ETV Bharat / bharat

ಒಂದೇ ಶೌಚ ಕೋಣೆಯಲ್ಲಿ ಎರಡು ಕಮೋಡ್​ಗಳು! - ಕಮೋಡ್​ಗಳು

ಒಂದೇ ಶೌಚ ಕೋಣೆಯಲ್ಲಿ ಎರಡು ಕಮೋಡ್‌? ಹೀಗೂ ಉಂಟೇ?. ಇದು ತಮಿಳುನಾಡಿನ ನಂತರ ಇದೀಗ ಉತ್ತರ ಪ್ರದೇಶದ ಸರದಿ.

Etv Bharat
Etv Bharat
author img

By

Published : Jan 4, 2023, 6:23 AM IST

ಬಸ್ತಿ (ಉತ್ತರ ಪ್ರದೇಶ): ಒಂದೇ ಕೊಠಡಿಯಲ್ಲಿ ಅಡ್ಡಗೋಡೆ ಇಲ್ಲದೇ ಎರಡು ಕಮೋಡ್​ಗಳನ್ನು ಅಳವಡಿಸಿರುವ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿಂದೆ ತಮಿಳುನಾಡಿನಲ್ಲಿ ಇದೇ ರೀತಿಯ ನಿದರ್ಶನ ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಇಂಥ ದೃಶ್ಯ ನೋಡಿ ವ್ಯಕ್ತಿಯೊಬ್ಬರು ದಂಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಶೌಚ ಕೋಣೆಯಲ್ಲಿ ಎರಡು ಕಮೋಡ್​ಗಳನ್ನು ಅಳವಡಿಸಿರುವ ಎರಡು ಘಟನೆಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಕುದರಹಾ ಬ್ಲಾಕ್‌ನ ಗೌರ ಧುಂಡಾ ಗ್ರಾಮದಲ್ಲಿ ಮೊದಲಿಗೆ ಒಂದೇ ಶೌಚಾಲಯದ ಕೊಠಡಿಯಲ್ಲಿ ಎರಡು ಕಮೋಡ್​ಗಳು ಕಂಡುಬಂದಿದ್ದವು. ಇದರ ವಿಡಿಯೋ ವೈರಲ್ ಆಗಿ ನಗೆಪಾಟಲಿಗೀಡಾಗಿತ್ತು. ಅಧಿಕಾರಿಗಳು ಮತ್ತು ಕಟ್ಟಣ ನಿರ್ಮಾಣ ಮಾಡಿದವರ ಬೇಜವಾಬ್ದಾರಿತನ ಬಗ್ಗೆಯೂ ಪ್ರಶ್ನೆ ಹುಟ್ಟು ಹಾಕಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡರು. ಇಷ್ಟು ದಿನಗಳ ಕಾಲ ತಮಗೇನೂ ಗೊತ್ತಿಲ್ಲ ಎಂಬಂತಿದ್ದ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶೌಚಾಲಯ ಸರಿಪಡಿಸಿದ್ದಾರೆ. ಆದರೆ, ಒಂದೇ ಶೌಚಾಲಯ ಕೊಠಡಿಯಲ್ಲಿ ಎರಡು ಕಮೋಡ್​ಗಳನ್ನು ಅಳವಡಿಸುವ ನಿರ್ಲಕ್ಷ್ಯ ಇಲ್ಲಿಗೆ ನಿಲ್ಲಲಿಲ್ಲ.

ಇದನ್ನೂ ಓದಿ: ಒಂದೇ ಶೌಚಕೊಠಡಿಯಲ್ಲಿ ಎರಡು ಕಮೋಡ್​​.. ಬೆಚ್ಚಿಬಿದ್ದ ಸಾರ್ವಜನಿಕರು!

ಇದಾದ ನಂತರ ರುಧೌಲಿ ತೆಹಸಿಲ್‌ನ ಧನ್ಸಾ ಗ್ರಾಮದಲ್ಲಿನ ಸಮುದಾಯ ಶೌಚಾಲಯದ ವಿಷಯ ಕೂಡ ಬಯಲಿಗೆ ಬಂತು. ಇಲ್ಲಿಯೂ ಕೂಡ ಒಂದೇ ಶೌಚ ಕೋಣೆಯಲ್ಲಿ ಎರಡು ಕಮೋಡ್​ಗಳನ್ನು ಹಾಕಿ ಬೇಜವಾಬ್ದಾರಿತನ ಮೆರೆಯಲಾಗಿತ್ತು. ಇಲ್ಲಿ ಎಷ್ಟೊಂದು ನಿರ್ಲಕ್ಷ್ಯ ವಹಿಸಲಾಗಿತ್ತು ಎಂದರೆ, ಶೌಚ ಕೋಣೆಯಲ್ಲಿ ಎರಡು ಕಮೋಡ್​ಗಳನ್ನು ಅಳವಡಿಸುವುದು ಒಂದೆಡೆಯಾದರೆ ಮತ್ತೆ ಕೆಲವು ಶೌಚಾಲಯಗಳಿಗೆ ಬಾಗಿಲು ಕೂಡಾ ಇರಲಿಲ್ಲ!.

ಈ ರೀತಿಯ ಶೌಚಾಲಯವನ್ನು ಬಳಸುವುದಾದರೂ ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದ್ದಂತೆ ಮತ್ತು ಟೀಕೆ ವ್ಯಕ್ತವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತರಾತುರಿಯಲ್ಲಿ ಶೌಚಾಲಯ ಒಡೆದು ಹಾಕಿ ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸುನೀಲ್ ಆರ್ಯ ಪ್ರತಿಕ್ರಿಯಿಸಿ, 'ಈ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು.

ಇದನ್ನೂ ಓದಿ: ತಮಿಳುನಾಡಿನಲ್ಲೂ ಒಂದೇ ಶೌಚ ಕೋಣೆಯಲ್ಲಿ ಎರಡು ಕಮೋಡ್​ಗಳು

ಈ ಹಿಂದಿನ ಘಟನೆಗಳು..: ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಉದ್ಘಾಟಿಸಿರುವ ಸರ್ಕಾರಿ ಕಟ್ಟಡದಲ್ಲಿ ಒಂದೇ ಸ್ನಾನಗೃಹದಲ್ಲಿ ಎರಡು ವೆಸ್ಟರ್ನ್ ಕಮೋಡ್‌ಗಳಿದ್ದ ಫೋಟೋಗಳು ವೈರಲ್ ಆಗಿ, ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಕೊಯಮತ್ತೂರು ಕಾರ್ಪೊರೇಷನ್ ಶೌಚಾಲಯದಲ್ಲೂ ಒಂದೇ ಕೊಠಡಿಯಲ್ಲಿ ಎರಡು ಕಮೋಡ್​ಗಳನ್ನು ಹಾಕಲಾಗಿತ್ತು.

ಇದನ್ನೂ ಓದಿ: ಸಿಎಂ ಉದ್ಘಾಟಿಸಿದ ಕಟ್ಟಡದ ಒಂದೇ ಬಾತ್​ರೂಮ್​ನಲ್ಲಿ ಎರಡು ಕಮೋಡ್‌ಗಳು: ಫೋಟೋಗಳು ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.