ಉದಯಪುರ: ಧಾರ್ಮಿಕ ಮತಾಂಧರಿಂದ ಕೊಲೆಗೀಡಾದ ಇಲ್ಲಿನ ಟೇಲರ್ ಕನ್ಹಯ್ಯಾಲಾಲ್ ಶವದ ಪೋಸ್ಟ್ ಮಾರ್ಟಂ ಎಂಬಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಪ್ರಕರಣದ ಗಂಭೀರತೆಯನ್ನು ಅರಿತು ಶವಾಗಾರದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೋಸ್ಟ್ಮಾರ್ಟಂ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಪಾರ್ಥಿವ ಶರೀರವನ್ನು ಅವರ ಸ್ವಂತ ಊರಿಗೆ ರವಾನಿಸಲಾಗಿದ್ದು, ಅಲ್ಲಿಗೆ ಆಗಲೇ ತಲುಪಿದೆ.
-
#WATCH | Rajasthan: Mortal remains of Kanhaiya Lal, who was killed yesterday by two men in Udaipur's Maldas street area, reach his native place in Udaipur pic.twitter.com/O7YYph9YK6
— ANI MP/CG/Rajasthan (@ANI_MP_CG_RJ) June 29, 2022 " class="align-text-top noRightClick twitterSection" data="
">#WATCH | Rajasthan: Mortal remains of Kanhaiya Lal, who was killed yesterday by two men in Udaipur's Maldas street area, reach his native place in Udaipur pic.twitter.com/O7YYph9YK6
— ANI MP/CG/Rajasthan (@ANI_MP_CG_RJ) June 29, 2022#WATCH | Rajasthan: Mortal remains of Kanhaiya Lal, who was killed yesterday by two men in Udaipur's Maldas street area, reach his native place in Udaipur pic.twitter.com/O7YYph9YK6
— ANI MP/CG/Rajasthan (@ANI_MP_CG_RJ) June 29, 2022
ಕನ್ಹಯ್ಯಾಲಾಲ್ ಅವರನ್ನು ಅವರ ಅಂಗಡಿಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸದ್ಯ ಎನ್ಐಎ ಹಾಗೂ ಎಸ್ಐಟಿ ತಂಡಗಳು ಪ್ರಕರಣದ ತೀವ್ರ ತನಿಖೆ ನಡೆಸುತ್ತಿವೆ. ಇಬ್ಬರು ಕೊಲೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಪ್ರದೇಶದಲ್ಲಿ ಭಾರಿ ಆತಂಕದ ವಾತಾವರಣವಿದ್ದು, ಸಂಪೂರ್ಣ ರಾಜಸ್ಥಾನದಲ್ಲಿ ಇಂಟರನೆಟ್ ಬಂದ್ ಮಾಡಲಾಗಿದೆ ಹಾಗೂ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆಳೆಯುವೆ ಎಂದ ಬಿಜೆಪಿ ನಾಯಕ ಕಟಾರಿಯಾ: ಬಿಜೆಪಿ ಮುಖಂಡ ಗುಲಾಬ್ ಚಂದ್ ಕಟಾರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ರಾಜಸ್ಥಾನದಲ್ಲಿ ಇದು ಇಂತಹ 5ನೇ ಘಟನೆಯಾಗಿದೆ. ಒಂದು ರೀತಿಯಲ್ಲಿ ಕೊಲೆಗಳ ಸರಣಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಇಲ್ಲಿನ ಎಸ್ಪಿಗೆ ಪ್ರಕರಣದ ಗಂಭೀರತೆ ಅರಿವಾಗಬೇಕಿತ್ತು. ಎಎಸ್ಐ ಒಬ್ಬರನ್ನು ಸಸ್ಪೆಂಡ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಹೇಗೆ ಕೊಲೆ ಮಾಡಲಾಯಿತು ಮತ್ತು ಕೊಲೆಯ ವಿಡಿಯೋವನ್ನು ಹೇಗೆ ವೈರಲ್ ಮಾಡಲಾಯಿತು ಎಂಬುದನ್ನು ನೋಡಿದರೆ ತಾಲಿಬಾನಿ ಸ್ವಭಾವದ ಜನ ತಮ್ಮ ವಿಚಾರವನ್ನು ಜನರಿಗೆ ತಿಳಿಸಲು ಇದನ್ನೆಲ್ಲ ಮಾಡಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕಟಾರಿಯಾ ಆರೋಪಿಸಿದರು.
ಜಗನ್ನಾಥ್ ಯಾತ್ರೆಯ ಬಗ್ಗೆ ಹುಷಾರು: ಘಟನೆಯ ವಿಡಿಯೋ ನೋಡಿ ಮೈಮೇಲೆ ಮುಳ್ಳು ಬಂದವು. ಜುಲೈ 1 ರಂದು ಜಗನ್ನಾಥ್ ಯಾತ್ರೆ ನಡೆದೇ ನಡೆಯುತ್ತದೆ. ಸರ್ಕಾರ ಏನಾದರೂ ಮಾಡಿಕೊಳ್ಳಲಿ, ಯಾತ್ರೆಯನ್ನು ತಡೆದು ನೋಡಲಿ ಎಂದು ಕಟಾರಿಯಾ ಸವಾಲು ಹಾಕಿದರು.
-
Statement of Spiritual Head of Ajmer Dargah . #Udaipur pic.twitter.com/CzeWeYsvTY
— Dargah Dewan Ajmer (@DargahDiwan) June 28, 2022 " class="align-text-top noRightClick twitterSection" data="
">Statement of Spiritual Head of Ajmer Dargah . #Udaipur pic.twitter.com/CzeWeYsvTY
— Dargah Dewan Ajmer (@DargahDiwan) June 28, 2022Statement of Spiritual Head of Ajmer Dargah . #Udaipur pic.twitter.com/CzeWeYsvTY
— Dargah Dewan Ajmer (@DargahDiwan) June 28, 2022
ದೇಶದಲ್ಲಿ ತಾಲಿಬಾನಿ ಸಂಸ್ಕೃತಿ ಬರಲು ಬಿಡಲ್ಲ: ಅಜ್ಮೇರ್ ದರ್ಗಾದ ದಿವಾನ್ ಸೈಯ್ಯದ್ ಜೈನುಲ್ ಅಬೆದಿನ್ ಅಲಿ ಖಾನ್ ಉದಯಪುರ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಯಾವ ಧರ್ಮವೂ ಮನುಷ್ಯತ್ವದ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಲ್ಲ.
ದೇಶದಲ್ಲಿ ತಾಲಿಬಾನಿ ಸಂಸ್ಕೃತಿ ಬರಲು ನಾವು ಬಿಡಲ್ಲ. ಇಂಥ ಕೆಲಸ ಮಾಡುವವರಿಂದ ಇಸ್ಲಾಂ ಗೆ ಕೆಟ್ಟ ಹೆಸರು ಬರುತ್ತದೆ. ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ. ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಅವರು ಹೇಳಿದ್ದಾರೆ.