ETV Bharat / bharat

ಎಂಥಾ ಕಿರಾತಕ... 7 ಕೋಟಿ ಮೌಲ್ಯದ ಹೆರಾಯಿನ್​ ಇದ್ದ 30 ಕ್ಯಾಪ್ಸುಲ್​ ನುಂಗಿದ್ದ ಉಗಾಂಡಾ ಪ್ರಜೆ ಬಂಧನ - ಕ್ಯಾಪ್ಸುಲ್​ ಮೂಲಕ ಹೆರಾಯಿನ್​ ಸಾಗಿಸುತ್ತಿದ್ದವ ಅರೆಸ್ಟ್​

ಹೆರಾಯಿನ್​ ಹೊಂದಿದ್ದ ಕ್ಯಾಪ್ಸುಲ್​ಗಳನ್ನು ನುಂಗಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಉಗಾಂಡಾದ ಪ್ರಜೆಯನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

heroin
ಹೆರಾಯಿನ್
author img

By

Published : Feb 16, 2022, 9:07 PM IST

ನವದೆಹಲಿ: ಹೆರಾಯಿನ್​ ಹೊಂದಿದ್ದ ಕ್ಯಾಪ್ಸುಲ್​ಗಳನ್ನು ನುಂಗಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಉಗಾಂಡಾದ ಪ್ರಜೆಯನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಯನ್ನು ರಾಬರ್ಟ್ ಸೆಂಗೊಂಜಿ ಎಂದು ಗುರುತಿಸಲಾಗಿದೆ. ರಾಬರ್ಟ್​ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದಾಗ 30 ಕ್ಯಾಪ್ಸುಲ್​ಗಳನ್ನು ನುಂಗಿದ್ದ ಬಗ್ಗೆ ಗೊತ್ತಾಗಿದೆ.

ಬಳಿಕ 18 ಕ್ಯಾಪ್ಸುಲ್​ಗಳನ್ನು ನಿಲ್ದಾಣದಲ್ಲಿಯೇ ತೆಗೆಯಲಾಗಿದೆ. ಬಳಿಕ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಉಳಿದ ಕ್ಯಾಪ್ಸುಲ್​ಗಳನ್ನು ಹೊರ ತೆಗೆಯಲಾಗಿದೆ. 30 ಕ್ಯಾಪ್ಸುಲ್​ಗಳಿಂದ 380 ಗ್ರಾಂ ಹೆರಾಯಿನ್​ ಜಪ್ತಿ ಮಾಡಲಾಗಿದೆ. ಇದು 7 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಬರ್ಟ್​ ಸೆಂಗೋಜಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ತಿಹಾರ್​ ಜೈಲಿಗೆ ದೂಡಲಾಗಿದೆ.

ಓದಿ: ವಿವಾದ: ಗಾಂಧಿ ಟೀಕಿಸಿ, ಗೋಡ್ಸೆ ಹೀರೋ ಮಾಡಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ.. ತನಿಖೆಗೆ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.