ನವದೆಹಲಿ: ಆಧಾರ್ ಕುರಿತು ಮೂಡೀಸ್ ಎತ್ತಿದ್ದ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ನೇರವಾಗಿ ತಿರಸ್ಕರಿಸಿದೆ. ಇದು ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ ಎಂದು ಕೇಂದ್ರ ಹೇಳಿದೆ. ಕಳೆದ ದಶಕದಲ್ಲಿ 1 ಶತಕೋಟಿಗಿಂತ ಹೆಚ್ಚು ಭಾರತೀಯರಿಂದ ಪ್ರಮಾಣೀಕರಿಸಲ್ಪಟ್ಟಿದೆ. 100 ಶತಕೋಟಿಗೂ ಹೆಚ್ಚು ಭಾರತೀಯರು ತಮ್ಮ ನಂಬಿಕೆ ಇಟ್ಟಿದ್ದಾರೆ. ಅಲ್ಲದೇ ಹೆಚ್ಚಿನ ಭಾರತೀಯರು ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದು ವಿವರಣೆ ನೀಡಿದೆ.
ರೇಟಿಂಗ್ ಏಜೆನ್ಸಿ ಮೂಡೀಸ್ ಇನ್ವೆಸ್ಟರ್ಸ್ ಸಂಸ್ಥೆಯು ಆಧಾರ್‌ನ ಬಯೋಮೆಟ್ರಿಕ್ಸ್‌ನ ವಿಶ್ವಾಸಾರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆಧಾರ್ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ, ಹವಾಮಾನ ಬಿಸಿಯಾಗಿರುವ ಸ್ಥಳಗಳಲ್ಲಿ ಆಧಾರ್ ಬಯೋಮೆಟ್ರಿಕ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿತ್ತು. ಇದೀಗ ಈ ವರದಿ ಆಧಾರರಹಿತ ಎಂದು ಕೇಂದ್ರ ಸರ್ಕಾರದ ಐಟಿ ಸಚಿವಾಲಯ ತಿಳಿಸಿದೆ.
-
#Aadhaar, the most trusted #DigitalIdentity in the world — Moody’s Investors Service opinions baseless
— Aadhaar (@UIDAI) September 25, 2023 " class="align-text-top noRightClick twitterSection" data="
For more details please read at https://t.co/Yz2AVJIjkV@GoI_MeitY @PIB_India @_DigitalIndia @mygovindia
">#Aadhaar, the most trusted #DigitalIdentity in the world — Moody’s Investors Service opinions baseless
— Aadhaar (@UIDAI) September 25, 2023
For more details please read at https://t.co/Yz2AVJIjkV@GoI_MeitY @PIB_India @_DigitalIndia @mygovindia#Aadhaar, the most trusted #DigitalIdentity in the world — Moody’s Investors Service opinions baseless
— Aadhaar (@UIDAI) September 25, 2023
For more details please read at https://t.co/Yz2AVJIjkV@GoI_MeitY @PIB_India @_DigitalIndia @mygovindia
ಕೇಂದ್ರ ಸರ್ಕಾರದ ಪ್ರತಿಕ್ರಿಯೆ: ವರದಿಯೊಂದರಲ್ಲಿ, ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ ಆಗಿರುವ ಆಧಾರ್ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಪ್ರಸ್ತುತಪಡಿಸಿದ ಈ ವರದಿಯಲ್ಲಿ ದತ್ತಾಂಶ ಅಥವಾ ಸಂಶೋಧನೆಯನ್ನು ಉಲ್ಲೇಖಿಸಿಲ್ಲ. ಇದರ ಹೊರತಾಗಿ, ಸತ್ಯವನ್ನು ಕಂಡುಹಿಡಿಯಲು ಯಾವುದೇ ಪ್ರಯತ್ನವೂ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಧಾರ್ ಸಂಖ್ಯೆಗೆ ಸಂಬಂಧಿಸಿದಂತೆ ಈ ವರದಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ವೆಬ್‌ಸೈಟ್ ಮಾತ್ರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯು 1.2 ಶತಕೋಟಿ ಆಧಾರ್‌ಗಳ ಸಂಖ್ಯೆಯನ್ನು ತಪ್ಪಾಗಿ ನೀಡಿದೆ. ವೆಬ್‌ಸೈಟ್ ಪ್ರಮುಖವಾಗಿ ಆಧಾರ್ ಸಂಖ್ಯೆಯನ್ನು ನೀಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGS)ಗೆ ಸ್ಪಷ್ಟವಾದ ಉಲ್ಲೇಖ ಬಯೋಮೆಟ್ರಿಕ್ ತಂತ್ರಜ್ಞಾನದ ಬಳಕೆಯಿಂದಾಗಿ ಭಾರತದ ಬಿಸಿ, ತೇವಯುತ ವಾತಾವರಣದಲ್ಲಿ ಕೆಲಸಗಾರರಿಗೆ ಸೇವೆಗಳನ್ನು ನಿರಾಕರಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಡೇಟಾಬೇಸ್‌ನಲ್ಲಿ ಆಧಾರ್‌ನ ಸೀಡಿಂಗ್ ಅನ್ನು ಕಾರ್ಮಿಕರು ತಮ್ಮ ಬಯೋಮೆಟ್ರಿಕ್‌ಗಳನ್ನು ಬಳಸಿಕೊಂಡು ದೃಢೀಕರಿಸುವ ಅಗತ್ಯವಿಲ್ಲದೆಯೇ ಸೇವೆಯನ್ನು ಒದಗಿಸಲಾಗಿದೆ. ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ವೇತನವನ್ನು ಸಹ ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ವರದಿಯ ಲೇಖಕರಿಗೆ ತಿಳಿದಿಲ್ಲ. ನರೇಗಾ ಕಾರ್ಮಿಕರ ಖಾತೆಗೆ ಅವರ ಬಯೋಮೆಟ್ರಿಕ್‌ಗಳನ್ನು ಬಳಸಿಕೊಂಡು ದೃಢೀಕರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.
ಆಧಾರ್‌ಗೆ ಸಂಬಂಧಿಸಿದಂತೆ ಗೌಪ್ಯತೆ ವ್ಯವಸ್ಥೆಯ ರಚನೆ: ಆಧಾರ್ ವ್ಯವಸ್ಥೆಯಲ್ಲಿ ಭದ್ರತೆ ಮತ್ತು ಗೌಪ್ಯತೆ ಸಂಬಂಧಿತ ದೋಷಗಳಿವೆ ಎಂದು ವರದಿ ಹೇಳುತ್ತದೆ. ಸಂಸ್ಥೆ ಎತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಈ ವಿಷಯದಲ್ಲಿ ವಾಸ್ತವಿಕ ಅಂಶಗಳನ್ನು ಹಲವು ಬಾರಿ ಬಹಿರಂಗಪಡಿಸಲಾಗಿದೆ. ಇಲ್ಲಿಯವರೆಗೆ ಆಧಾರ್ ಡೇಟಾಬೇಸ್‌ನ ಯಾವುದೇ ಉಲ್ಲಂಘನೆ ವರದಿಯಾಗಿಲ್ಲ ಎಂದು ಸಂಸತ್ತಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಆಧಾರ್‌ಗೆ ಸಂಬಂಧಿಸಿದಂತೆ ಸರ್ಕಾರವು ಬಲವಾದ ಗೌಪ್ಯತೆ ವ್ಯವಸ್ಥೆಯನ್ನು ರಚಿಸಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಪುಸ್ತಕದಲ್ಲಿ ರಹಸ್ಯಗಳ ಬಹಿರಂಗ ಆರೋಪ: ಎಫ್ಐಆರ್ ರದ್ದು ಕೋರಿದ್ದ ವಿಕೆ ಸಿಂಗ್ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್