ಉಜ್ಜೈನಿ(ಮಧ್ಯಪ್ರದೇಶ): 180 ರೂಪಾಯಿ ಮೌಲ್ಯದ ಪಾದರಕ್ಷೆ ಕಳ್ಳತನವಾಗಿರುವ ಬಗ್ಗೆ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ. ಕಳ್ಳತನವಾಗಿರುವ ತನ್ನ ಚಪ್ಪಲಿಗಳನ್ನ ಅಪರಾಧಕ್ಕೆ ಬಳಸಿಕೊಳ್ಳಬಹುದು ಎಂದಿರುವ ಈತ, ಇದರಿಂದ ತಾನು ಅರೆಸ್ಟ್ ಆಗಬಹುದೆಂಬ ಭಯದಲ್ಲಿ ದೂರು ದಾಖಲಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಚಂಪಖೇಡಾ ಪಂಚಾಯ್ತಿ ವ್ಯಾಪ್ತಿಯ ಕಚ್ರೋಡ್ ತಹಸಿಲ್ ನಿವಾಸಿಯಾಗಿರುವ ಜಿತೇಂದ್ರ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ. ಈ ದೂರು ನೀಡಿರುವುದರಿಂದ ಪೊಲೀಸರು ಸಹ ಆಶ್ಚರ್ಯಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನ ವ್ಯಕ್ತಿಗೆ ನೀಡಿದ್ದಾರೆ.
ಇದನ್ನೂ ಓದಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಭಾವಿಪತಿಯನ್ನೇ ಜೈಲಿಗಟ್ಟಿದ ಲೇಡಿ ಸಬ್ ಇನ್ಸ್ಪೆಕ್ಟರ್!
ದೂರಿನಲ್ಲಿ ತಿಳಿಸಿದ್ದೇನು?: ಕಳೆದ ರಾತ್ರಿ 180 ರೂಪಾಯಿ ಬೆಲೆ ಬಾಳುವ ಕಪ್ಪು ಬಣ್ಣದ ಚಪ್ಪಲಿ ಕಳುವಾಗಿವೆ. ಇವುಗಳನ್ನ ಅಪರಾದ ನಡೆಯುವ ಸ್ಥಳದಲ್ಲಿ ಯಾರಾದ್ರೂ ಎಸೆದರೆ, ಅದಕ್ಕೆ ನಾನು ಹೊಣೆಗಾರನಾಗುತ್ತೇನೆ. ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ತಾವು ಪ್ರಕರಣ ದಾಖಲು ಮಾಡುತ್ತಿರುವುದಾಗಿ ಹೇಳಿದ್ದಾರೆ.
ಈ ವಿಚಾರವಾಗಿ ಈಟಿವಿ ಭಾರತ್ ತಂಡ, ಪೊಲೀಸ್ ಇಲಾಖೆ ಎಸ್ಎಚ್ಒ ಅವರನ್ನ ಸಂಪರ್ಕಿಸಿದಾಗ, ಪ್ರಕರಣ ದಾಖಲಾಗಿರುವುದು ನಿಜ ಎಂದು ತಿಳಿಸಿದ್ದಾರೆ. ಜೊತೆಗೆ ಆರೋಪಿಗಳಿಗೋಸ್ಕರ ಶೋಧಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.