್​ ಪ್ರಧಾನಿ ರಿಷಿ ಸುನಕ್​
author img

By ETV Bharat Karnataka Team

Published : Sep 9, 2023, 7:31 PM IST

ನವದೆಹಲಿ: G20 ಶೃಂಗಸಭೆ ಹಿನ್ನೆಲೆ ತಮ್ಮ ಪತ್ನಿಯೊಂದಿಗೆ ಭಾರತಕ್ಕೆ ಆಗಮಿಸಿರುವ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಅವರು ಭಾನುವಾರ ದೆಹಲಿಯಲ್ಲಿರುವ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಎಎನ್​ಐ ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಜಿ20 ಕೊನೆಯದಿನ ಅಂದರೆ ನಾಳೆ ಪತ್ನಿ ಅಕ್ಷತಾ ಮೂರ್ತಿಯವರೊಂದಿಗೆ ಅಕ್ಷರಧಾಮಕ್ಕೆ ಭೇಟಿ ನೀಡುತ್ತಿರುವುದಾಗಿ ಹೇಳಿದ್ದಾರೆ.

ನಿನ್ನೆ ದಿನ ಭಾರತಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದೊಂದಿಗೆ ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ಇದೇ ವೇಳೆ, ನಾನೊಬ್ಬ ಹಿಂದೂ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನಾನು ಬೆಳದದ್ದೂ ಹೀಗೆಯೆ. ಇಲ್ಲಿರುವ ಎರಡು ದಿನಗಳ ಕಾಲ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುತ್ತೇನೆ. ಕೆಲ ದಿನಗಳ ಹಿಂದೆ ರಕ್ಷಾಬಂಧನವನ್ನು ನಾನು ಆಚರಿಸಿದ್ದೇನೆ. ನನ್ನ ಸಹೋದರಿಯರು ರಾಖಿಯನ್ನು ಕಟ್ಟಿದ್ದಾರೆ. ಕೆಲ ಕಾರಣಾಂತರಗಳಿಂದ ಈ ಬಾರಿಯ ಕೃಷ್ಣಜನ್ಮಾಷ್ಟಮಿ ಆಚರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.

ಮೂಲಗಳ ಪ್ರಕಾರ ನಾಳೆ ಬೆಳಗಿನ ಜಾವ, ರಿಷಿ ಸುನಕ್​ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಒಂದು ಗಂಟೆಗಳ ಕಾಲ ದೇವಸ್ಥಾನದಲ್ಲಿ ಕಳೆಯಲಿದ್ದಾರೆ ಎನ್ನಲಾಗುತ್ತಿದೆ. ಸುನಕ್​ ಅವರ ಭೇಟಿ ಖಚಿತವಾಗಿದ್ದು, ಈಗಾಗಲೇ ದೇವಸ್ಥಾನದ ಸುತ್ತಲು ಬಿಗಿ ಭದ್ರತೆ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು, ವಾಹನಗಳ ತಪಾಸಣೆ ಕೂಡ ನಡೆಸಲಾಗುತ್ತಿದೆ.

ಜಿ-20 ಶೃಂಗಸಭೆಗೆ ಆಗಮಿಸಿರುವ ರಿಷಿ ಸುನಕ್​ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು. ವ್ಯಾಪಾರ ಸಂಬಂಧ ಮತ್ತು ಹೂಡಿಕೆ ವಿಷಯವಾಗಿ ಉಭಯ ನಾಯಕರು ಚರ್ಚಿಸಿದರು. ಶೃಂಗಸಭೆಯ ಸ್ಥಳವಾದ ಪ್ರಗತಿ ಮೈದಾನದಲ್ಲಿನ ಭಾರತ ಮಂಟಪದಲ್ಲಿ ಸಭೆ ನಡೆಯಿತು. ಮೇನಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ ನಂತರ ಎರಡು ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು.

ಬಳಿಕ ಜಿ 20 ಶೃಂಗಸಭೆಯ 'ಒನ್ ಅರ್ಥ್' ವಿಷಯದ ಕುರಿತಾದ ಸಭೆಯಲ್ಲಿ ಭಾಗವಹಿಸಿದ್ದ ಸುನಕ್​ ಅವರು, ಜಗತ್ತು ಜಿ20 ಯತ್ತ ನೋಡುತ್ತಿದೆ. ಇದರಲ್ಲಿ ಭಾಗವಹಿಸಿರುವ ನಾಯಕರಿಗಳು ಒಟ್ಟಾಗಿ ಸವಾಲುಗಳನ್ನು ಎದುರಿಸಲು ಜಿ-20ಯಲ್ಲಿ ಭಾಗಿಯಾದ ನಾಯಕರಿಗೆ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: 73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ: ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.