ETV Bharat / bharat

ಚುನಾವಣಾ ಚಿಹ್ನೆ ಸ್ಥಗಿತಗೊಳಿಸಿದ ಇಸಿಐ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಠಾಕ್ರೆ - ಚುನಾವಣಾ ಆಯೋಗವು ಮಧ್ಯಂತರ ಆದೇಶ

ಚುನಾವಣಾ ಆಯೋಗವು ಮಧ್ಯಂತರ ಆದೇಶ ಹೊರಡಿಸಿದ್ದು, ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿವಸೇನೆಗೆ ಮೀಸಲಾಗಿರುವ 'ಬಿಲ್ಲು ಮತ್ತು ಬಾಣ' ಚಿಹ್ನೆ ಬಳಸಲು ಎರಡು ಗುಂಪುಗಳಿಗೂ ಅನುಮತಿ ನೀಡಬಾರದು ಎಂದು ಹೇಳಿದೆ.

Uddhav Thackeray moves Delhi HC
ಇಸಿಐ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಠಾಕ್ರೆ
author img

By

Published : Oct 10, 2022, 10:47 PM IST

ನವದೆಹಲಿ: ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರದ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅಕ್ಟೋಬರ್ 8 ರಂದು ಭಾರತೀಯ ಚುನಾವಣಾ ಆಯೋಗವು ಶಿವಸೇನಾ ರಾಜಕೀಯ ಪಕ್ಷದ ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸಲು ನಿರ್ದೇಶನ ಕೋರಿ ಉದ್ಧವ್ ಠಾಕ್ರೆ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರ ಉದ್ಧವ್ ಪ್ರಸ್ತಾಪಿಸಿದ ಚಿಹ್ನೆಯನ್ನು ಇಸಿಐ ಸೂಚಿಸಿದ ಉಚಿತ ಚಿಹ್ನೆಗಳ ಪಟ್ಟಿಯಿಂದ ಚಿಹ್ನೆ ಆಯ್ಕೆಯನ್ನು ನಿರ್ಬಂಧಿಸದೇ ಪರಿಗಣಿಸಲು ಮತ್ತು ಹಂಚಿಕೆ ಮಾಡುವಂತೆ ನಿರ್ದೇಶನಗಳನ್ನು ನೀಡಲು ಅರ್ಜಿಯಲ್ಲಿ ಕೋರಲಾಗಿದೆ.

ಚುನಾವಣಾ ಆಯೋಗವು ಶಿಂಧೆ ಬಣ ಮತ್ತು ಠಾಕ್ರೆ ಬಣಕ್ಕೆ ಪತ್ರ ಬರೆದಿದ್ದು, ಶಿಂಧೆ ಬಣಕ್ಕೆ 'ಬಾಳಾಸಾಹೆಬಂಚಿ ಶಿವಸೇನೆ' ಮತ್ತು ಉದ್ಧವ್​ ಠಾಕ್ರೆ ಬಣಕ್ಕೆ 'ಶಿವಸೇನೆ' ಎಂದು ಹೆಸರುಗಳನ್ನು ಸೂಚಿಸಿದೆ. 'ತ್ರಿಶೂಲ್', 'ರೈಸಿಂಗ್ ಸನ್' ಮತ್ತು 'ಗದಾ' ಮುಕ್ತ ಚಿಹ್ನೆಗಳ ಪಟ್ಟಿಯಲ್ಲಿಲ್ಲದ ಕಾರಣ ಅವುಗಳನ್ನು ಚಿಹ್ನೆಗಳಾಗಿ ನೀಡಲು ನಿರಾಕರಿಸಿದೆ.

ನಾಳೆ ಅಕ್ಟೋಬರ್ 11 ರೊಳಗೆ 3 ಹೊಸ ಚಿಹ್ನೆಗಳ ಪಟ್ಟಿಯನ್ನು ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ಹೇಳಿದೆ. ಅಂತಿಮ ಆದೇಶ ಜಾರಿಯಾಗುವವರೆಗೆ ಪ್ರಸ್ತುತ ಉಪಚುನಾವಣೆಯಲ್ಲಿ ಠಾಕ್ರೆ ಬಣದ ಅಭ್ಯರ್ಥಿಗಳ ಚಿಹ್ನೆಯಾಗಿ 'ಜ್ವಾಲೆಯ ಜ್ಯೋತಿ'ಯನ್ನು ಬಳಸುವಂತೆ ಘೋಷಿಸಿದೆ.

ಭಾರತೀಯ ಚುನಾವಣಾ ಆಯೋಗವು (ಇಸಿಐ) ಶಿವಸೇನೆಯ ಚುನಾವಣಾ ಚಿಹ್ನೆಯಾದ 'ಬಿಲ್ಲು ಮತ್ತು ಬಾಣ'ವನ್ನು ಸ್ಥಗಿತಗೊಳಿಸಿದ ನಂತರ, ಉದ್ಧವ್ ಠಾಕ್ರೆ ಬಣವು 'ತ್ರಿಶೂಲ್', 'ಮಶಾಲ್' ಮತ್ತು 'ರೈಸಿಂಗ್ ಸನ್' ಚಿಹ್ನೆಗಳನ್ನು ಇಸಿಐಗೆ ತಮ್ಮ ಆಯ್ಕೆಯಾಗಿ ಸಲ್ಲಿಸಿದೆ.

ಅರ್ಜಿಯಲ್ಲಿ ಮಹಾರಾಷ್ಟ್ರದ 166-ಅಂಧೇರಿ ಪೂರ್ವ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಅ. 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಹಾಗೂ ನ. 3 ಚುನಾವಣೆ ದಿನಾಂಕವಾಗಿರುವುದರಿಂದ ಆಕ್ಷೇಪಾರ್ಹ ಆದೇಶವನ್ನು ತಡೆಹಿಡಿಯದಿದ್ದಲ್ಲಿ ಅರ್ಜಿದಾರರಿಗೆ ಮತ್ತು ಅವರ ಪಕ್ಷಕ್ಕೆ ತೀವ್ರ ಪೂರ್ವಾಗ್ರಹ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಭಾರತದ ಚುನಾವಣಾ ಆಯೋಗ ದೋಷಾರೋಪಣೆಯ ಆದೇಶದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 8 ರವರೆಗೆ ಬಹುಮತ ಮತ್ತು ಪಕ್ಷದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪುಗಳು ಸ್ಥಾಪಿಸಿದ ಹಕ್ಕುಗಳ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬುದನ್ನು ಪರಿಗಣಿಸಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೋರ್ಟ್​​​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಶಿವಸೇನೆ ಏನು ಹೇಳಿದೆ?: ಅಂಧೇರಿ ಪೂರ್ವ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾದ ಕಾರಣ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥರಾವ್ ಸಂಭಾಜಿ ಶಿಂಧೆ ಅಥವಾ ಅವರ ಗುಂಪು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಪಕ್ಷದ ಚಿಹ್ನೆಯನ್ನು ಫ್ರೀಜ್ ಮಾಡುವ ಮೂಲಕ ಅರ್ಜಿದಾರರು ಹೆಸರು ಮತ್ತು ಚಿಹ್ನೆಯ ಬಳಕೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಯಥಾಸ್ಥಿತಿ ಬದಲಾಯಿಸಲು ಇಸಿಐಗೆ ಯಾವುದೇ ಕಾರಣವಿಲ್ಲ ಎಂಬುದನ್ನೂ ಹೇಳಲಾಗಿದೆ.

ಗಮನಾರ್ಹವೆಂದರೆ, ಅಂಧೇರಿ ಪೂರ್ವದ ಉಪಚುನಾವಣೆಯಲ್ಲಿ ಶಿವಸೇನೆಗೆ ಮೀಸಲಾದ "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ಬಳಸಲು ಎರಡು ಗುಂಪುಗಳಿಗೆ ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗ ಮಧ್ಯಂತರ ಆದೇಶ ಹೊರಡಿಸಿದೆ.

ಉದ್ಧವ್ ಠಾಕ್ರೆ ಪಾಳಯ ಮತ್ತು ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಪಾಳಯ ನಡುವೆ ನಡೆಯುತ್ತಿರುವ ಚಿಹ್ನೆ ಯುದ್ಧದ ನಡುವೆ ಆಯೋಗದ ತೀರ್ಪು ಬಂದಿದೆ.

ಇದನ್ನೂ ಓದಿ: ಅಂಧೇರಿ ಈಸ್ಟ್​ ಉಪಚುನಾವಣೆ: ಶಿವಸೇನೆ ಪಕ್ಷದ ಚಿನ್ಹೆ ಹೆಸರು ಬಳಕೆ ಸ್ಥಗಿತ ಮಾಡಿ ಚುನಾವಣಾ ಆಯೋಗ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.