ಸಂಗ್ರೂರು, ಪಂಜಾಬ್: 2016ರ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲೆಯ ಮುಖ್ಯಮಂತ್ರಿ ಭಗವಂತಮಾನ್ ಅವರ ನಿವಾಸದ ಎದುರು ಕಳೆದ ಮೂರು ತಿಂಗಳಿಂದ ಯುವಕ - ಯುವತಿಯರು ನಡೆಸುತ್ತಿರುವ ಧರಣಿ ತೀವ್ರ ಸ್ವರೂಪಕ್ಕೆ ತಿರುಗಿದೆ.
ನಿನ್ನೆ ರಾತ್ರಿ ಪ್ರತಿಭಟನೆಯಲ್ಲಿ ಕುಳಿತಿದ್ದ ಇಬ್ಬರು ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುರ್ದೀಪ್ ಸಿಂಗ್ ಎಂಬ ಯುವಕ ಮೊದಲು ಮರ ಏರಿ ವಿದ್ಯುತ್ ಕೇಬಲ್ ಅನ್ನು ಹಿಡಿದಿದ್ದರು. ಆದರೆ, ಅದರಲ್ಲಿ ಕರೆಂಟ್ ಇಲ್ಲದ ಕಾರಣ ಬದುಕುಳಿದರು. ನಂತರ ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ.
ಗುರ್ಜಿತ್ ಸಿಂಗ್ ಎಂಬ ಇನ್ನೊಬ್ಬ ಯುವಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಅವರಿಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಯುವಕರು ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಓದಿ: ಜಿಎಸ್‌ಟಿ ಏರಿಕೆಗೆ ವಿರೋಧ: ಬೆಂಗಳೂರಿನಲ್ಲಿ ಮರ್ಚೆಂಟ್ ಅಸೋಸಿಯೇಷನ್ನಿಂದ ಪ್ರತಿಭಟನೆ
ಪಂಜಾಬ್ ಸರ್ಕಾರವು ಈ ಕೂಡಲೇ ನಮಗೆ ನೇಮಕಾತಿ ಪತ್ರಗಳನ್ನು ನೀಡಲು ವಿಫಲವಾದರೆ ನಾವು ನಮ್ಮ ಪ್ರತಿಭಟನೆ ತೀವ್ರಗೊಳಿಸುತ್ತೇವೆ. ನಾವೆಲ್ಲರೂ 2016 ರಲ್ಲಿ ಎಲ್ಲಾ ಕಡ್ಡಾಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದೇವೆ.
ಅಷ್ಟೇ ಅಲ್ಲ 2017 ರಲ್ಲಿ ವೆರಿಫಿಕೇಶನ್ ಸಹ ಮಾಡಲಾಗಿದೆ. ಆದ್ರೂ ಸಹಿತ ನಮಗೆ ನೇಮಕಾತಿ ಪತ್ರ ನೀಡಲಿಲ್ಲ. ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಸಾವಿರಾರು ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ.
ಆದರೆ ಸರ್ಕಾರ ನಮ್ಮನ್ನು ಸೇರಲು ಬಿಡುತ್ತಿಲ್ಲ. ತಮ್ಮ ಬೇಡಿಕೆ ಈಡೇರಿಸಲು ಅಧಿಕಾರಿಗಳು ವಿಫಲವಾದಲ್ಲಿ ಕೀಟನಾಶಕ ಸೇವಿಸುವುದಾಗಿ ಪ್ರತಿಭಟನಾ ನಿರತ ಯುವಕರ ಮಾತಾಗಿದೆ. ಇನ್ನು ಇವರ ಪ್ರತಿಭಟನೆ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡ್ಬೇಕಾಗಿದೆ.