ETV Bharat / bharat

ತರಕಾರಿ ಮಾರುಕಟ್ಟೆಯಲ್ಲಿ ತಂದೆಗೆ ಕ್ರಿಯಾ ಕರ್ಮ ಮಾಡಿದ ಹೆಣ್ಮಕ್ಕಳು!

ರಾಯ್‌ಪುರದಲ್ಲಿ ಕೋವಿಡ್‌ನಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗಿರುವುದರಿಂದ, ವಿಮೋಚನೆ ನೀಡುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ನವಾಪರದಲ್ಲಿ, ಮಹಾನದಿ ನದಿಯ ದಡದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಹತ್ತಿರದ ತರಕಾರಿ ಮಾರುಕಟ್ಟೆಯ ವೇದಿಕೆಗಳನ್ನು ಕ್ರಿಯಾ ಕರ್ಮ ಆಚರಣೆಗಳಿಗಾಗಿ ಮೀಸಲಿಡಲಾಗಿದೆ.

two-young-girls-offer-a-libation-in-chhattisgarhs-vegetable-market
ತರಕಾರಿ ಮಾರುಕಟ್ಟೆಯಲ್ಲಿ ತಂದೆಗೆ ಕ್ರಿಯಾ ಕರ್ಮ ಮಾಡಿದ ಹೆಣ್ಮಕ್ಕಳು!
author img

By

Published : Apr 20, 2021, 4:50 PM IST

Updated : Apr 20, 2021, 7:29 PM IST

ರಾಯ್‌ಪುರ (ಛತ್ತೀಸ್​ಗಢ): ಕ್ರಿಯಾ ಕರ್ಮ ಮಾಡಲು ನವಾಪರದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಪಡಿಸಿದ್ದ ವೇದಿಕೆಯಲ್ಲಿ ಇಬ್ಬರು ಪುತ್ರಿಯರು ಸಾವಿಗೀಡಾದ ತಮ್ಮ ತಂದೆಯ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ. ಇವರ ಈ ದೃಶ್ಯವು ಜನರನ್ನು ಭಾವುಕರನ್ನಾಗಿ ಮಾಡಿದೆ.

ಏಪ್ರಿಲ್ 9 ರಂದು ನಿಧನರಾದ ತಮ್ಮ ತಂದೆಗೆ 14 ಮತ್ತು 19 ವರ್ಷ ವಯಸ್ಸಿನ ಇಬ್ಬರು ಹೆಣ್ಮಕ್ಕಳು ಪಿಂಡ ಪ್ರದಾನ ಕಾರ್ಯ ನೆರವೇರಿಸಿದ್ದಾರೆ. ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದ ಕಾರಣ ತಂದೆಯ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಈ ಇಬ್ಬರ ಹೆಗಲ ಮೇಲೆ ಬಿದ್ದಿತ್ತು.

ಕೊರೊನಾ ಸೋಂಕು ಇದೇ ತರಹದ ಹಲವಾರು ಕುಟುಂಬಗಳನ್ನು ಅನಾಥ ಮಾಡಿದೆ. ಈ ಕಾರಣಕ್ಕಾಗಿ ನಿತ್ಯ ಜನರು ಕಳೆದುಕೊಂಡ ತಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಲು ಈ ಘಾಟ್‌ಗೆ ಆಗಮಿಸುತ್ತಿದ್ದಾರೆ. ರಾಯ್‌ಪುರದಲ್ಲಿ ಕೊರೊನಾ ವೈರಸ್‌ನಿಂದ ಇದುವರೆಗೆ 1,632 ಜನರು ಸಾವಿಗೀಡಾಗಿದ್ದಾರೆ.

Last Updated : Apr 20, 2021, 7:29 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.