ಉಜ್ಜೈನಿ (ಮಧ್ಯಪ್ರದೇಶ): ಹಣದ ಆಸೆಗಾಗಿ ನಿರ್ದಯಿಯಾಗಿರುವ ತಾಯಿಯೊಬ್ಬಳು ತನ್ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಮದುವೆಯ ಹೆಸರಿನಲ್ಲಿ ಮಾರಾಟ ಮಾಡಿರುವ ಪ್ರಕರಣ ಉಜ್ಜೈನಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಅಜ್ಜನೊಂದಿಗೆ ಬಂದು ತನ್ನ ಸ್ವಂತ ತಾಯಿಯ ವಿರುದ್ಧ ಮಹಿದ್‌ಪುರ ತಹಸಿಲ್‌ನ ಜರ್ದಾಲ್ ಗ್ರಾಮದ ಪೊಲೀಸರಿಗೆ ದೂರು ನೀಡಿದ್ದಾಳೆ.
'ದೂರಿನಲ್ಲಿ ಬಾಲಕಿಯು, ನಮ್ಮ ಕುಟುಂಬ ಕೊಲ್ಗಾಂವ್ ಜಿಲ್ಲೆಯ ಸತ್ನಾದಲ್ಲಿ ವಾಸವಿತ್ತು. 3 ವರ್ಷಗಳ ಹಿಂದೆ ನನ್ನ ತಂದೆ ತೀರಿಕೊಂಡರು. ಅಂದಿನಿಂದ ನನ್ನ ತಾಯಿ ಮತ್ತು ನನ್ನ ಸಹೋದರ ಸಹೋದರಿಯರೆಲ್ಲ ಮಾವನೊಂದಿಗೆ ವಾಸಿಸುತ್ತಿದ್ದೆವು. ಈ ನಡುವೆ ತಾಯಿಗೆ ಉಜ್ಜಯಿನಿ ಜಿಲ್ಲೆಯ ಟಿಪ್ಪು ಖೇಡಾ ಗ್ರಾಮದ ಶ್ಯಾಮ್ ಸಿಂಗ್ ಪರಿಚಯವಾಗಿದೆ. ಆತ ರೇವಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಆತ ನನ್ನ ತಾಯಿ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದನು. ಬಳಿಕ ಶ್ಯಾಮ್ ಸಿಂಗ್ ಒತ್ತಾಯದಂತೆ ನನ್ನ ತಾಯಿ ಮತ್ತು ನನ್ನ ಇಬ್ಬರು ಸಹೋದರಿಯರು ಮತ್ತು ಸಹೋದರನೊಂದಿಗೆ ಶ್ಯಾಮ್ ಸಿಂಗ್ ಮನೆಗೆ ತೆರಳಿದೆವು' ಎಂದು ಬಾಲಕಿ ವಿವರಿಸಿದ್ದಾಳೆ.
ಈ ಸಂದರ್ಭದಲ್ಲಿ ನನ್ನ ಸಹೋದರಿಯರನ್ನು ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಮತ್ತು ಮತ್ತೊರ್ವ ಸಹೋದರಿಯನ್ನು ರಾಜಸ್ಥಾನದಲ್ಲಿನ ವ್ಯಕ್ತಿಗೆ ನಾಲ್ಕು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಬಾಲಕಿ ದೂರು ನೀಡಿದ್ದಾಳೆ. ಈ ದೂರು ಆಧರಿಸಿ ಕ್ರಮ ಕೈಗೊಂಡಿರುವ ಪೊಲೀಸರು ಮಹಿಳೆ ಮತ್ತು ಶ್ಯಾಮ್ ಸಿಂಗ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಗರ್ಬಾ ನೃತ್ಯಕ್ಕೆ ಹಿಂದೂಯೇತರರಿಗೆ ನಿರ್ಬಂಧ ಇದ್ದರೂ ಭಾಗಿ: ಮೂವರನ್ನು ಹಿಡಿದು ಥಳಿಸಿದ ಬಜರಂಗ ದಳ