ವಿಜಯವಾಡ(ಆಂಧ್ರಪ್ರದೇಶ): ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವೇಮುಲವಾಡ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ತಿಂಗಳ ಹಿಂದೆ ವೇಮುಲಮಾಡ ಗ್ರಾಮದಲ್ಲಿ ಕಮಲಾ ಮತ್ತು ನಾಗಮಣಿ ಎಂಬುವರಿಗೆ ಬೆಕ್ಕು ಕಚ್ಚಿತ್ತು. ಆ ನಂತರ ವೈದ್ಯರ ಸಲಹೆ ಮೇರೆಗೆ ಇಬ್ಬರೂ ಟಿಟಿ ಚುಚ್ಚುಮದ್ದು ತೆಗೆದುಕೊಂಡಿದ್ದರು.
ಆದರೆ ಮಾ.4 ರಂದು ಆರೋಗ್ಯ ಸಮಸ್ಯೆಯಿಂದಾಗಿ ಕಮಲಾ ಅವರನ್ನು ಮಂಗಳಗಿರಿಯ ಎನ್‌ಆರ್‌ಐ ಆಸ್ಪತ್ರೆಗೆ ಮತ್ತು ನಾಗಮಣಿ ಅವರನ್ನು ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬರಿಬ್ಬರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೆಕ್ಕು ಕಚ್ಚಿದ ನಂತರ ಈ ಮಹಿಳೆಯರಿಗೆ ರೇಬಿಸ್ ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಾಯಿ ಕಡಿತದಿಂದ ಬೆಕ್ಕು ಸಾವು: ಬೆಕ್ಕು ಕೂಡ ನಾಯಿ ಕಚ್ಚಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಕ್ಕು, ನಾಯಿ, ಇಲಿ, ಹಾವು ಕಚ್ಚಿದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ಶಿವರಾಮಕೃಷ್ಣ ರಾವ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕುರಿಗಳನ್ನು ತೊಳೆಯಲು ಹೋದ ಅಜ್ಜ- ಮೊಮ್ಮಗ ನದಿಯಲ್ಲಿ ಮುಳುಗಿ ಸಾವು