ETV Bharat / bharat

ನುಡಿದಂತೆ ನಡೆದ ಗೆಹ್ಲೋಟ್​​​​ ಸರ್ಕಾರ... ಮೃತ ಟೇಲರ್​ ಕನ್ಹಯ್ಯಾಲಾಲ್ ಇಬ್ಬರು ಪುತ್ರರಿಗೆ ಸರ್ಕಾರಿ ನೌಕರಿ! - ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್

ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್ ಅವರ ಇಬ್ಬರು ಪುತ್ರರಿಗೆ ರಾಜಸ್ಥಾನ ಸರ್ಕಾರ ಸರ್ಕಾರಿ ನೌಕರಿ ನೀಡಿದ್ದು, ಇಂದು ಕೆಲಸಕ್ಕೆ ಹಾಜರಾಗಿದ್ದಾರೆ.

Udaipur Brutal Murder
Udaipur Brutal Murder
author img

By

Published : Jul 22, 2022, 7:41 PM IST

ಉದಯಪುರ(ರಾಜಸ್ಥಾನ): ಧಾರ್ಮಿಕ ಮತಾಂಧರಿಂದ ಕೊಲೆಗೀಡಾದ ಟೇಲರ್ ಕನ್ಹಯ್ಯಾಲಾಲ್ ಮಕ್ಕಳು ಇಂದು ಸರ್ಕಾರಿ ನೌಕರಿಗೆ ಹಾಜರಾದರು. ಜೂನಿಯರ್​​ ಅಸಿಸ್ಟೆಂಟ್​ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದ್ದು, ಕೆಲಸಕ್ಕೆ ಹೋಗುವ ಮೊದಲು ತಾಯಿಯ ಆಶೀರ್ವಾದ ಪಡೆದುಕೊಂಡರು.

ಜೂನ್​​ 28ರಂದು ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಕನ್ಹಯ್ಯಲಾಲ್​ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಇದರ ಬೆನ್ನಲ್ಲೇ ಗೆಹ್ಲೊಟ್​​ ಸರ್ಕಾರ ಕನ್ಹಯ್ಯಾಲಾಲ್​ ಕುಟುಂಬಕ್ಕೆ ಆರ್ಥಿಕ ನೆರವು ಘೋಷಣೆ ಮಾಡಿತ್ತು.

ಜೊತೆಗೆ ಇಬ್ಬರು ಮಕ್ಕಳಿಗೆ ಸರ್ಕಾರಿ ನೌಕರಿ ನೀಡುವುದಾಗಿ ತಿಳಿಸಿತ್ತು. ಅದರಂತೆ ಇದೀಗ ಯಶ್​ ಹಾಗೂ ತರುಣ್​​ ಕಿರಿಯ ಸಹಾಯಕ ಉದ್ಯೋಗ ನೀಡಿದೆ. ಇಬ್ಬರು ಇಂದು ನೌಕರಿಗೆ ಹಾಜರಾಗಿದ್ದು, ತಂದೆಯ ಪೋಟೋಗೆ ನಮಸ್ಕರಿಸಿದರು.

ಇದನ್ನೂ ಓದಿರಿ: 'ಇವತ್ತು ನನ್ನ ಗಂಡ, ನಾಳೆ ಇನ್ಯಾರನ್ನೋ ಕೊಲ್ಲುವರು, ಹಂತಕರನ್ನು ಗಲ್ಲಿಗೇರಿಸಿ': ಕನ್ಹಯ್ಯಲಾಲ್ ಪತ್ನಿ

ಈ ವೇಳೆ ಈಟಿವಿ ಭಾರತ ಜೊತೆ ತಮ್ಮ ಮನದಾಳ ಹಂಚಿಕೊಂಡರು. ತಂದೆಯ ನಿರ್ಗಮನದ ಬಳಿಕ ನಮ್ಮ ಹೆಗಲಿಗೆ ಹೊಸ ಜವಾಬ್ದಾರಿ ಬಂದಿದೆ. ತಾಯಿ ಆಶೀರ್ವಾದ ನೀಡಿದ್ದಾರೆ. ತಂದೆಯ ಅಗಲಿಕೆಯಿಂದ ಜೀವನ ಶೂನ್ಯ ಎಂದು ಅನಿಸಲು ಶುರುವಾಗಿದೆ.

ಆದರೆ, ಇದೀಗ ಹೊಸ ಜವಾಬ್ದಾರಿ ಹೆಗಲೇರಿದೆ. ನಮ್ಮ ಮೇಲೆ ನಂಬಿಕೆ ಇಟ್ಟು ಸರ್ಕಾರ ನೀಡಿರುವ ಕೆಲಸವನ್ನ ಶ್ರದ್ಧೆಯಿಂದ ಮಾಡುತ್ತೇವೆ ಎಂದರು.ಇದೇ ವೇಳೆ ಯಶ್ ಮಾತನಾಡಿದ್ದು, ರಾಜ್ಯ ಸರ್ಕಾರ ಕಿರಿಯ ಸಹಾಯಕ ಹುದ್ದೆ ನೀಡಿದೆ. ಕೆಲಸ ಮಾಡುತ್ತ ಇದೀಗ ಯುಪಿಎಸ್​​ಗೆ ತಯಾರಿ ನಡೆಸುತ್ತೇನೆ ಎಂದರು.

ನಮ್ಮ ತಂದೆ ಕನ್ಹಯ್ಯಾಲಾಲ್​​ ಹಂತಕರಿಗೆ ಮರಣದಂಡನೆ ವಿಧಿಸಬೇಕು ಎಂದು ಮನವಿ ಮಾಡಿಕೊಂಡಿರುವ ಅವರು, ಈ ಷಡ್ಯಂತ್ರದಲ್ಲಿ ಅನೇಕರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.