ETV Bharat / bharat

ಶಿವಸೇನೆ, ಠಾಕ್ರೆ ಹೆಸರು ಬಳಸದೇ ಚುನಾವಣೆ ಎದುರಿಸಿ : ರೆಬೆಲ್ಸ್​ಗೆ ಉದ್ಧವ್​ ಸವಾಲು - win elections sans Sena and Thackeray name

ನನ್ನ ಬಳಿಯಿದ್ದ ನಗರಾಭಿವೃದ್ಧಿ ಖಾತೆಯನ್ನು ನಾನು ಶಿಂಧೆ ಅವರಿಗೆ ಹಂಚಿಕೆ ಮಾಡಿದ್ದೆ. ಶಿಂಧೆ ಮಗ ಶಿವಸೇನೆಯಿಂದ ಎರಡು ಬಾರಿ ಸಂಸದರಾಗಿದ್ದಾರೆ. ಈಗ ನನ್ನ ಮಗನ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ನನ್ನ ವಿರುದ್ಧವೂ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ​ ವಾಗ್ದಾಳಿ ನಡೆಸಿದ್ದಾರೆ..

uddhav-dares-rebels-to-win-elections-sans-sena-thackeray-name
ಶಿವಸೇನೆ, ಠಾಕ್ರೆ ಹೆಸರು ಬಳಸದೇ ಚುನಾವಣೆ ಎದುರಿಸಿ: ರೆಬೆಲ್ಸ್​ಗೆ ಉದ್ಧವ್​ ಸವಾಲು
author img

By

Published : Jun 24, 2022, 7:43 PM IST

ಮುಂಬೈ(ಮಹಾರಾಷ್ಟ್ರ) : ಮಹಾರಾಷ್ಟ್ರದ ಶಿವಸೇನೆಯ ಬಣ ಜಗಳ ತಾರಕಕ್ಕೇರಿದೆ. ಶಿವಸೇನೆಯ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧವೇ ತಮ್ಮದೇ ಪಕ್ಷದ ಶಾಸಕರು ಬಂಡಾಯವೆದ್ದು ಪ್ರತ್ಯೇಕವಾದ ಗುಂಪು ಕಟ್ಟಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಎರಡು ಬಣಗಳ ನಡುವೆ ದಿನವೂ ಮಾತಿನ ದಾಳಿ-ಪ್ರತಿದಾಳಿ ನಡೆಯುತ್ತಿದೆ.

ಈ ನಡುವೆ ಉದ್ಧವ್​ ಠಾಕ್ರೆ ರೆಬೆಲ್ಸ್​ಗೆ ಮತ್ತೊಂದು ಕೌಂಟರ್​ ಕೊಟ್ಟಿದ್ದು, ಶಿವಸೇನೆ ಮತ್ತು ಠಾಕ್ರೆ ಹೆಸರು ಬಳಸದೇ ಚುನಾವಣೆಯಲ್ಲಿ ಗೆದ್ದು ಬನ್ನಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಪ್ರಮುಖ ಮುಖಂಡ ಏಕನಾಥ ಶಿಂಧೆ ನೇತೃತ್ವದಲ್ಲಿ ಶಾಸಕರು ಬಂಡಾಯ ಸಾರಿದ ಕಾರಣದಿಂದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಕೂಟದ ಮಹಾವಿಕಾಸ್​ ಆಘಾಡಿ ಸರ್ಕಾರಕ್ಕೆ ಕುತ್ತು ಬಂದಿದೆ.

ಜೊತೆಗೆ ಸಿಎಂ ಉದ್ಧವ್​ ಠಾಕ್ರೆ ನಾಯಕತ್ವದ ವಿರುದ್ಧವೇ ಶಾಸಕರು ತಿರುಗಿ ಬಿದ್ದಿದ್ದಾರೆ. ಆದರೆ, ಇದಕ್ಕೆ ಮಣಿಯದ ಉದ್ಧವ್​, ಮಹಾವಿಕಾಸ್​ ಆಘಾಡಿ ಸರ್ಕಾರದ ಉಳಿವಿಗಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಇಂದು ಶಿವಸೇನೆಯ ಜಿಲ್ಲಾ ಅಧ್ಯಕ್ಷರು ಮತ್ತು ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್, ಬಂಡಾಯ ನಾಯಕ ಏಕನಾಥ ಶಿಂಧೆ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ಶಿಂಧೆಗಾಗಿ ಎಲ್ಲವನ್ನೂ ಮಾಡಿದ್ದೇನೆ. ನನ್ನ ಬಳಿಯಿದ್ದ ನಗರಾಭಿವೃದ್ಧಿ ಖಾತೆಯನ್ನು ನಾನು ಶಿಂಧೆ ಅವರಿಗೆ ಹಂಚಿಕೆ ಮಾಡಿದ್ದೆ. ಶಿಂಧೆ ಮಗ (ಡಾ.ಶ್ರೀಕಾಂತ್ ಶಿಂಧೆ) ಶಿವಸೇನೆಯಿಂದ ಎರಡು ಬಾರಿ ಸಂಸದರಾಗಿದ್ದಾರೆ. ಈಗ ನನ್ನ ಮಗನ (ಆದಿತ್ಯ ಠಾಕ್ರೆ) ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ನನ್ನ ವಿರುದ್ಧವೂ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉದ್ಧವ್​ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ, ಶಿವಸೇನೆ ಮತ್ತು ಅದರ ಸಂಸ್ಥಾಪಕರಾದ ಬಾಳಾಸಾಹೇಬ್​ ಠಾಕ್ರೆ ಅವರ ಹೆಸರು ಬಳಸದೇ ಚುನಾವಣೆಗಳನ್ನು ಎದುರಿಸಿ ಗೆದ್ದು ಬರಲಿ ಎಂದು ಸವಾಲು ಹಾಕಿರುವ ಅವರು, ತಮಗೆ ಅಧಿಕಾರದ ಆಸೆ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಶಿವಸೇನೆ ತೊರೆಯುವುದಕ್ಕಿಂತ ಪ್ರಾಣ ಕೊಡುತ್ತೇವೆ ಎಂದು ಹೇಳುತ್ತಿದ್ದವರು, ಈಗ ಇಲ್ಲಿಂದ ಪಲಾಯನ ಮಾಡಿದ್ದಾರೆ.

ಬಂಡಾಯ ನಾಯಕರು ಪಕ್ಷವನ್ನು ನಾಶಮಾಡಲು ಬಯಸುತ್ತಿದ್ದಾರೆ.. ನಾನು ಸಿಎಂ ಆಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಈಗಾಗಲೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷಾ ತೊರೆದಿದ್ದೇನೆ. ಆದರೆ, ನನ್ನ ಹೋರಾಟದ ದೃಢಸಂಕಲ್ಪ ಅಚಲವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಪಕ್ಷದಲ್ಲಿರುವ ಯಾರಾದರೂ ಬಿಡಲು ಸ್ವತಂತ್ರರು. ಬಿಟ್ಟು ಹೋದವರು ಸಂಸದರನ್ನು ಅಥವಾ ಇತರರನ್ನು ತೆಗೆದುಕೊಂಡು ಹೋಗಬಹುದು. ಆದರೆ, ಪಕ್ಷದ ಬೇರುಗಳು ಗಟ್ಟಿಯಾಗಿವೆ. ಅವುಗಳಿಗೆ ಯಾರೂ ಕೂಡ ಏನೂ ಮಾಡಲು ಆಗುವುದಿಲ್ಲ. ಅವು ಗಟ್ಟಿಯಾಗಿಯೇ ಉಳಿಯಲಿವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಸರ್ಕಾರ ಪತನ ಭೀತಿ ಬೆನ್ನಲ್ಲೇ ಸಾವಿರಾರು ಕೋಟಿ ಯೋಜನೆಗಳಿಗೆ ಮಂಜೂರಾತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.